Advertisement

ಒಬಿಸಿ ಸಮುದಾಯದ ಅಭಿವೃದ್ಧಿಗೆ ಸರಕಾರ ಬದ್ಧ: ಬಸವರಾಜ ಬೊಮ್ಮಾಯಿ

09:36 PM Sep 25, 2021 | Team Udayavani |

ಮಲ್ಪೆ: ರಾಜ್ಯದಲ್ಲಿ ಹಿಂದುಳಿದ ವರ್ಗದವರ ಅಭಿವೃದ್ಧಿಗೆ ತಮ್ಮ ಸರಕಾರ ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಬಿಜೆಪಿ ಒಬಿಸಿ ಮೋರ್ಚಾದ ವತಿಯಿಂದ ಹಿಂದುಳಿದ ವರ್ಗಗಳ ಸಚಿವರು,ಶಾಸಕರಿಗೆ ಬೆಂಗಳೂರಿನಲ್ಲಿ ಏರ್ಪಡಿಸ ಲಾಗಿದ್ದ ಸಮ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಿರಿಯ ಸಚಿವ ಈಶ್ವರಪ್ಪ ಹಾಗೂ ಇತರರ ಜತೆ ಚರ್ಚೆ ನಡೆಸಿ ಹಿಂದುಳಿದ ವರ್ಗಗಳಿಗಾಗಿ ಕಾರ್ಯಕ್ರಮ ರೂಪಿಸಿ ಮನೆ ಮನೆಗೆ ತಲುಪಿಸಲಾಗುವುದು. ಬಿಜೆಪಿ ಸರಕಾರ ನೈಜ, ಸಾತ್ವಿಕ ಶಕ್ತಿಯಾಗಿ, ಸಾರ್ಥಕತೆಯಿಂದ, ಪ್ರಾಮಾಣಿಕವಾಗಿ ಹಿಂದುಳಿದ ವರ್ಗದವರ ಪರ ನಿಲ್ಲಲಿದೆ ಎಂದವರು ತಿಳಿಸಿದರು.

ನಾವು ಹೈಸ್ಕೂಲ್‌ನಲ್ಲಿ ಇದ್ದಾಗಿನಿಂದ ಹಿಂದುಳಿದವರು, ದಲಿತರ ಪರವಾಗಿರುವ ಪಕ್ಷ ಎಂದು ಕಾಂಗ್ರೆಸ್‌ ಭಾರೀ ಪ್ರಚಾರ ಮಾಡಿಕೊಂಡು ಬಂದಿದೆ. ಆದರೆ ಈ ವರ್ಗಗಳ ಪರವಾಗಿ ಕಾರ್ಯಕ್ರಮ ರೂಪಿಸಲು ಪ್ರಧಾನಿಯಾಗಿ ನರೇಂದ್ರ ಮೋದಿ ಬರಬೇಕಾಯಿತು ಎಂದು ಸಚಿವ ಈಶ್ವರಪ್ಪ ಹೇಳಿದರು.

ಇದನ್ನೂ ಓದಿ:ಚಾರ್ಮಾಡಿ ಘಾಟ್ ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ:ಪೆಟ್ರೋಲ್ ಸೋರಿಕೆ

ಸಚಿವ ಸುನಿಲ್‌ ಕುಮಾರ್‌ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಪುಟದಲ್ಲಿ ಅವಕಾಶ ಸಿಕ್ಕಿರುವುದು ಪಕ್ಷಕ್ಕೆ ಸಂದ ಗೌರವ ಎಂದರು. ಸಂಸದ ಪಿ.ಸಿ. ಮೋಹನ್‌ ಮಾತನಾಡಿದರು.

Advertisement

ಕೋಟ ಶ್ರೀನಿವಾಸ ಪೂಜಾರಿ, ಎಂ.ಟಿ .ಬಿ. ನಾಗರಾಜ್‌, ಬೈರತಿ ಬಸವರಾಜ್‌, ಶ್ರೀ ಮುನಿರತ್ನ, ಆನಂದ್‌ ಸಿಂಗ್‌, ಸಂಸದ ಪಿ.ಸಿ. ಮೋಹನ್‌, ಶಾಸಕ ತಿಪ್ಪಾರೆಡ್ಡಿ,ರಾಜ್ಯಸಭಾ ಸದಸ್ಯ ನಾರಾಯಣ್‌, ಒಬಿಸಿ ಸಮುದಾಯದ ಶಾಸಕರನ್ನು ಗೌರವಿಸಲಾಯಿತು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ| ಲಕ್ಷ್ಮಣ್‌, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರಬಾಬು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next