Advertisement
ಸುರಕ್ಷಾ ಎಂಬ ಯುವತಿ ಮೇಗರವಳ್ಳಿಯಲ್ಲಿ ಬಸ್ ಹತ್ತಿದ್ದರು. ಆಗುಂಬೆ ಘಾಟಿಯಲ್ಲಿ ಬಸ್ ಇಳಿಯುವ ವೇಳೆ ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಗಮನಿಸಿದ ಬಸ್ ನಿರ್ವಾಹಕ ವಾಸಿಮ್ ದೇಸಾಯಿ ಘಾಟಿ ಇಳಿಯುತ್ತಿದ್ದಂತೆ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಬಸ್ ಸಹಿತ ಕರೆದುಕೊಂಡು ಹೋದರು. ಅಲ್ಲಿ ಯುವತಿ ಯಾವುದೇ ರೀತಿ ಚೇತರಿಸಿಕೊಳ್ಳದ ಕಾರಣ ಅಲ್ಲಿಂದ ನೇರವಾಗಿ ಪ್ರಯಾಣಿಕರ ಸಹಕಾರದೊಂದಿಗೆ ಹೆಬ್ರಿಯ ಸರಕಾರಿ ಸಮುದಾಯ ಆಸ್ಪತ್ರೆಗೆ ಕರೆತಂದು ವೈದ್ಯರಿಗೆ ತೋರಿಸಿದ್ದಾರೆ.
ತೀವ್ರ ಅಸ್ವಸ್ಥ ಗೊಂಡ ಯುವತಿಯ ಸಹಾಯಕ್ಕೆ ಹತ್ತಿರದಲ್ಲಿದ್ದ ಮಹಿಳೆಯರಲ್ಲಿ ವಿನಂತಿಸಿದಾಗ ಸ್ಪಂದಿಸಲಿಲ್ಲ. ದೂರದಲ್ಲಿ ಕುಳಿತಿದ್ದ ಮುಸ್ಲಿಂ ಯುವತಿಯೊಬ್ಬರು ಬಾಯಿಗೆ ಶ್ವಾಸ ನೀಡಿ ಮಾನವೀಯತೆ ಮೆರೆದಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹೆಬ್ರಿ ಪೊಲೀಸರು ಕೂಡ ಸೋಮೇಶ್ವರದಿಂದ ಹೆಬ್ರಿಯ ಆಸ್ಪತ್ರೆಯ ತನಕ ಝೀರೋ ಟ್ರಾಪಿಕ್ ವ್ಯವಸ್ಥೆ ನೀಡಿ ಸಹಕಾರ ನೀಡಿದ್ದಾರೆ.