Advertisement

ISKCON ನಿಂದ ಕಳೆದ ತಿಂಗಳು 400 ಕೋಟಿ ಊಟ.. ಗಡಿಯಾಚೆಗೂ ಬಿಸಿಯೂಟ ಸೇವೆಗೆ ಸಿದ್ಧ: ಮಧು ಪಂಡಿತ

09:52 AM Apr 04, 2024 | Team Udayavani |

ನ್ಯೂಯಾರ್ಕ್‌: ಮಕ್ಕಳಿಗೆ ಬಿಸಿಯೂಟ ಒದಗಿಸುವ ಅಕ್ಷಯ ಪಾತ್ರಾ ಸೇವೆಯನ್ನು ವಿದೇಶಗಳಿಗೂ ವಿಸ್ತರಿಸಲು ಸಿದ್ಧ. ಯಾವುದೇ ರಾಷ್ಟ್ರವು ನಮ್ಮನ್ನು ಆಹ್ವಾನಿಸಿದರೆ ಭಾರತದ ಗಡಿಯಾಚೆಗೂ ಸೇವೆ ಒದಗಿಸಲು ಸಿದ್ಧರಿದ್ದೇವೆ ಎಂದು ಅಕ್ಷಯ ಪಾತ್ರಾ ಫೌಂಡೇಶನ್‌ ಚೇರ್ಮನ್‌ ಮಧು ಪಂಡಿತ ದಾಸ ಹೇಳಿದ್ದಾರೆ.

Advertisement

ಅಕ್ಷಯ ಪಾತ್ರಾ ಕಳೆದ ತಿಂಗಳು 400ನೇ ಕೋಟಿ ಊಟವನ್ನು ಪೂರೈಸಿತು. ಈ ಹಿನ್ನೆಲೆಯಲ್ಲಿ ಶೂನ್ಯ ಹಸಿವು ಗುರಿಸಾಧನೆಗೆ ದೇಶದ ಪ್ರಯತ್ನಗಳನ್ನು ಶ್ಲಾಘಿಸುವ ಸಲುವಾಗಿ ಮಂಗಳವಾರ ನ್ಯೂಯಾರ್ಕ್‌ನ ವಿಶ್ವಸಂಸ್ಥೆಯಲ್ಲಿ ಇಸ್ಕಾನ್‌ ಪ್ರತಿನಿಧಿಗಳು ಮತ್ತು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಮಿಷನ್‌ ಕಾರ್ಯಕ್ರಮ ಆಯೋಜಿಸಿದ್ದವು. ಈ ವೇಳೆ ಮಾತನಾಡಿದ ಅವರು, “ವಿಶ್ವದ ಯಾವುದೇ ರಾಷ್ಟ್ರ, ಸಂಸ್ಥೆ ಅಕ್ಷಯ ಪಾತ್ರಾ ಯೋಜನೆ ಜಾರಿಗೆ ಮುಂದಾದರೆ, ಅವರಿಗೆ ಅಡುಗೆ ತಯಾರಿ, ವಿತರಣೆ ಹಾಗೂ ಇದಕ್ಕಾಗಿ ಅಳವಡಿಸಿಕೊಳ್ಳಲಾಗಿರುವ ತಂತ್ರಜ್ಞಾನ ಮಾಹಿತಿ ಹಂಚಿಕೊಳ್ಳಲು ಬದ್ಧ’ ಎಂದರು.

ಬೆಂಗಳೂರಿನ 5 ಶಾಲೆಗಳ 1,500 ಮಕ್ಕಳಿಗೆ ಊಟ ಪೂರೈಸುವ ಮೂಲಕ ಆರಂಭವಾದ ಸೇವೆ ನಿತ್ಯ 21 ಲಕ್ಷ ಮಕ್ಕಳಿಗೆ ತಲುಪುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next