Advertisement

50 ಸಾವಿರ ಕೋಟಿಯ ಸುಸ್ತಿದಾರರ ಮೇಲೆ ಕಣ್ಣು

03:45 AM Mar 11, 2017 | Team Udayavani |

ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಮತ್ತು ಸಾಲ ವಸೂಲಾತಿ ನ್ಯಾಯಾಧಿಕರಣವು ಉದ್ಯಮಿ ವಿಜಯ ಮಲ್ಯ ಅವರ ಹಿಂದೆ ಬಿದ್ದಿರು ವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ, ಸಾಲವನ್ನು ಮರುಪಾವತಿ ಮಾಡಲು ಅರ್ಹರಾಗಿದ್ದರೂ, ಪಾವತಿಸದಂಥ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮತ್ತು ಬ್ಯಾಂಕುಗಳು ಚಿಂತನೆ ನಡೆಸಿವೆ.

Advertisement

ಅದರಂತೆ, ಸರ್ಕಾರವು 50 ಸಾವಿರ ಕೋಟಿ ರೂ. ಮೌಲ್ಯದ ಮರುಪಾವತಿಯಾಗದ ಸಾಲದ ಮೇಲೆ ಕಣ್ಣಿಟ್ಟಿದ್ದು, ಈ ಸುಸ್ತಿದಾರರ ಕುರಿತು ವಿವರಗಳನ್ನು ಸಂಗ್ರಹಿಸುತ್ತಿದೆ. ಸರ್ಕಾರವು ಸಿದ್ಧಪಡಿಸುತ್ತಿರುವ ಈ ಪ್ರಮುಖ ಸುಸ್ತಿದಾರರ ಪಟ್ಟಿಯಲ್ಲಿ ವಜೊÅà ದ್ಯಮಿಗಳು, ಮುಚ್ಚಿರುವ ಎರಡು ವೈಮಾನಿಕ ಕಂಪನಿಗಳು, ಕೇಂದ್ರ ಸರ್ಕಾರದ ಸರಕು ವ್ಯಾಪಾರ ಏಜೆನ್ಸಿ, ರಾಜ್ಯ ಸರ್ಕಾರಿ ಉತ್ತೇಜಿತ ಸಂವಹನ ಸಂಸ್ಥೆ, ಪ್ರಾದೇಶಿಕ ಕೈಗಾರಿಕಾ ಸಂಸ್ಥೆ, ದೇಶಾದ್ಯಂತ ಕಾರ್ಯಾಚರಿಸುತ್ತಿರುವ ಒಂದು ಮಾಧ್ಯಮ ಸಂಸ್ಥೆ, ಬಹು ರಾಜ್ಯ ಕೃಷಿ ಸಹಕಾರಿ ಸಂಸ್ಥೆ, ಗಣಿ ಕಂಪನಿಗಳು, ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳು, ಗಾರ್ಮೆಂಟ್‌ ಬ್ರಾಂಡ್‌ಗಳು ಕೂಡ ಸೇರಿವೆ. ಸಾಮರ್ಥಯವಿದ್ದರೂ ಇವರು ಸಾಲ ಮರುಪಾವತಿ ಮಾಡಿಲ್ಲ. ಕೆಲವರು  ಸಾಲ ಪಡೆದ ಉದ್ದೇಶದ ಹೊರತಾಗಿ ಬೇರೆ ಕಾರಣಕ್ಕೆ ಸಾಲವನ್ನು ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆಗೂ ಮುನ್ನವೇ ತಪ್ಪಿತಸ್ಥನ ಪಟ್ಟವೇ?: ಮಲ್ಯ
ನವದೆಹಲಿ
: ನ್ಯಾಯಸಮ್ಮತ ವಿಚಾರಣೆಗೂ ಮೊದಲೇ ನನ್ನನ್ನು ತಪ್ಪಿತಸ್ಥನನ್ನಾಗಿ ಬಿಂಬಿಸಲಾಗುತ್ತಿದೆ ಎಂದು ಲಂಡನ್‌ನಲ್ಲಿ ನೆಲೆಸಿ
ರುವ ಉದ್ಯಮಿ   ವಿಜಯ್‌ ಮಲ್ಯ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸುಸ್ತಿದಾರರಾಗಿ ಕೋರ್ಟ್‌ನಲ್ಲಿ ಪ್ರಕರಣ ಎದುರಿಸುತ್ತಿರುವ ವಿಜಯ್‌ ಮಲ್ಯ, ಈಗಾಗಲೇ ಬ್ಯಾಂಕ್‌, ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ ಗುರುವಾರವಷ್ಟೇ ವಿಚಾರಣೆ ನಡೆಸಿತ್ತು. ಈ ವೇಳೆ ದಾಖಲೆಗಳಲ್ಲಿ ಸತ್ಯ ಎಷ್ಟು ಎಂದು ಮಲ್ಯರನ್ನು ಪ್ರಶ್ನಿಸಿತ್ತು. ಇದೇ ವೇಳೆ ಮಕ್ಕಳ ಹೆಸರಿಗೆ 40 ದಶಲಕ್ಷ ಡಾಲರ್‌ ಮೌಲ್ಯದ ಆಸ್ತಿ ವರ್ಗಾವಣೆ ಮಾಡಿದ್ದನ್ನೂ ಹಿಂಪಡೆಯುವಂತೆ ಬ್ಯಾಂಕ್‌ಗಳು ಮಾಡಿಕೊಂಡಿದ್ದ ಮನವಿಗೆ ಕೋರ್ಟ್‌ ಪ್ರಶ್ನಿಸಿತ್ತು. ಬಳಿಕ ವಿಚಾರಣೆ ತೀರ್ಪನ್ನು ಮುಂದೂಡಿತ್ತು. 

ಇದರ ಜತೆಗೆ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಅವರು ಒಂದೇ ಬಾರಿಗೆ ಬಾಕಿ ಪಾವತಿ ಮಾಡುವ ಪ್ರಸ್ತಾಪವನ್ನು ಇರಿಸಿದ್ದಾರೆ. ಈ ಬಗ್ಗೆ ಮಾತುಕತೆಗೆ ಸಿದ್ಧನಿರುವುದಾಗಿಯೂ ಅವರು ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಸುಪ್ರೀಂಕೋರ್ಟಲ್ಲಿ ಅಟಾರ್ನಿ ಜನರಲ್‌ ಮಾಡಿರುವ ಆರೋಪಗಳು ಎಷ್ಟು ಸರಿ ಎಂದೂ ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next