Advertisement
“ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸದ್ಯ 6ನೇ ವೇತನ ಆಯೋಗದ ಶಿಫಾರಸು ಅನುಷ್ಠಾನ ಗೊಳಿಸುವ ಬೇಡಿಕೆ ಈಡೇರಿಕೆ ಕಷ್ಟ. ಮೇ 4ರ ವರೆಗೆ ಕಾದುನೋಡಿ. ಸಿಹಿ ಸುದ್ದಿ ಕಾದಿದೆ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವೊಲಿಕೆ ಪ್ರಯತ್ನ ನಡೆಸಿದರು. ಆದರೆ “ಬೇಡಿಕೆಗಳ ಈಡೇರಿಕೆಗೂ ನೀತಿ ಸಂಹಿತೆಗೂ ಏನೂ ಸಂಬಂಧ ಇಲ್ಲ. ಈ ಹಿಂದೆಯೇ ನೀಡಿದ್ದ ಭರವಸೆಗಳ ಈಡೇ ರಿಕೆಗೆ ಸಮಸ್ಯೆ ಏನು’ ಎಂದು ಸಾರಿಗೆ ನೌಕರರು ಪ್ರಶ್ನಿಸಿದ್ದಾರೆ. ಇದರಿಂದಾಗಿ ಮುಷ್ಕರ ಬಹುತೇಕ ಖಚಿತ ವಾಗಿದ್ದು, ಮಂಗಳವಾರ ಸಂಜೆ ಈ ಬಗ್ಗೆ ಅಂತಿಮ ಚಿತ್ರಣ ಗೊತ್ತಾಗಲಿದೆ.
ಸೋಮವಾರ ಬೆಳಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ನೇತೃತ್ವದಲ್ಲಿ ಸಾರಿಗೆ ನೌಕರರೊಂದಿಗೆ ಸಂಧಾನ ಸಭೆ ಕರೆಯಲಾಗಿತ್ತು. ಆದರೆ ಹತ್ತು ನಿಮಿಷಗಳಲ್ಲೇ ಅದು ಬರ್ಖಾಸ್ತುಗೊಂಡಿತ್ತು. ಸಂಜೆ ಸಚಿವರು ಭರವಸೆಗೂ ನೌಕರರ ಕೂಟ ಮಣಿಯಲಿಲ್ಲ. ಶೇ. 10ರಷ್ಟು ವೇತನ ಹೆಚ್ಚಳ?
ಸಾರಿಗೆ ಇಲಾಖೆ ನೌಕರರು 6ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ವೇತನ ಪರಿಷ್ಕರಣೆಗಾಗಿ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಸರಕಾರವು ಅವರ ಮೂಲ ವೇತನ ದಲ್ಲಿ ಶೇ. 10ರಷ್ಟು ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಇದಕ್ಕೂ ಒಪ್ಪದಿದ್ದರೆ ಇದನ್ನು ಶೇ. 15ರ ವರೆಗೂ ಹೆಚ್ಚಿಸುವ ಆಯ್ಕೆಯೂ ಇದೆ ಎನ್ನಲಾಗಿದೆ.
Related Articles
Advertisement
ತಾಂತ್ರಿಕ ಸಮಸ್ಯೆಸಾರಿಗೆ ನೌಕರರ ಬೇಡಿಕೆಯಂತೆ ಆರನೇ ವೇತನ ಆಯೋಗದ ಪ್ರಕಾರ ಸಂಬಳ ಹೆಚ್ಚಳ ಮಾಡಬೇಕಾದರೆ ಅವರಿಗೆ ನೀಡುವ ವಿಶೇಷ ಭತ್ತೆಯ ಬಗ್ಗೆ ಚರ್ಚೆ ನಡೆಯಬೇಕಾಗುತ್ತದೆ. ಈ ಬಗ್ಗೆ ತೀರ್ಮಾನ ಮಾಡಲು ಸಮಯ ಅಗತ್ಯ. 6ನೇ ವೇತನ ಆಯೋಗದ ಶಿಫಾರಸು ಅನುಷ್ಠಾನಗೊಳಿಸಿದರೆ ಇಲಾಖೆಗೆ ಮೊದಲ ವರ್ಷ ಸುಮಾರು 700 ಕೋ.ರೂ., ಎರಡನೇ ವರ್ಷ ಸುಮಾರು 900 ಕೋ.ರೂ. ಹೊರೆಯಾಗಲಿದೆ. ನಾಲ್ಕು ವರ್ಷಗಳಲ್ಲಿ ಇದು ಸುಮಾರು 3,000 ಕೋ.ರೂ.ಗಳಿಗೇರುತ್ತದೆ ಎಂದು ಸಚಿವ ಸವದಿ ತಿಳಿಸಿದರು. ಖಾಸಗಿ ಬಸ್ ಸೇವೆ ಅನಿವಾರ್ಯ
ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆಯದೆ ಇದ್ದರೆ ಖಾಸಗಿ ಬಸ್‌ಗಳನ್ನು ಸೇವೆಗಿಳಿಸುವುದು ಅನಿವಾರ್ಯ. ಖಾಸಗಿ ವಲಯದ ಸುಮಾರು 3 ಸಾವಿರ ಬಸ್‌ಗಳನ್ನು ಪಡೆಯಲು ಸಿದ್ಧತೆ ಆಗುತ್ತಿದೆ ಎಂದು ಸವದಿ ಹೇಳಿದ್ದಾರೆ.
ಸಾರಿಗೆ ಇಲಾಖೆ ನೌಕರರ ಪ್ರತಿಭಟನೆ ಕುರಿತು ಕಾರ್ಮಿಕ ಇಲಾಖೆ ನ್ಯಾಯಾ ಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಎ. 9ರ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ. ಕಾರ್ಮಿಕರು ಮುಷ್ಕರ ನಡೆಸಲು ಹೈಕೋರ್ಟ್ ಮೆಟ್ಟಿಲೇರಬೇಕು. ಇಲ್ಲದಿದ್ದರೆ ಕೋರ್ಟ್ ಸೂಚನೆ ಉಲ್ಲಂ ಸಿದಂತಾಗುತ್ತದೆ ಎಂದು ಸಚಿ ವರು ಎಚ್ಚ ರಿಕೆ ನೀಡಿ ದ್ದಾ ರೆ. 8 ಬೇಡಿಕೆ ಈಡೇರಿಸಲಾಗಿದೆ
ಕಳೆದ ಡಿಸೆಂಬರ್‌ನಲ್ಲಿ ಸಾರಿಗೆ ನೌಕರರು ದಿಢೀರ್ ಮುಷ್ಕರ ನಡೆಸಿ 9 ಬೇಡಿಕೆಗಳನ್ನು ಮಂಡಿಸಿದ್ದರು. ಅವು ಗಳಲ್ಲಿ ಎಂಟು ಬೇಡಿಕೆಗಳನ್ನು ಈಡೇರಿ ಸಲಾಗಿದೆ ಎಂದೂ ಸವದಿ ಹೇಳಿ ದ್ದಾರೆ. ಸರಕಾರದ ವಾದ
ಕೊರೊನಾ 2ನೇ ಅಲೆಯಿಂದ ಶೇ. 5 ರಷ್ಟು ಪ್ರಯಾಣಿಕರ ಕೊರತೆಯಾಗಿದೆ. ಈ ಸಂದರ್ಭದಲ್ಲಿ ವೇತನ ಹೆಚ್ಚಿಸಿದರೆ ಮತ್ತಷ್ಟು ಹೊರೆಯಾಗಲಿದೆ. ಆದರೂ ಬೇಡಿಕೆ ಈಡೇರಿಸಲು ಸರಕಾರ ಸಿದ್ಧವಾಗಿದೆ. ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯ. ಹೀಗಾಗಿ ಮುಷ್ಕರ ಮಾಡಬಾರದು ಎಂದು ಸಚಿವ ಸವದಿ ಹೇಳಿದರು.