Advertisement

ಕಡಬ ಗ್ರಾ.ಪಂ.ನಿಂದ ಸರಕಾರದ ವಸತಿ ಮಂಜೂರಾತಿ ಆದೇಶಪತ್ರ ವಿತರಣೆ

05:05 PM Nov 25, 2017 | Team Udayavani |

ಕಡಬ: ಸರಕಾರದ ವಸತಿ ಯೋಜನೆಯಡಿಯಲ್ಲಿ ವಸತಿ ಮಂಜೂರಾತಿ ಪತ್ರ ಪಡೆದುಕೊಂಡವರು ಕೂಡಲೇ ಮನೆ ನಿರ್ಮಿಸುವುದರ ಮೂಲಕ ಸರಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪಿ.ಪಿ. ವರ್ಗೀಸ್‌
ಅವರು ಹೇಳಿದರು.

Advertisement

ಅವರು ಕಡಬ ಗ್ರಾ.ಪಂ.ನಲ್ಲಿ 2017-18ನೇ ಸಾಲಿನ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ಆದೇಶ ಪತ್ರ ಹಸ್ತಾಂತರಿಸಿ ಮಾತನಾಡಿದರು. ಗ್ರಾ.ಪಂ. ಮೂಲಕ ಗ್ರಾಮದ ಪ್ರತಿಯೊಬ್ಬ ಜನ ಸಾಮಾನ್ಯರಿಗೆ ಸರಕಾರದಿಂದ ಎಲ್ಲ ರೀತಿಯ ಸಹಾಯ ಸೌಲಭ್ಯಗಳನ್ನು ನೀಡುತ್ತಿದ್ದು, ವಸತಿ ರಹಿತರಿಗೆ ಮನೆ ಮಂಜೂರಾತಿ ಕೂಡ ಮಾಡಲಾಗಿದೆ.

ಜಿಲ್ಲೆಯಲ್ಲೇ ಪ್ರಥಮ
ಕಡಬ ತಾಲೂಕು ವ್ಯಾಪ್ತಿಗೆ ಅತೀ ಹೆಚ್ಚಿನ ಮನೆಗಳನ್ನು ನೀಡಲಾಗಿದೆ. ಇದು ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ. ಮನೆ ಮಂಜೂರಾತಿ ಆದೇಶ ಪತ್ರ ಪಡೆದುಕೊಂಡವರು ಕೂಡಲೇ ಮನೆ ಕಟ್ಟಡವನ್ನು ನಿರ್ಮಿಸಬೇಕೆಂದು ಅವರು ಸೂಚಿಸಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ ಡಿ. ಕೋಲ್ಪೆ , ಸದಸ್ಯರಾದ ಹನೀಫ್‌ ಕೆ.ಎಂ., ಅಶ್ರಫ್‌ ಶೇಡಿಗುಂಡಿ, ಎ.ಎಸ್‌. ಶರೀಫ್‌, ಸೈಮನ್‌ ಸಿ.ಜೆ., ಆದಂ ಕುಂಡೋಳಿ, ನಾರಾಯಣ ಪೂಜಾರಿ, ಹರ್ಷ, ನೀಲಾವತಿ ಶಿವರಾಂ, ಶಾಲಿನಿ ಸತೀಶ್‌ ನಾೖಕ್‌, ಜಯಂತಿ ಗಣಪಯ್ಯ, ರೇವತಿ, ಜಯಲಕ್ಷ್ಮೀ, ಇಂದಿರಾ, ಯಶೋದಾ ಮೊದಲಾದವರು ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಗ್ರಾ.ಪಂ. ಲೆಕ್ಕ ಸಹಾಯಕ ಭುವನೇಂದ್ರ ಕುಮಾರ್‌ ವಂದಿಸಿದರು.

ವಿಳಂಬವಾಗದಿರಲಿ
ಅನುದಾನವು ಹಂತ ಹಂತವಾಗಿ ಫಲಾನುಭವಿಯ ಖಾತೆಗೆ ನೇರ ಜಮೆಯಾಗುವುದರಿಂದ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಮನೆ ಕಟ್ಟಡ ನಿಗದಿತ ಸಮಯದೊಳಗೆ ಪೂರ್ತಿಗೊಳಿಸದಿದ್ದರೆ ಅನುದಾನ ಸಿಗದೆ ಮತ್ತೆ ತಾವು 15 ವರ್ಷದವರೆಗೆ ಸರಕಾರದಿಂದ ಸಿಗುವ ವಸತಿ ಯೋಜನೆಯ ಮನೆಗಾಗಿ ಅರ್ಜಿ ಸಲ್ಲಿಸುವಂತಿಲ್ಲ. ಆದುದರಿಂದ ಫಲಾನುಭವಿಗಳು ಮುತುವರ್ಜಿ ವಹಿಸಿ ಕೂಡಲೇ ಮನೆ ನಿರ್ಮಾಣ ಪೂರ್ತಿಗೊಳಿಸಬೇಕೆಂದು ಎಂದು ಪಿ.ಪಿ. ವರ್ಗೀಸ್‌ ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next