ಮಲ್ಪೆ: ಭಾರತವು ಸುಂದರ ದೇಶ. ಇಲ್ಲಿನ ಪ್ರವಾಸಿ ತಾಣಗಳು ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಿದೆ. ಕಡಲ ತೀರದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದಕ್ಕೆ ಜನರ ಸಹಕಾರವೂ ಮುಖ್ಯವಾಗಿದೆ ಎಂದು ಸ್ಪೈನ್ ದೇಶದ ಸಮಾಜ ಸೇವಕಿ ರೂತ್ ಮಾರ್ಕೋ ಹೇಳಿದರು.
ಅವರು ಶನಿವಾರ ಕಡಲ ಕಿನಾರೆಗಳಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಸ್ವತ್ಛ ಭಾರತ್ ಫ್ರೆಂಡ್ಸ್ ವತಿಯಿಂದ ನಾಲ್ಕನೇ ವಾರದ ಪ್ಲಾಸ್ಟಿಕ್ ವಿರೋಧಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಲೇಖಕಿ ನಿಷ್ಮಾ ಖೇತಿಯಾ ಮಾತನಾಡಿ ಪ್ಲಾಸ್ಟಿಕ್ ತ್ಯಾಜ್ಯಗಳು ಕಡಲ ತೀರದ ಸ್ವತ್ಛತೆಗೆ ಧಕ್ಕೆ ಉಂಟು ಮಾಡುತ್ತವೆ. ಕಡಲ ಕಿನಾರೆಗಳನ್ನು ಸ್ವತ್ಛವಾಗಿ ಇರಿಸುವ ಜವಾಬ್ದಾರಿ ಪ್ರತಿಯೊಬ್ಬ ವ್ಯಕ್ತಿಯ ಮೇಲಿದೆ. ಪ್ರವಾಸಿ ತಾಣಗಳ ಪರಿಸರ ಸಂರಕ್ಷಿಸಲು ಪ್ರವಾಸಿಗರು ಕ್ರಿಯಾಶೀಲ ಪ್ರಯತ್ನ ನಡೆಸಿದರೆ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಸಾಕಾರಗೊಳ್ಳುವುದು ಎಂದರು.
ಸಮಾಜ ಸೇವಕ ರಾಘವೇಂದ್ರ ಪ್ರಭು ಕರ್ವಾಲು, ಪವನ್ ಕುಮಾರ್ ಜತ್ತನ್, ರೋಟರ್ಯಾಕ್ಟ್ ಉಡುಪಿ ಜಿಲ್ಲಾ ಯೂತ್ ಲೀಡರ್ ಶಿಪ್ ಪ್ರೊಮೋಟರ್ ಪ್ರಕಾಶ್ ನಾಯಕ್, ಚೇತನಾ ಶೆಣೆ„, ಕಟಪಾಡಿ ರೋಟರ್ಯಾಕ್ಟ್ ಕ್ಲಬ್ ಕಾರ್ಯದರ್ಶಿ ಲಕ್ಷ್ಮಣ್ ಟಿ., ಜ್ಯೋತಿ ನಿತ್ಯಾನಂದ ಶೇಟ್, ಮಂಜುಳಾ ಶೆಣೆ„, ರಕ್ಷಿತ್ ಕುಮಾರ್ ವಂಡ್ಸೆ, ದತ್ತಾತೆ÷àಯ ಕಿಣಿ, ಗಣೇಶ್ ಪ್ರಸಾದ್, ತೆಂಕನಿಡಿಯೂರು ಕಾಲೇಜು ಹಳೆವಿದ್ಯಾರ್ಥಿ ಸಂಘದ ಸದಸ್ಯ ಮುನಾವರ್, ವಿಬಿಸಿಎಲ್ ಕಾನೂನು ವಿದ್ಯಾರ್ಥಿಗಳಾದ ಹರೀಶ್ ನಾಯ್ಕ, ನಿಕಿತಾ ಶೆಣೆ„, ತೆಂಕನಿಡಿಯೂರು ಸರಕಾರಿ ಕಾಲೇಜಿನ ಎಂ.ಎಸ್. ಡಬ್ಲೂ ವಿದ್ಯಾರ್ಥಿಗಳಾದ ಸಿದ್ದಪ್ಪ, ಪ್ರಶಾಂತ್ ಉಪಸ್ಥಿತರಿದ್ದರು. ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯು ಟಿಪ್ಪರ್ ನೆರವಿನಿಂದ ನೂರಾರು ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.