Advertisement
ವಜ್ರ ಮಹೋತ್ಸವ ಸಂಭ್ರಮ ದಲ್ಲಿರುವ ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗವು ಗೋರೆಗಾಂವ್ ಪಶ್ಚಿಮದ ಕೇಶವ ಗೋರೆ ಸ್ಮಾರಕ ಸಭಾಗೃಹದಲ್ಲಿ ಹಮ್ಮಿಕೊಂಡ 6 ನೇ ವಾರ್ಷಿಕ ಮಹಿಳಾ ಭಾರತಿ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ದಿನಗಳಲ್ಲಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಉದಾಹರಣೆಗೆ ಭೂತಾರಾಧನೆಯಲ್ಲಿ ಎಲ್ಲವೂ ಪಲ್ಲಟವಾಗುತ್ತಿದೆ. ಊರಲ್ಲಿ ಮನೆಗಳು ಖಾಲಿಯಾಗುತ್ತಿದ್ದು, ಎಲ್ಲ ಪರವೂರುಗಳಲ್ಲಿ ಹೆಚ್ಚಾಗಿದ್ದಾರೆ. ಊರಲ್ಲಿ ಕೇವಲ ಭೂತ ಮಾತ್ರ ಇರುತ್ತದೆ. ಭೂತಾರಾಧನೆಯ ಸಂಸ್ಕೃತಿ ಬದಲಾಗುತ್ತಿದೆ. ಪಂಬದ ಹೇಳಿದ್ದಷ್ಟೇ ಉಳಿದು ಬಿಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಅಷ್ಟಮಂಗಳದಂಥ ಪ್ರಶ್ನೆಗಳಿಗೆ ಮೊರೆ ಹೋಗುವ ಬದಲು ನಾವು ನಂಬಿದ ಭೂತವನ್ನು ನಂಬಿದರೆ ಸಾಕು ಎಂದು ಬದಲಾಗುತ್ತಿರುವ ಸಂಸ್ಕೃತಿಯತ್ತ ಬೆಳಕು ಚೆಲ್ಲಿ ಮಹಿಳಾ ಭಾರತಿಯಲ್ಲಿ ಊರಿನಿಂದ ಆಗಮಿಸಿದ ಉಪನ್ಯಾಸಕಿಯರಾದ ರೇಖಾ ವಿ. ಬನ್ನಾಡಿ ಮತ್ತು ಅತ್ರಾಡಿ ಅಮೃತಾ ಶೆಟ್ಟಿ ಅವರ ಉಪನ್ಯಾಸಗಳನ್ನು ವಿಶ್ಲೇಷಿಸಿದ ಅವರು, ಬಹುತ್ವ ಭಾರತದಲ್ಲಿನ ವೈಶಿಷ್ಟÂಗಳನ್ನು ನೆನಪಿಸಿಕೊಂಡರು. ಇಂತಹ ಮಹಿಳಾ ಭಾರತಿ ಸಮ್ಮೇಳನವನ್ನು ಹಮ್ಮಿಕೊಂಡು ಸ್ತ್ರೀ ಚಿಂತನೆಗೆ ಬೆಂಬಲಿಸಿದ ಗೋರೆಗಾಂವ್ ಕರ್ನಾಟಕ ಸಂಘವನ್ನು ಅಭಿನಂದಿಸಿ ವಜ್ರಮಹೋತ್ಸವ ಸಂಭ್ರಮಕ್ಕೆ ಶುಭಹಾರೈಸಿದರು.
Related Articles
Advertisement
ಸುಮಿತ್ರಾ ಆರ್. ಕುಂದರ್ ಕಾರ್ಯಕ್ರಮ ನಿರ್ವಹಿಸಿದರು. ವಜ್ರಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಎಸ್. ನಾಯಕ್ ವಂದಿಸಿದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳು, ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು ಸಹಕರಿಸಿದರು.