Advertisement

ರೈತರ ಹಿತ ಕಾಯಲು ಸರ್ಕಾರ ಬದ್ಧ; ಬಿ.ಸಿ ಪಾಟೀಲ

01:09 PM Feb 23, 2021 | Nagendra Trasi |

ಇಂಡಿ: ರಾಜ್ಯದ ರೈತರ ಹಿತ ಕಾಪಾಡಲು ಬಿಜೆಪಿ ಸರಕಾರ ಬದ್ಧವಾಗಿದ್ದು ನಾನು ಸಚಿವನಾಗಿ ರೈತರೊಂದಿಗೆ ಸಂಪರ್ಕದಲ್ಲಿದ್ದು ಅವರ ಸಮಸ್ಯೆ ಆಲಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ಹೇಳಿದರು. ಪಟ್ಟಣದ ರೈಲು ನಿಲ್ದಾಣ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಭವನ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾಕೃತಿಕ ಮತ್ತು ನೈಸರ್ಗಿಕ ಮಣ್ಣು ವೈವಿಧ್ಯಮಯವಾಗಿದೆ. ರೈತರು ಹಿಂದಿನ ಕೃಷಿ ಪದ್ದತಿ ಅಳವಡಿಸಿಕೊಂಡಿರುವದರಿಂದಲೆ ಆರ್ಥಿಕವಾಗಿ ಸಬಲರಾಗಿಲ್ಲ ಎಂದರು.

Advertisement

ಕೃಷಿಯಲ್ಲಿ ಇಸ್ರೆಲ್‌ ದೇಶ ಸಾಕಷ್ಟು ಮುಂದುವರಿದಿದೆ. ಅಲ್ಲಿನ ರೈತರು ವಿನೂತನ ವೈಜ್ಞಾನಿಕ ತಂತ್ರಜ್ಞಾನ, ಹೊಸ ಅವಿಷ್ಕಾರಗಳನ್ನು ಕೃಷಿಯಲ್ಲಿ ಬಳಕೆ ಮಾಡಿದ್ದರಿಂದ ಸನೃದ್ಧರಾಗಿದ್ದಾರೆ. ಕೃಷಿಯಲ್ಲಿ ಮಿಶ್ರ ಬೇಸಾಯ ಪದ್ದತಿ ಅಳವಡಿಸಿಕೊಂಡಾಗ ಮಾತ್ರ ರೈತರು ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ ಎಂದರು.

ಕೃಷಿ ಜೊತೆ-ಜೊತೆಗೆ ಪಶುಪಾಲನೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ ಇತ್ಯಾದಿ ಮಿಶ್ರಬೇಸಾಯ ಮತ್ತು ಆವರ್ತ ಬೆಳೆ ಬೆಳೆಯಬೇಕು. ಇಂದು ಭೂಮಿಯಲ್ಲಿನ ಸತ್ವ ಕಡಿಮೆಯಾಗಿದೆ. ಬೆಳೆಗಳನ್ನು ಬೆಳೆಯುವಾಗ ರಾಸಾಯನಿಕ ಕ್ರಿಮಿ ಕೀಟನಾಶಕ ಔಷಧ ಸಿಂಪಡಣೆಯಿಂದ ಭೂಮಿ ಮೇಲಿನ ಮಣ್ಣು ಮಲೀನವಾಗಿ ಇಳುವರಿ ಕಡಿಮೆ ಬರುತ್ತಿದೆ. ರೈತರು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆ ಅನುಷ್ಠಾನ ಯಶಸ್ವಿಯಾಗಿದೆ. ಶೆ. 97.07 ಸಾಧನೆ ಮಾಡಿ¨ª‌ಕ್ಕಾಗಿ ದೇಶದಲ್ಲಿಯೇ ಕರ್ನಾಟಕ ಮೊದಲನೇ ಸ್ಥಾನದಲ್ಲಿರುವದರಿಂದ ಫೆ. 24ರಂದು ಕೇಂದ್ರ ಸರಕಾರದಿಂದ ರಾಜ್ಯದ ಪರವಾಗಿ ಪ್ರಶಸ್ತಿ ಪಡೆಯುವದಾಗಿ ತಿಳಿಸಿದರು.

ಸಿಎಂ ಯಡಿಯೂಪ್ಪನವರು ಮಾಚ್‌ 8ರಂದು 2021-22 ನೇ ಸಾಲಿನ ಆಯುವ್ಯಯ ಮಂಡಿಸಲಿದ್ದಾರೆ. ಕೋವಿಡ್‌-19 ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯದ ಅನ್ನದಾತರಿಗೆ ಯಾವುದೇ ರೀತಿಯಿಂದ ಧಕ್ಕೆಯಾಗದಂತೆ ಕೃಷಿ ಕ್ಷೇತ್ರಕ್ಕೆ ನೀಡುವ ಅನುದಾನ ‌ಡಿತಗೊಳಿಸಬಾರದು ಎಂದು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.

ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ವಿಜಯಪುರ ಬಾಗಲಕೋಟೆ ಜನರು ಅಪ್ಪರ್‌ ಕೃಷ್ಣಾ ಯೋಜನೆ ಸಲುವಾಗಿ ತಮ್ಮ ಮನೆ, ಮಠ ಕಳೆದುಕೊಂಡಿದ್ದಾರೆ. ಆದರೆ ಈ ಭಾಗದ ಜನರು ಸಮಪರ್ಕ ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿಗಳು ಬರುವ ಬಜೆಟ್‌ನಲ್ಲಿ ಅಪ್ಪರ ಕೃಷ್ಣಾ ಯೋಜನೆಗೆ ಆದ್ಯತೆ ನೀಡಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದಾರೆ. ಇದೇ ರೀತಿ ಕೃಷ್ಣಾ ಯೋಜನೆಗೂ ರಾಷ್ಟ್ರೀಯ ಯೋಜನೆ ಮಾಡಬೇಕು.

Advertisement

ಕರ್ನಾಟಕ ರಾಜ್ಯ ಸರಕಾರ ಹೊಸ ಜಿಲ್ಲೆಗಳು ಮಾಡುವ ಸಂದರ್ಭ ಬಂದರೆ ಇಂಡಿಯನ್ನೆ ಜಿಲ್ಲೆ ಮಾಡಬೇಕು ಎಂದರು. ಆಲಮೇಲದಲ್ಲಿರುವ ತೋಟಗಾರಿಕೆ ವಿವಿ ಬೇರೆ ಕಡೆ ಸ್ಥಳಾಂತರಿಸುವ ಹುನ್ನಾರ ನಡೆದಿದೆ. ದಿ| ಎಂ.ಸಿ. ಮನಗೂಳಿಯವರ ಹೋರಾಟ ಹಾಗೂ ಶ್ರಮದಿಂದ ಅಲ್ಲಿ ಸ್ಥಾಪನೆಯಾಗಿದೆ.

ಇಂತಹ ಅಚಾತುರ್ಯಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಮನವಿ ಮಾಡಿದರು. ಕರ್ನಾಟಕ ಸರಕಾರದ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿದರು. ತಾಪಂ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಪುರಸಭೆ ಅಧ್ಯಕ್ಷೆ ಶೈಲಜಾ ಪೂಜಾರಿ, ಸುರೇಶ ಗೊಣಸಗಿ, ಡಾ| ಮಹಾದೇವ ಚಿಟ್ಟಿ, ಡಾ| ವಿ.ವೆಂಕಟಸುಬ್ರಮಣಿಯನ್‌, ಡಾ| ಎಸ್‌.ಬಿ. ಕಲಘಟಗಿ, ಕೆವಿಕೆ ಮುಖ್ಯಸ್ಥ ಡಾ| ನೆಗಳೂರ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next