Advertisement

ರೈತರ ಬದುಕಿನೊಂದಿಗೆ ಸರ್ಕಾರದ ಚೆಲ್ಲಾಟ ;ಮಧು ಬಂಗಾರಪ್ಪ ಆಕ್ರೋಶ

06:02 PM Mar 15, 2022 | Nagendra Trasi |

ಸೊರಬ: ಸಮರ್ಪಕ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಹಾಗೂ ಸಕಾಲಕ್ಕೆ ರೈತರಿಗೆ ಟ್ರಾನ್ಸ್‌ಫಾರ್ಮರ್‌ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕಾಂಗ್ರೆಸ್‌ ವತಿಯಿಂದ ತಾಲೂಕಿನ ಆನವಟ್ಟಿಯ ಬಸ್‌ ನಿಲ್ದಾಣದ ಆವರಣದಲ್ಲಿ ಸೋಮವಾರ ಬೃಹತ್‌ ಪ್ರತಿಭಟನಾ ಸಭೆ ನಡೆಸಲಾಯಿತು.

Advertisement

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎಸ್‌. ಮಧು ಬಂಗಾರಪ್ಪ ಮಾತನಾಡಿ, ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದ ರೈತರು ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಬೀದಿಗೆ ಬರುವಂತಾಗಿದೆ. ಹಿಂಗಾರು ಹಂಗಾಮಿನ ಬೇಸಿಗೆ ಬೆಳೆ ಹಾಗೂ ತೋಟಗಳಿಗೆ ನೀರು ಹಾಯಿಸಲು ಸಮರ್ಪಕವಾದ ವಿದ್ಯುತ್‌ ಇಲ್ಲದೆ ಒಣಗುತ್ತಿವೆ.

ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ. ರೈತರ ಬದುಕಿಗೆ ಆಸರೆಯಾಗಿ ರೈತರು ಬಳಸುವ ಪಂಪ್‌ಸೆಟ್‌ ಗಳಿಗೆ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರು ಉಚಿತವಾಗಿ ವಿದ್ಯುತ್‌ ನೀಡಿದರು.

ಪ್ರಸ್ತುತ ಅನಿಯಮಿತ ಲೋಡ್‌ ಶೆಡ್ಡಿಂಗ್‌ ಮಾಡುತ್ತಿರುವುದರಿಂದ ರೈತರು ಬೆಳೆದ ಬೆಳೆ ಕೈಗೆ ಸಿಗದಂತಾಗಿದೆ. ರಾಜ್ಯ ಸರ್ಕಾರಕ್ಕೆ ರೈತರಿಗೆ ನೀಡಲು ವಿದ್ಯುತ್‌ ಇಲ್ಲ. ಆದರೆ, ಖಾಸಗಿಯವರಿಗೆ ನೀಡಲು ವಿದ್ಯುತ್‌ ಇದೆ ಎಂದು ಆರೋಪಿಸಿದರು. ಹಾನಗಲ್‌ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಕಳೆದ ಎರಡೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರದಿಂದ ಯಾವುದೇ ಜನಪರ ಯೋಜನೆಗಳು ಜಾರಿಯಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇಂಧನ ಸಚಿವರಿದ್ದಾಗ ವಿದ್ಯುತ್‌ ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದರು. ಇದನ್ನು ಬಳಸಿಕೊಂಡು ಸಮಗ್ರ ವಿದ್ಯುತ್‌ ಪೂರೈಸಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಆರ್‌. ಶ್ರೀಧರ್‌ ಹುಲ್ತಿಕೊಪ್ಪ, ಆನವಟ್ಟಿ ಬ್ಲಾಕ್‌ ಅಧ್ಯಕ್ಷ ಆರ್‌.ಸಿ. ಪಾಟೀಲ್‌, ಸೊರಬ ಬ್ಲಾಕ್‌ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಮಹಿಳಾ ಘಟಕದ ಅಧ್ಯಕ್ಷೆಯರಾದ ವಿಜಯಲಕ್ಷ್ಮಿ ಆನವಟ್ಟಿ, ಸುಜಾತಾ ಜೋತಾಡಿ ಸೊರಬ, ಜಿಪಂ ಮಾಜಿ ಸದಸ್ಯರಾದ ತಬಲಿ ಬಂಗಾರಪ್ಪ, ವೀರೇಶ್‌ ಕೊಟಗಿ, ಕುಪ್ಪಗಡ್ಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಲ್‌.ಜಿ. ರಾಜಶೇಖರ್‌, ಕುಪ್ಪಗಡ್ಡೆ ಗ್ರಾಪಂ ಅಧ್ಯಕ್ಷೆ ಕಮಲಾಕ್ಷಿ ಸತೀಶ್‌, ಪ್ರಮುಖರಾದ ಕೆ.ಪಿ.
ರುದ್ರಗೌಡ, ರುದ್ರಪ್ಪ ಕಡ್ಲೆರ್‌, ಎಚ್‌. ಗಣಪತಿ, ರವಿ ಬರಗಿ, ಸಂಜೀವ ನೇರಲಗಿ, ನಾಗರಾಜ ಗೌಡ ಚಿಕ್ಕಸವಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next