Advertisement

ಜ.31ರಿಂದ ಎರಡು ದಿನ ಬ್ಯಾಂಕ್‌ ನೌಕರರ ಮುಷ್ಕರ

10:03 AM Jan 28, 2020 | Hari Prasad |

ಹೊಸದಿಲ್ಲಿ: ವೇತನ ಪರಿಷ್ಕರಣೆಗೆ ಆಗ್ರ ಹಿಸಿ, ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ (ಪಿಎಸ್‌ಯು) ನೌಕರರು, ಜ. 31ರಿಂದ 2 ದಿನಗಳ ಮುಷ್ಕರ ನಡೆಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಬ್ಯಾಂಕ್‌ ಸಂಘಟನೆಗಳ ಸಂಘಟಿತ ಒಕ್ಕೂಟ (ಯುಎಫ್ಬಿಯು) ಪ್ರತಿಭಟನೆಗೆ ಕರೆ ನೀಡಿದೆ. ಮುಖ್ಯ ಕಾರ್ಮಿಕ ಆಯುಕ್ತ ಹಾಗೂ ಬ್ಯಾಂಕ್‌ ನೌಕರರ ಸಂಘಟನೆಗಳ ನಡುವೆ ಸೋಮವಾರ ನಡೆದ ಸಭೆ ಫ‌ಲಪ್ರದವಾಗಿಲ್ಲ.

Advertisement

ಈ ಹಿನ್ನೆಲೆಯಲ್ಲಿ ಮುಷ್ಕರ ನಡೆಸುವುದು ಅನಿವಾರ್ಯ ಎಂದು ಎಐಬಿಒಸಿ ನಾಯಕ ಸುನೀಲ್‌ ಕುಮಾರ್‌ ಹೇಳಿದ್ದಾರೆ. 2017 ನವೆಂಬರ್‌ನಿಂದಲೂ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನೌಕರರ ವೇತನ ಪರಿಷ್ಕರಣೆ ವಿಚಾರ ಹಾಗೆಯೇ ಉಳಿದುಕೊಂಡಿದೆ. ಭಾರತೀಯ ಬ್ಯಾಂಕ್‌ ಒಕ್ಕೂಟ (ಐಬಿಎ) ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಾಳಿಲ್ಲ ಎಂದು ನಾಯಕರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next