ಸರಕಾರ ನೆರವಾಗುತ್ತಿದೆ. ಅಲ್ಲದೆ ಹಾಲಿಗೂ ಪ್ರೋತ್ಸಾಹಧನ ನೀಡುತ್ತಿದೆ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
Advertisement
ಅವರು ಬೆಳ್ತಂಗಡಿ ತಾ. ಪಂ. ಸಭಾ ಭವನದಲ್ಲಿ ಪಶು ಸಂಗೋಪನಾ ಇಲಾಖೆಯ ವತಿಯಿಂದ ಹೈನುಗಾರರಿಗೆ ದನಗಳ ಖರೀದಿಗೆ ಪಶುಭಾಗ್ಯ ಯೋಜನೆಯಡಿಯಲ್ಲಿ ಸಹಾಯಧನ ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಯೋಜನೆಗಳಲ್ಲಿ 101 ಮಂದಿ ಹೈನುಗಾರರಿಗೆ 22.36 ಲ.ರೂ. ಸಹಾಯಧನ ವಿತರಿಸಲಾಯಿತು.
ಯೋಗೀಶ್ ಕುಮಾರ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು. ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ ಸ್ವಾಗತಿಸಿದರು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್ ಕಾರ್ಯಕ್ರಮ ನಿರೂಪಿಸಿದರು. ಡಾ| ವಿನಯ ಫಲಾನುಭವಿಗಳ ಪಟ್ಟಿ ವಾಚಿಸಿದರು. ಡಾ| ಯತೀಶ್ ವಂದಿಸಿದರು. ಮೂರು ಗೋಶಾಲೆಗೆ ಸಹಾಯಧನ
ತಾಲೂಕಿನ ಮೂರು ಗೋಶಾಲೆಗಳಿಗೆ ದನ ಸಾಕಲು ಸಹಾಯಧನ ನೀಡಲಾಗಿದೆ. ಸೌತಡ್ಕ ಗೋಶಾಲೆಗೆ 12.20 ಲ.ರೂ., ಹಳ್ಳಿಂಗೇರಿ ಗೋ ಶಾಲಾಗೆ 6.24 ಲ.ರೂ. , ಗುಂಡೂರಿ ಗೋಶಾಲೆಗೆ 3.60 ಲ.ರೂ. ನೀಡಲಾಗಿದೆ. ಧರ್ಮಸ್ಥಳ , ಬೆಳ್ತಂಗಡಿ ಪಶು ಸಂಗೋಪನಾ ಆಸ್ಪತ್ರೆಯ ನೂತನ ಕಟ್ಟಡಗಳಿಗೆ ತಲಾ 28.70 ಲ.ರೂ ಮಂಜೂರುಗೊಂಡಿದೆ.
– ಕೆ. ವಸಂತ ಬಂಗೇರ, ಶಾಸಕ