Advertisement

ಪಠ್ಯಪುಸ್ತಕ ಪರಿಷ್ಕರಣ ಸಮಿತಿ ವಿಸರ್ಜಿಸಿದ ಸರಕಾರ;  ಬಸವಣ್ಣ ಪಠ್ಯ ಮರುಪರಿಷ್ಕರಣೆ

01:31 AM Jun 04, 2022 | Team Udayavani |

ಬೆಂಗಳೂರು:  ವಿವಾದಕ್ಕೆ ಕಾರಣವಾಗಿ ರುವ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯನ್ನು ಸರಕಾರ ವಿಸರ್ಜಿಸಿದ್ದು, ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿ ಸೂಕ್ತ ಪರಿಷ್ಕರಣೆಗೂ ನಿರ್ಧರಿಸಲಾಗಿದೆ.

Advertisement

ಶುಕ್ರವಾರ ರಾತ್ರಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಿವಾದ ಸಂಬಂಧ ವರದಿ ನೀಡಿದರು. ಬಳಿಕ ಸರಕಾರದ ನಿರ್ಧಾರಗಳ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಲಾಗಿದ್ದು, ವಿವಾದಕ್ಕೆ ಕಾರಣವಾಗಿರುವ ಅಂಶಗಳ ಮರುಪರಿಶೀಲನೆಗೆ ಮುಕ್ತ ಮನಸ್ಸು ಹೊಂದಿರುವುದಾಗಿ  ತಿಳಿಸಲಾಗಿದೆ.

ಬಸವಣ್ಣನವರ ವಿಷಯಕ್ಕೆ ಸಂಬಂಧಿಸಿ ಪಂಡಿತಾರಾಧ್ಯ ಸ್ವಾಮೀಜಿ  ಹಾಗೂ ನಾಡಿನ ಇತರ ಸ್ವಾಮೀಜಿಗಳು ಆಕ್ಷೇಪಿಸಿರುತ್ತಾರೆ. ಈ ಹಿಂದೆ ರಚಿಸಲಾಗಿದ್ದ ಸಮಿತಿ ಪರಿಷ್ಕರಿಸಿರುವ ಪಠ್ಯದಲ್ಲಿಯೂ ಸಾಮಾನ್ಯವಾದ ಅಂಶಗಳಿವೆ. ಆದರೂ ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯವನ್ನು ಯಾರ ಭಾವನೆಗೂ ಧಕ್ಕೆ ಆಗದಂತೆ ಪರಿಷ್ಕರಿಸಲಾಗುವುದು ಎಂದು ತಿಳಿಸಲಾಗಿದೆ.

ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಕಾರ್ಯ ಮುಗಿದಿದ್ದು, ಇದನ್ನು ವಿಸರ್ಜಿಸಲಾಗಿದೆ. ಹಾಗೆಯೇ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ವಿಕೃತಗೊಳಿಸಿದ ಬಗ್ಗೆ ಆದಿಚುಂಚನಗಿರಿ ಪೀಠದ ನಿರ್ಮಲಾನಂದ ಶ್ರೀಗಳು ಮತ್ತು ಇತರರು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಮೂಲ ಕವನ ಬರೆದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸರಕಾರ ನಿರ್ಧರಿಸಿದೆ.

2021-22ನೇ ಸಾಲಿನ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯದಲ್ಲಿದ್ದ ಜಿ. ರಾಮಕೃಷ್ಣ ಅವರ ಭಗತ್‌ ಸಿಂಗ್‌ ಪಾಠವನ್ನು ಪರಿಷ್ಕೃತ ಪಠ್ಯದಲ್ಲೂ ಮುಂದುವರಿಸಲಾ ಗಿದೆ ಎಂದು  ಪ್ರಕಟನೆಯಲ್ಲಿ ತಿಳಿಸಲಾಗಿದೆ.

Advertisement

ಆರೋಪಗಳಿಗೆ ಸ್ಪಷ್ಟನೆ
– ಟಿಪ್ಪು ಸುಲ್ತಾನ್‌ ಪಠ್ಯಗಳನ್ನು ಕೈಬಿಟ್ಟಿಲ್ಲ.
-ಹಿಂದಿನ ಸಮಿತಿ ಮತ್ತು ಈಗಿನ ಸಮಿತಿ ಅಳವಡಿಸಿರುವ ಪಾಠದಲ್ಲಿ ವೀರಶೈವ ಧರ್ಮದ ಉಲ್ಲೇಖವಿದೆ.
-ಎರಡೂ ಪಠ್ಯಪುಸ್ತಕದಲ್ಲಿ ಬಸವಣ್ಣನವರು ಲಿಂಗದೀಕ್ಷೆ ಪಡೆದರು ಎಂಬ ಉಲ್ಲೇಖವೂ ಇದೆ.
-ನಾರಾಯಣ ಗುರು ಮತ್ತು ಪೆರಿಯಾರ್‌ ವಿಷಯಾಂಶಗಳನ್ನು ಉಳಿಸಿಕೊಳ್ಳಲಾಗಿದ್ದು, ಬೇರೆಡೆ ವರ್ಗಾಯಿಸಲಾಗಿದೆ.
-ಈಗಾಗಲೇ ಪಠ್ಯಪುಸ್ತಕಗಳು ಶೇ.79.70ರಷ್ಟು ಮುದ್ರಣಗೊಂಡು ಶಾಲೆಗಳಿಗೆ ಸರಬರಾಜು ಆಗಿರುತ್ತವೆ.

ರಾಜ್ಯದಲ್ಲಿ  ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಕೆಲವು ಪಠ್ಯಪುಸ್ತಕಗಳಲ್ಲಿ ಹಲವು ಆಕ್ಷೇಪಾರ್ಹ ಅಂಶಗಳು ಇದ್ದ ಕಾರಣ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ವಿಷಯಗಳಿಗೆ ಸಂಬಂಧಿಸಿ ಪಠ್ಯ ಪುಸ್ತಕಗಳ ಅಲ್ಪ ಪರಿಷ್ಕರಣೆಯನ್ನು ಮಾಡಲಾಗಿದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next