Advertisement

ಗೋರೆಗಾಂವ್‌ ಕರ್ನಾಟಕ ಸಂಘ: ಶ್ರೀ ಪುರಂದರ ದಾಸರ ಕೀರ್ತನೆ ಸ್ಪರ್ಧೆ

01:44 PM Feb 26, 2019 | |

ಮುಂಬಯಿ: ಗೋರೆಗಾಂವ್‌ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಶ್ರೀ ಪುರಂದರ ದಾಸರ ಕೀರ್ತನೆ ಸ್ಪರ್ಧೆಯು ಫೆ. 9ರಂದು ಗೋರೆಗಾಂವ್‌ ಪಶ್ಚಿಮದ ಕೇಶವಗೋರೆ ಸ್ಮಾರಕ ಟ್ರಸ್ಟ್‌ ಸಭಾಗೃಹದಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ಮುಂಬಯಿಯ ಹದಿನೈದು ಸಂಘ-ಸಂಸ್ಥೆಗಳು ಹಾಗೂ ಭಜನಾ ಮಂಡಳಿಗಳು  ಭಾಗವಹಿಸಿದ್ದವು.

Advertisement

ಬಂಗೂರ್‌ ನಗರ ಕನ್ನಡ ಬಳಗ, ಗೋರೆಗಾಂವ್‌ ಕರ್ನಾಟಕ ಸಂಘ, ಶ್ರೀಮತಿ ಸುಮಿತ್ರಾ ಆರ್‌. ಕುಂದರ್‌ ಅವರ ಸಂಸ್ಮರಣೆಯಲ್ಲಿ ಸ್ಥಾಪಿಸಿದ ದತ್ತಿನಿಧಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್‌ ನಾಯಕ್‌ ಅವರ ಧನ ಸಂಗ್ರಹದಿಂದ ನಡೆದ ಈ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಜಯಂತಿ ಕುಟ್ಟಿ ಶೆಟ್ಟಿ ಉಪಸ್ಥಿತರಿದ್ದರು. ಆಶಾ ಕುಲಕರ್ಣಿ, ಗೋಪಿನಾಥ್‌ ಎಸ್‌. ಬಂಗೇರ ಅವರು ಭಜನ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು. ಸಮೂಹ ಗಾಯನದಲ್ಲಿ ಶಿವಪ್ರಿಯ ಭಜನಾ ಮಂಡಳಿ ಮೀರಾರೋಡ್‌ ಪ್ರಥಮ, ಹವ್ಯಕ ಸಂಘ ಕಲೀನಾ ದ್ವಿತೀಯ, ವಿಟuಲ ಭಜನಾ ಮಂಡಳಿ ಮೀರಾರೋಡ್‌ ತೃತೀಯ ಬಹುಮಾನ ಪಡೆದವು.

ವೈಯಕ್ತಿಕ ವಿಭಾಗದಲ್ಲಿ ಗೋಪಾಲಕೃಷ್ಣ ಭಜನಾ ಮಂಡಳಿಯ ವಿನಯಾ ಅನಂತಕೃಷ್ಣ ಅವರು ಪ್ರಥಮ, ವಿರಾರ್‌ ಜಿಎಸ್‌ಬಿ ಸೇವಾ ಮಂಡಳದ ಪ್ರಭಾ ಸುವರ್ಣ ದ್ವಿತೀಯ, ಶಿವಪ್ರಿಯಾ ಭಜನಾ ಮಂಡಳಿ ಮೀರಾರೋಡ್‌ ಇದರ ಕಾವ್ಯಾ ಇವರು ತೃತೀಯ ಬಹುಮಾನ ಪಡೆದರು.

ಸಮೂಹಗಾಯನಲ್ಲಿ ಶಿವಪ್ರಿಯ ಭಜನಾ ಮಂಡಳಿಗೆ ಚಲಿತ ಫಲಕ ಮತ್ತು ವೈಯಕ್ತಿಕ ವಿಭಾಗದಲ್ಲಿ ಜಿ. ಎಸ್‌. ಕಾರಂತರು ಪ್ರಾಯೋಜಿಸಿದ ಚಲಿತ ಫಲಕವನ್ನು ವಿನಯಾ ಕೃಷ್ಣರಿಗೆ ಪ್ರದಾನಿಸಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್‌ ನಾಯಕ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕಿ ಇಂದಿರಾ ಮೊಲಿ ಕಾರ್ಯಕ್ರಮ ನಿರ್ವಹಿಸಿದರು.

Advertisement

ಮಾಜಿ ಕಾರ್ಯಾಧ್ಯಕ್ಷೆ ವಸಂತಿ ಕೋಟೆಕಾರ್‌ಬಹುಮಾನಿತರ ಯಾದಿಯನ್ನು ಓದಿದರು. ಮಾಜಿ ಕಾರ್ಯಾಧ್ಯಕ್ಷೆ ಸುಮಿತ್ರಾ ಕುಂದರ್‌ ಮತ್ತು ಮಾಜಿ ಸಂಚಾಲಕಿ ಸುಗುಣಾ ಬಂಗೇರ, ಗ್ರಂಥಾಯನ ನಿರ್ದೇಶಕಿ ಪದ್ಮಜಾ ಮಣ್ಣೂರ ಅವರು ಸಹಕರಿಸಿದರು. ಮುಖ್ಯ ಅತಿಥಿಗಳು ಮತ್ತು ತೀರ್ಪುಗಾರರನ್ನು ಶುಭದಾ ಪೋದ್ದಾರ್‌, ಚಂದ್ರಾವತಿ ಬಿ. ಶೆಟ್ಟಿ, ಸುಮತಿ ಶೆಟ್ಟಿ ಪರಿಚಯಿಸಿದರು.
ಸಂಚಾಲಕಿ ಉಷಾ ಪಿ. ಸುವರ್ಣ ವಂದಿಸಿದರು. ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯೆಯರು,ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ
ದರು. ಸಂಗೀತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next