Advertisement
ಹಲವು ಹೆಸರುಗಳ ಬಳಿಕ ಪ್ರಸ್ತುತ “ಸಾವಯವ ಸಿರಿ’ ಎಂಬ ಹೆಸರಿನಲ್ಲಿ ಯೋಜನೆ ಅನುಷ್ಠಾನದಲ್ಲಿದೆ. ಇದರಲ್ಲಿ ಯಾವುದೇ ಸಬ್ಸಿಡಿ, ಪ್ರೋತ್ಸಾಹ ಇತ್ಯಾದಿಗಳಿಲ್ಲ. ಕೇವಲ ತರಬೇತಿಗಷ್ಟೇ ಸೀಮಿತ. ಕೃಷಿ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಯೋಜನೆ ಇದು. ಇನ್ನು ತೋಟಗಾರಿಕಾ ಇಲಾಖೆಯಲ್ಲಿ ಹಿಂದೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ ಸಾವಯವ ತರಕಾರಿ ಬೆಳೆಗಳಿಗೆ ಪ್ರೋತ್ಸಾಹ, ಸಾವಯವ ತರಕಾರಿ ಬೆಳೆಯುವ ಗುಂಪುಗಳಿಗೆ ಪ್ರಮಾಣೀಕರಣಕ್ಕೆ ನೆರವು ನೀಡಲಾಗುತ್ತಿತ್ತು. ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲೂ ಅಂತಹ ಕಾರ್ಯಕ್ರಮ ನಿಂತುಹೋಗಿ ಮೂರು ವರ್ಷಗಳು ಕಳೆದಿವೆ.
ಸಾವಯವ ವಿಧಾನದಲ್ಲಿ ಕೃಷಿ ಮಾಡಿಕೊಂಡಿದ್ದ ರೈತರಲ್ಲಿ ಕೆಲವರು ಅದನ್ನು ಮುಂದುವರಿಸಿದ್ದಾರೆ, ಇನ್ನೂ ಅನೇಕರು ಅದು ಲಾಭಕರವಲ್ಲ ಎಂದು ಕೈ ಬಿಟ್ಟು ಮತ್ತೆ ರಸಗೊಬ್ಬರ ಆಧರಿತ ಕೃಷಿಗೆ ಮರಳಿದ್ದಾರೆ. “ನಾನು ಬಂದಾರು ಸಾವಯವ ಗ್ರಾಮ ಅನುಷ್ಠಾನ ಸಮಿತಿಯ ಸದಸ್ಯನಾಗಿದ್ದೆ, 60 ಮಂದಿ ಸಾವಯವ ಕೃಷಿಕರು ಹಿಂದೆ ಇದ್ದರು. ಈಗ ನಾನಂತೂ ಸಾವಯವ ವಿಧಾನದಲ್ಲೇ ಕೃಷಿ ಮುಂದುವರಿಸಿದ್ದೇನೆ’ ಎನ್ನುತ್ತಾರೆ ಕೃಷಿಕ ರಾಧಾಕೃಷ್ಣ.
Related Articles
Advertisement
ಸಾವಯವ ಸಿರಿಪ್ರಸ್ತುತ ರಾಜ್ಯದಲ್ಲಿ ಸಾವಯವ ಸಿರಿ ಎನ್ನುವ ಹೊಸ ಯೋಜನೆ ಅಸ್ತಿತ್ವಕ್ಕೆ ಬಂದಿದೆ. ಇದರಲ್ಲಿ ಕೃಷಿಕರಿಗೆ ನೇರವಾಗಿ ಸಹಾಯಧನ ನೀಡುವಂತಹ ಅಂಶಗಳಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆ ಅನುಷ್ಠಾನದ ಸಾಮಾಜಿಕ ಸಂಸ್ಥೆಯಾಗಿ ಶ್ರೀ ರಾಮ ವಿದ್ಯಾ ಕೇಂದ್ರ ಟ್ರಸ್ಟ್‌ನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಆಯ್ದ 400 ಸಾವಯವ ಆಸಕ್ತ ರೈತರಿಗೆ ಇಲ್ಲಿ ಎರಡು ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ. ಉತ್ಪನ್ನದ ಸಂಸ್ಕರಣೆ, ಮಾರುಕಟ್ಟೆ, ಎರೆಹುಳ ಗೊಬ್ಬರ ತಯಾರಿ, ಕಾಂಪೋಸ್ಟ್, ಕೊಯ್ಲೋತ್ತರ ಮೌಲ್ಯ ವರ್ಧನೆ, ಪ್ಯಾಕೇಜಿಂಗ್, ಸಾವಯವ ಪ್ರಮಾಣೀಕರಣ ಇತ್ಯಾದಿ ವಿಚಾರಗಳ ಬಗ್ಗೆ ಸೂಕ್ತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನಡೆಯುತ್ತದೆ. ತಾಲೂಕು ಮಟ್ಟದಲ್ಲಿಲ್ಲ
ಸಾವಯವ ಸಿರಿ
ತಾಲೂಕು ಮಟ್ಟದಲ್ಲಿ ಸಾವಯವ ಸಿರಿ ಅನು ಷ್ಠಾನ ಮಾಡಬೇಕಾಗಿದ್ದರೂ ಸರಕಾರಿ ಆದೇಶದಲ್ಲಿ ತಾಲೂಕು ಮಟ್ಟದ ಅನುಷ್ಠಾನ ಸಂಸ್ಥೆಗಳಿಗೆ ನೀಡ ಬಹುದಾದ, ಆರ್ಥಿಕ ಬೆಂಬಲ ನೀಡುವ ಬಗ್ಗೆ ಸ್ಪಷ್ಟತೆ ಇಲ್ಲ ಎಂಬ ಕಾರಣದಿಂದ ಸದ್ಯದ ಮಟ್ಟಿಗೆ ಯೋಜನೆ ತಡೆಹಿಡಿಯಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮಾತ್ರವೇ ಅನುಷ್ಠಾನಗೊಂಡಿದೆ. ಹಿಂದೆ ಸಾವಯವ ಮಿಷನ್‌ನಲ್ಲಿ ತಾಲೂಕು ಮಟ್ಟ, ಹೋಬಳಿ ಮಟ್ಟದಲ್ಲೂ ಸಾವಯವ ಗ್ರಾಮಗಳನ್ನು ಆರಿಸಿ, ಗುಂಪುಗಳಿಂದ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಸಾವಯವ ಸಿರಿ ಯೋಜನೆಯಡಿ ಮೌಲ್ಯವರ್ಧನೆ, ಪ್ರಮಾಣೀಕರಣ, ಮಾರುಕಟ್ಟೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಆದರೆ ಸಬ್ಸಿಡಿ ಅಥವಾ ಯಾವುದೇ ನೇರ ಸಹಾಯ ನೀಡುವಂತಹ ಯೋಜನೆಗಳಿಲ್ಲ.
-ಭಾರತಿ, ಉಪನಿರ್ದೇಶಕರು, ಕೃಷಿ ಇಲಾಖೆ
-ವೇಣುವಿನೋದ್ ಕೆ.ಎಸ್.