Advertisement

ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ

11:57 AM Dec 04, 2020 | Suhan S |

ಶ್ರೀರಂಗಪಟ್ಟಣ: ರಾಷ್ಟ್ರೀಯ ಹೆದ್ದಾರಿ 275ಕ್ಕೆ ಭೂಸ್ವಾಧೀನಪಡಿಸಿಕೊಂಡ ಜಮೀನುಗಳ ರೈತರಿಗೆ ಪರಿಹಾರ ನೀಡಲು ಸರ್ಕಾರ ತಾರತಮ್ಯ ನಡೆಸಿದೆ ಎಂದು ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ರೈತ ಸಂಘದ ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ನೇತೃತ್ವದಲ್ಲಿ ತಹಶೀಲ್ದಾರ್‌ ಕಚೇರಿಗೆ ಆಗಮಿಸಿದ ರೈತರು, ದಾಖಲೆ ಸಮೇತ ನೀಡಿ ರೈತರಿಗೆ ಬರಬೇಕಿದ್ದ ಹೆಚ್ಚಿನ ಪರಿಹಾರಕ್ಕೆ ಒತ್ತಾಯ ಮಾಡಿದರು. ಸಮರ್ಪಕ ಪರಿಹಾರ ನೀಡಿಲ್ಲ: ತಾಲೂಕಿನ ಕೆ. ಶೆಟ್ಟಹಳ್ಳಿ ಹೋಬಳಿಯಕಿರಂಗೂರು,ಕಳ್ಳಿಕೊಪ್ಪಲು ಗ್ರಾಮಗಳ ಸರ್ವೆ ನಂಬರ್‌ ಜಮೀನುಗಳನ್ನು ಸರ್ಕಾರ ರಾಷ್ಟ್ರೀಯ ಹೆದ್ದಾರಿ 275ಕ್ಕೆ ಭೂ ಸ್ವಾಧೀನಾ ಪಡಿಸಿಕೊಂಡು ಪರಿಹಾರವನ್ನು ಸಮರ್ಪಕವಾಗಿ ಬಿಡುಗಡೆ ಮಾಡದೆ ತಾರತಮ್ಯ ನಡೆಸಿ,ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ತಹಶೀಲ್ದಾರ್‌ ಎಂ.ವಿ.ರೂಪಾ ಅವರ ಬಳಿ ಅಳಲು ತೋಡಿಕೊಂಡರು.

ಕೂಡಲೇ ತಹಶೀಲ್ದಾರ್‌ ಮಧ್ಯ ಪ್ರವೇಶಿಸಿ, ರೈತರ ಸಮಸ್ಯೆಗೆ ಪರಿಹಾರ ನೀಡಬೇಕು. ಕಳೆದಒಂದು ವರ್ಷದಿಂದ ಪರಿಹಾರದ ಬಗ್ಗೆ ಕಚೇರಿಗೆದೂರು ನೀಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳುಕೂಡಲೇ ಹೆಚ್ಚಿನ ಹಣವನ್ನು ರೈತರಿಗೆನೀಡಲು ಮುಂದಾಗಬೇಕು. ಇಲ್ಲದಿದ್ದರೆ ವಾರದಲ್ಲಿಹೆದ್ದಾರಿ ಕಾಮಗಾರಿ ತಡೆಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು. ರೈತ ಸಂಘದಕಾರ್ಯಕರ್ತರು ತಹಶೀಲ್ದಾರ್‌ ರೂಪಾ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿಸ್ವಾಮೀಗೌಡ, ಬಾಬುರಾಯನ ಕೊಪ್ಪಲುನಿಂಗಮ್ಮ, ರೈತ ಮುಖಂಡರಾದ ಜಯರಾಮು, ಪಾಂಡು, ಬಾಲಣ್ಣ, ಚನ್ನೇಗೌಡ, ಶಿವಲಿಂಗೇಗೌಡ, ಬೋರಲಿಂಗಯ್ಯ, ಚಿದಂಬರಸ್ವಾಮಿ, ಅಣ್ಣೇಗೌಡ ಹಾಜರಿದ್ದರು.

ರೈತರಿಗೆ ನ್ಯಾಯ ಕಲ್ಪಿಸಲು ಪ್ರಯತ್ನ :  ಕೆಲ ಭಾಗದ ಜಮೀನುಗಳ ಪರಿಸ್ಥಿತಿಪರಿಶೀಲನೆ ಮಾಡಲಾಗಿದೆ. ಜಮೀನುಗಳಿಗೆಬೆಲೆ ನಿಗದಿಯಲ್ಲಿ ತಾರತಮ್ಯ ಮಾಡಿರುವುದು ಕಂಡು ಬಂದಿದೆ. ಒಂದೇ ಸರ್ವೆ ನಂಬರ್‌ ನಲ್ಲಿರುವ ಜಮೀನುಗಳಿಗೆ ಎರಡು ತರಹದಲ್ಲಿಬೆಲೆ ನಿಗದಿ ಮಾಡಿರುವುದು ರೈತರಿಗೆಬೇಸರವಾಗಿದೆ.ಕೂಡಲೇ ಉಪವಿಭಾಗಾಧಿಕಾರಿಗಳ ಜೊತೆ ಚರ್ಚಿಸಿ, ನ್ಯಾಯಕಲ್ಪಿಸಲು ಪ್ರಯತ್ನ ಮಾಡುತ್ತೇವೆ ಎಂದು ತಹಶೀಲ್ದಾರ್‌ ಎಂ.ವಿ.ರೂಪಾ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next