ತೇರದಾಳ: ಕಳೆದ ಒಂದೂವರೆ ವರ್ಷದಿಂದ ದುಡಿಯುವ ಕಾಯಕ ಜೀವಿಗಳು ಬದುಕು ಸಾಗಿಸಲು ಪರದಾಡುತ್ತಿವೆ. ಕೊರೊನಾ ನಿಯಂತ್ರಿಸಲು ಸರಕಾರಗಳು ವಿಫಲವಾಗಿವೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಪಟ್ಟಣದಲ್ಲಿ ಬಡವರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೊನಾ 3ನೇ ಅಲೆ ಎದುರಿಸಲು ಪೂರ್ವ ಸಿದ್ಧತೆಯಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲ ಕಡೆಗೂ ಸಹಾಯ ಸಲ್ಲಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರವಿದ್ದಾಗ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಸೌಲಭ್ಯ ನೀಡಿದ್ದೇವೆ ಎಂದರು. ರೈತರ ಕಬ್ಬಿನ ಬಾಕಿ ಬಿಲ್ ಬಂದಿಲ್ಲ. ನೇಕಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಸಾಲ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗ, ಉತ್ಪನ್ನವಿಲ್ಲದೇ ಕಟ್ಟಕಡೆಯ ಬಡವರು ತೊಂದರೆಗೆ ಒಳಗಾಗಿದ್ದಾರೆ. ಜನರ ಉದ್ಯೋಗ, ಆರ್ಥಿಕ ರಕ್ಷಣೆ ಮಾಡಬೇಕಾದ ರಾಜ್ಯ ಸರ್ಕಾರ ನಿರ್ಲಕ್ಷé ವಹಿಸುತ್ತಿದೆ ಎಂದು ಆರೋಪಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಪ್ರವೀಣ ನಾಡಗೌಡ, ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ ಮಾತನಾಡಿದರು. ಪುರಸಭೆ ಸದಸ್ಯರಾದ ಸುರೇಶ ಕಬಾಡಗಿ, ಶೆಟ್ಟೆಪ್ಪ ಸುನಗಾರ, ಫಜಲ್ ಅತರಾವುತ್, ಇನಾಂದಾರ, ಗೌತಮ ರೋಡಕರ, ಪ್ರಭು ಗಸ್ತಿ, ಮಾಶೂಮ್ ಇನಾಮ್‌ದಾರ, ಕುಮಾರ ಪಾತ್ರೋಟ, μರೋಜ ಸಂಗತ್ರಾಸ್, ಪಿ.ಎಸ್. ಮಾಸ್ತಿ, ಜಿನ್ನಪ್ಪ ಹೊಸೂರ, ಹನಮಂತ ನಾಯಕ, ಸಂಗಪ್ಪಣ್ಣ ಉಪ್ಪಲದಿನ್ನಿ ಇದ್ದರು.