Advertisement

ಮಹಿಳಾ ಶಿಕ್ಷಣಕ್ಕೆ ಉತ್ತೇಜನ, ಅಭಿವೃದ್ಧಿಗೆ ಸರ್ಕಾರದ ಒತ್ತು

12:21 PM Mar 13, 2018 | |

ತಿ.ನರಸೀಪುರ: ಮಹಿಳೆಯರ ಉನ್ನತ ಶಿಕ್ಷಣಕ್ಕಾಗಿ 25 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನೀಡುವ ಮೂಲಕ ತಾಲೂಕಿನಲ್ಲಿ ಸಮಗ್ರ ಅಭಿವೃದ್ಧಿಗೆ ಕಳೆದ 5 ವರ್ಷಗಳಲ್ಲಿ ಸಾಕಷ್ಟು ಅನುದಾನ ನೀಡಿದ್ದೇವೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್‌, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಂಡಿಸಿಸಿ ಬ್ಯಾಂಕ್‌ ನಿಯಮಿತ ಸಂಯುಕ್ತಾಶ್ರಯದಲ್ಲಿ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆ, ಯುವ ಚೈತನ್ಯ ಯೋಜನೆ,

ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿಕೆ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಸೌಲಭ್ಯಗಳ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 30 ವರ್ಷಗಳ ಹಿಂದೆ ಇದ್ದ ತಿ.ನರಸೀಪುರ ಈಗ ಬದಲಾಗಿದೆ. ಶೈಕ್ಷಣಿಕ ವಾತವರಣ ನಿರ್ಮಿಸಿದ್ದೇವೆ ಎಂದರು.

ದೂಗು ಸೇತುವೆಗೆ ಮಂಜೂರಾತಿ: ನಾಲೆಗಳ ಆಧುನೀಕರಣ ಹಾಗೂ ತಲಕಾಡು ಮಾಧವಮಂತ್ರಿ ಅಣೆಕಟ್ಟು ಪುನರ್‌ ನಿರ್ಮಾಣಕ್ಕೆ  ಹಾಗೂ ವಸತಿ ಶಾಲೆಗೆ ಮುಂದಿನ ವಾರದಲ್ಲಿ ಶಂಕುಸ್ಥಾಪನೆ ನೆರವೇರಲಿದೆ ಎಂದರು. ತಿ.ನರಸೀಪುರದಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ಪ್ರವಾಸಿ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತಿದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಾಣ ಬನ್ನೂರಿನಲ್ಲಿ ಹೆರಿಗೆ ಆಸ್ಪತ್ರೆ, ಕಾಲೇಜು ಕಟ್ಟಡಗಳ ನಿರ್ಮಾಣ ಹೊರಳಹಳ್ಳಿಯಲ್ಲಿ ವಸತಿ ಶಾಲೆ, ಪುರಸಭಾ ವ್ಯಾಪ್ತಿಯ ರಸ್ತೆಗಳು, ಕಳೆದ ಒಂದು ತಿಂಗಳಲ್ಲಿ ಸುಮಾರು 80 ಕೋಟಿ ರೂ.ಕಾಮಗಾರಿಗಳಿಗೆ ಅನುದಾನ ನೀಡಿರುವುದಾಗಿ ತಿಳಿಸಿದರು. 

Advertisement

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ: ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ರೂಪಾಯಿಗೆ ಸಿಲಿಂಡರ್‌, ಸ್ಟವ್‌, ಉಚಿತವಾಗಿ ದೊರಕುತ್ತಿದೆ. ಮೈಸೂರು ಜಿಲ್ಲೆಗೆ 6 ಸಾವಿರ ಫ‌ಲಾನುಭವಿಗಳಲ್ಲಿ ತಾಲೂಕಿಗೆ 3000 ಫ‌ಲಾನುಭವಿಗಳಿಗೆ ನೀಡಲಾಗುತ್ತಿದೆ. ಸಮಾಜದ ಎಲ್ಲ ವರ್ಗಗಗಳನ್ನು ಗುರುತಿಸಿ ಸೌಲಭ್ಯಗಳನ್ನು ನೀಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದರು.

ಕಳೆದ ಮೂರುವರೆ ದಶಕಗಳಿಂದ ಅಭಿವೃದ್ಧಿ ಯಾಗಿರಲಿಲ್ಲ. ಪ್ರಸ್ತುತ ಸಾಕಷ್ಟು ಅಭಿವೃದ್ಧಿ ಮಾಡುವ ಮೂಲಕ ನಮಗೆ ನೀಡಿದ ಅವಕಾಶವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದೇವೆ. ನಾಲ್ವಡಿ ಕೃಷ್ಣರಾಜ ಒಡೆಯರ ನಂತರ ಮೈಸೂರು, ಚಾಮರಾಜನಗರ ಜಿಲ್ಲೆಗೆ 5 ಸಾವಿರ ಕೋಟಿ ನೀಡಿ ಅಭಿವೃದ್ಧಿ ಮಾಡಿದ ಕೀರ್ತಿ ಸಿದ್ದರಾಮಯ್ಯ ನವರಿಗೆ ಸೇರುತ್ತದೆ ಎಂದರು.

ನಿರ್ಗತಿಕರ ಹಸಿವು ನೀಗಿಸಿದ ಸರ್ಕಾರ: ಕಾರ್ಯಕ್ರಮ ಉದ್ಘಾಟಿಸಿದ ಆಹಾರ ಸಚಿವ ಯು.ಟಿ.ಖಾದರ್‌ ಮಾತನಾಡಿ, ಮುಖ್ಯಮಂತ್ರಿ ಕನಸಿನ ಯೋಜನೆ ಅನಿಲ ಭಾಗ್ಯ ಯೋಜನೆಗೆ ಇಂದು ಚಾಲನೆ ಕೊಟ್ಟಿದ್ದೇವೆ. 30 ಲಕ್ಷ ಜನರು ಈ ಸೌಲಭ್ಯ ಪಡೆಯುತ್ತಿದ್ದಾರೆ. ಎರಡು ಬಾರಿ ಅನಿಲ ತುಂಬಿಕೊಡುತ್ತೇವೆ ಉಚಿತ ಸ್ಟವ್‌ ನೀಡಿದ್ದೇವೆ.

ಇದೊಂದು ಐತಿಹಾಸಿಕ ಯೋಜನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ನೀಡುವ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಚಾಲನೆ ನೀಡಿದರು. ಕಡು ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಅಭಿವೃದ್ಧಿಗೆ ಹಸಿವನ್ನು ನೀಗಿಸಲು ಅವಕಾಶ ಕೊಟ್ಟಿದ್ದಾರೆ.

ವಸತಿ ಯೋಜನೆ ಜಾಗೃತ ಸಮಿತಿ ಅಧ್ಯಕ್ಷರಾದ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ಸುನಿಲ್‌ ಬೋಸ್‌, ಜಿಪಂ ಸದಸ್ಯರಾದ ಮಂಜುನಾಥ್‌, ಮಂಗಳಮ್ಮ ಮಹದೇವಸ್ವಾಮಿ, ತಾಪಂ ಪ್ರಭಾರ ಅಧ್ಯಕ್ಷೆ ಸುಂದರಮ್ಮ, ಸದಸ್ಯರಾದ ಚೆಲುವರಾಜು, ಗಣೇಶ್‌, ಚಿನ್ನಮ್ಮ, ಕುಮುದ ಪುರಸಭಾ ಅಧ್ಯಕ್ಷ ಉಮೇಶ್‌ ಪಾಪು,

ಉಪಾಧ್ಯಕ್ಷ ರತ್ನಮ್ಮ, ಜಾಗೃತ ಸಮಿತಿ ಸಮಿತಿಯ ಸದಸ್ಯರಾದ ರತ್ನಮ್ಮ ಗೋಪಾಲರಾಜು, ತಮ್ಮಣ್ಣೇಗೌಡ  ಆಹರ ಇಲಾಖೆಯ ಉಪನಿರ್ದೇಶಕ ಕಾ. ರಾಮೇಶ್ವರಪ್ಪ, ತಹಶೀಲ್ದಾರ್‌ ರಾಜು, ಇಓ ಬಿ.ಎಸ್‌.ರಾಜು. ಲೋಕೋಪಯೋಗಿ ಇಇ ರವಿಕುಮಾರ್‌ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ಮಹೇಶ್‌, ವರದರಾಜು, ಕುಪ್ಯ ಭಾಗ್ಯಮ್ಮ.

ಲತಾ ಜಗದೀಶ್‌, ಹೆಳವರಹುಂಡಿ ಸೋಮು,  ಉಕ್ಕಲಗೆರೆ ರಾಜು, ಶಿವಕುಮಾರ್‌ ಬಡ್ಡು, ಪುಟ್ಟಸುಬ್ಬಪ್ಪ ವಜ್ರೆàಗೌಡ, ಮನ್ಸೂರು ಆಲಿ, ಬಿ.ಮರಯ್ಯ, ಟಿ.ಎಂ ನಂಜುಂಡಸ್ವಾಮಿ ಶಾನ ರಿಯಾಜ್‌ ಬಸವೇಶ್ವರ ಜಗದೀಶ್‌ ದೊಡ್ಡೇಬಾಗಿಲು ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next