Advertisement
ಅನ್‌ಲಾಕ್ ಆದೇಶದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿಯ ಎಲ್ಲ ಪ್ರಕಾರಗಳ ಬಸ್‌ಗಳು ರಾತ್ರಿ ಕರ್ಫ್ಯೂ ಅವಧಿ ಸಹಿತ ದಿನಪೂರ್ತಿ ಸಂಚರಿಸಲಿವೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನಿಗಮವು ಅನುಸೂಚಿಗಳ ವ್ಯವಸ್ಥೆ ಕಲ್ಪಿಸಲಿದೆ.
ಪ್ರಯಾಣಿಕರು ಮತ್ತು ಸಿಬಂದಿಯ ಹಿತದೃಷ್ಟಿಯಿಂದ ಎರಡೂ ಲಸಿಕೆ ಪಡೆದ ಸಿಬಂದಿಯನ್ನು ಆದ್ಯತೆಯ ಮೇರೆಗೆ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ದ.ಕ.ದಲ್ಲಿ ಬಸ್ ಇಲ್ಲ
ರವಿವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ 2ನೇ ಹಂತದ ಸಡಿಲಿಕೆಯ ಆದೇಶ ಹೊರಡಿಸಿದ್ದು, ಜಿಲ್ಲೆಯ ಮೂಲಕ ಮತ್ತು ಒಳಗೆ ಬಸ್ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮಂಗಳೂರು ಸರಹದ್ದಿನ ಹೊರಗೆ ಬಸ್‌ಗಳು ನಿಲುಗಡೆ ಆಗಲಿವೆ.