Advertisement

ಲಿಂಗತ್ವ ಅಲ್ಪಸಂಖ್ಯಾಕರ ಅಭಿವೃದ್ಧಿಗೆ ಸರಕಾರ ಬದ್ಧ: ಶಾಸಕ ಲೋಬೋ

11:45 AM Dec 03, 2017 | |

ಮಹಾನಗರ: ಲಿಂಗತ್ವ ಅಲ್ಪ ಸಂಖ್ಯಾಕರ ಅಭಿವೃದ್ಧಿಗಾಗಿ ಸರಕಾರ ಸಂಪೂರ್ಣ ಬದ್ಧವಾಗಿದ್ದು, ಅವರಿಗಾಗಿ ಸರಕಾರದಿಂದ ಕೊಡಮಾಡುವ ವಿವಿಧ ಯೋಜನೆಗಳನ್ನು ತಲುಪಿಸಲು ಸದಾ ಬದ್ಧವಾಗಿರುವುದಾಗಿ ಶಾಸಕ ಜೆ.ಆರ್‌.
ಲೋಬೋ ಹೇಳಿದರು.

Advertisement

ಅವರು ಶನಿವಾರ ಪರಿವರ್ತನಾ ಚಾರಿಟೆಬಲ್‌ ಟ್ರಸ್ಟ್‌ ಮತ್ತು ಸಮಾಜ ಕಾರ್ಯವಿಭಾಗ ಸ್ಕೂಲ್‌ ಆಫ್‌ ರೋಶನಿ ನಿಲಯ ಮಂಗಳೂರು ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಕ್ರಿಸ್ಮಸ್‌ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕ್ರಿಸ್ಮಸ್‌ ಹಬ್ಬ ಜಗತ್ತಿನ ಎಲ್ಲ ಜನರು ಜಾತಿ ಮತ ಭೇದವಿಲ್ಲದೆ ಆಚರಿಸುವುದಾಗಿದೆ. ಈ ಹಬ್ಬದ ಸಂದರ್ಭದಲ್ಲಿ ನಮ್ಮ
ಸಂತೋಷವನ್ನು ಇತರರೊಂದಿಗೆ ಆಚರಿಸಿ ಅವರ ಮೊಗದಲ್ಲಿ ಸಂತೋಷ ಅರಳಿಸುವುದರೊಂದಿಗೆ ಅವರ ನೆರವಿಗೆ
ಬರುವುದು ವಾಡಿಕೆ. ಅದರಂತೆ ಪರಿವರ್ತನ ಟ್ರಸ್ಟ್‌ ಲಿಂಗತ್ವ ಅಲ್ಪಸಂಖ್ಯಾಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ ಎಂದರು.

ಮಂಗಳೂರು ಉತ್ತರ ಶಾಸಕ ಮೊಯಿದಿನ್‌ ಬಾವಾ, ಹುಟ್ಟು ಆಕಸ್ಮಿಕ ಸಾವು ಖಚಿತ ಎಂಬಂತೆ ಹುಟ್ಟಿದ ಮೇಲೆ ಯಾವುದೋ ನ್ಯೂನತೆಗಳಿಂದಾಗಿ ಸಮಾಜದಲ್ಲಿ ಕೆಲವೊಂದು ವ್ಯಕ್ತಿಗಳು ತಿರಸ್ಕರಿಸಲ್ಪಡುತ್ತಾರೆ. ಅಂತಹ ವ್ಯಕ್ತಿಗಳನ್ನು
ಮೇಲೆತ್ತುವ ಕಾರ್ಯದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಿದಾಗ ನಿಜವಾದ ಜೀವನದ ಸಾರ್ಥಕತೆ ಸಾಧ್ಯವಿದೆ. ಲಿಂಗತ್ವ
ಅಲ್ಪಸಂಖ್ಯಾಕರ ಅಭಿವೃದ್ಧಿಗಾಗಿ ತಮ್ಮ ಸಿದ್ದರಾಮಯ್ಯ ನೇತ್ವತ್ವದ ಸರಕಾರ ಈಗಾಗಲೇ ಮೈತ್ರಿ ಯೋಜನೆಯನ್ನು
ಜಾರಿಗೆ ಗೊಳಿಸಿದ್ದು, ಮುಂದಿನ ದಿನಗಳಲ್ಲಿ ಮಂಗಳಮುಖೀಯರ ಅಭಿವೃದ್ಧಿಗೆ ತನ್ನಿಂದ ಬೇಕಾಗುವ ಸಹಾಯ ನೀಡಲು ಸಿದ್ದ. ಯಾವುದೇ ಸಮಯದಲ್ಲಿ ಮಂಗಳಮುಖೀಯರಿಗೆ ಸಮಾಜದಲ್ಲಿ ತೊಂದರೆಗಳು ಉಂಟಾದಲ್ಲಿ ಅವರಿಗೆ ನ್ಯಾಯ ಒದಗಿಸಲು ತಾನು ಸದಾ ಸಿದ್ದವಿರುವುದಾಗಿ ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ ವೇಳೆ ಬಂದು ಸೇರಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಭೇಟಿ ನೀಡಿ ಶುಭ
ಹಾರೈಸಿದರು.

Advertisement

ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ| ಜಸಿಂತಾ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಮ್ಯಾನೇಜಿಂಗ್‌ ಟ್ರಸ್ಟಿ
ಹಾಗೂ ಸಂಸ್ಥಾಪಕಿ ವಾಯ್ಲೆಟ್‌ ಪಿರೇರಾ ಅವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಗ್ಲೋಬ್‌ ಟ್ರಾವೆಲ್ಸ್‌ ಇದರ ವಿಲಿಯಮ್‌ ಡಿ’ಸೋಜಾ, ಟ್ರಸ್ಟಿ ಆಶಾ ನಾಯಕ್‌, ಕಾಲೇಜಿನ ವಿದ್ಯಾರ್ಥಿ ಸಂಯೋಜಕರಾದ ಅಜ್ಮೀರಾ ಶಹಜೀನ್‌ ಉಪಸ್ಥಿತರಿದ್ದರು.

ಲಿಂಗತ್ವ ಅಲ್ಪಸಂಖ್ಯಾಕರರಿಗೆ ಅಗತ್ಯವಾಗಿರುವ ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಲಿಂಗತ್ವ ಪ್ರಮಾಣಪತ್ರ,
ಮತದಾರರ ಚೀಟಿ, ಮನೆ ನಿವೇಶನ ಸಂಬಂಧಿತ ಅಗತ್ಯತೆಗಳ ಕುರಿತಾದ ಮನವಿಯನ್ನು ಟ್ರಿಸ್ಟಿನ ಮ್ಯಾನೇಜಿಂಗ್‌ ಟ್ರಸ್ಟಿ ಹಾಗೂ ಸಂಸ್ಥಾಪಕಿ ವಾಯ್ಲೆಟ್‌ ಪಿರೇರಾ ಅವರು ಸಚಿವರು ಮತ್ತು ಶಾಸಕರುಗಳಿಗೆ ಹಸ್ತಾಂತರಿಸಿದರು.

ಸಾಧನೆ ತೋರಿದ ಟ್ರಸ್ಟಿನ ಮಂಗಳಮುಖೀ ಸಾಧಕರಾದ ಸಂಜನಾ, ಶ್ರೀನಿಧಿ ಮತ್ತು ಚಂದ್ರಕಲಾ ಅವರನ್ನು ಗೌರವಿಸಲಾಯಿತು. ರೋಶನಿ ನಿಲಯದ ವಿದ್ಯಾರ್ಥಿಗಳು ಮತ್ತು ಲಿಂಗತ್ವ ಅಲ್ಪಸಂಖ್ಯಾಕರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಸಹಕಾರಕ್ಕೆ ಸಿದ್ಧ
ಮಾನವರಾಗಿ ಅವರು ಕೂಡ ನಮ್ಮಂತೆ ಬಾಳಲು ಪ್ರಯತ್ನಿಸುತ್ತಿರುವಾಗ ಅವರನ್ನು ತಿರಸ್ಕರಿಸದೆ ಅವರನ್ನು ಸ್ವೀಕರಿಸುವ ಮಾನವೀಯ ಗುಣ ಪ್ರತಿಯೊಬ್ಬರಲ್ಲಿ ಬರಬೇಕು. ಟ್ರಸ್ಟ್‌ ಮಂಗಳಮುಖೀಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅತ್ಯುತ್ತಮವಾಗಿ ಶ್ರಮಿಸುತ್ತಿದ್ದು ತನ್ನಿಂದ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ಹಾಗೂ ಸರಕಾರದ ಸಹಕಾರ ನೀಡಲು ಸದಾಬದ್ದ 
ಜೆ.ಆರ್‌.ಲೋಬೋ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next