ಮುಂಬಯಿ: ಇತರ ಕೆಲವು ಸಂಘಟನೆಯಲ್ಲಿ ನಾನಿದ್ದರೂ ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷನಾದ ಅನಂತರ ಒಂದು ವಿಶೇಷ ರೀತಿಯಲ್ಲಿ ನನ್ನನ್ನು ಜನರು ಪರಿಚಯಿಸುತ್ತಿ¨ªಾರೆ. ಅಧ್ಯಕ್ಷನಾಗಿ ನಾನೀಗ ನಿರ್ಗಮಿಸುತ್ತಿದ್ದರೂ ನಾನು ಇಲ್ಲಿ ಗಳಿಸಿದ ಪ್ರೀತ್ಯಾದರವನ್ನು ಎಂದೂ ಮರೆಯುವಂತಿಲ್ಲ. ಮಾನವೀಯತೆಯೊಂದಿಗೆ ಇಲ್ಲಿ ಪ್ರೀತಿ ವಿಶ್ವಾಸದ ವಾತವರಣವಿದ್ದು, ಅದರೊಂದಿಗೆ ನಾವು ಸಂಘವನ್ನು ಬೆಳೆಸುತ್ತಾ ನಾವೂ ಬೆಳೆಯೋಣ ಎಂದು ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ನುಡಿದರು.
ಗೋರೆಗಾಂವ್ ಕರ್ನಾಟಕ ಸಂಘದ 61 ನೇ ಮಹಾಸಭೆ ಜೂ. 23 ರಂದು ಸಂಘದ ಬಾಕೂìರು ರುಕ್ಮಿಣಿ ಶೆಟ್ಟಿ ಸ್ಮಾರಕ ಮಿನಿ ಸಭಾಗೃಹದಲ್ಲಿ ಜರಗಿದ್ದು, ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಸ್ತಿಗೆ ಹೆಸರಾದ ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ವಿವಿಧ ಭಾಷಿಗರು ಹಾಗೂ ಸಮುದಾಯದವರಿದ್ದರೂ ಎಲ್ಲವನ್ನೂ ಮರೆತು ಇದು ಕನ್ನಡ ಸಂಘ ಎಂಬ ಒಂದೇ ಬಾವನೆಯಿಂದ ಇಲ್ಲಿ ಎಲ್ಲರೂ ದುಡಿಯುತ್ತಿ¨ªಾರೆ. ನೂತನವಾಗಿ ಆಯ್ಕೆಯಾದ ಸಂಘದ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಹಾಗೂ ಸಮಿತಿಯ ಸದಸ್ಯರೆಲ್ಲರನ್ನು ಅಭಿನಂದಿಸುತ್ತಿ ದ್ದೇನೆ. ಭವಿಷ್ಯದಲ್ಲೂ ಸಂಘದ ಅಭಿವೃದ್ಧಿಯಲ್ಲಿ ನನ್ನ ಸಹಕಾರ, ಪ್ರೋತ್ಸಾಹ ಸದಾಯಿದೆ ಎಂದು ನುಡಿದರು.
ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾರಾಯಣ ಆರ್. ಮೆಂಡನ್ ಅವರು ಮಾತನಾಡಿ, ನಾನು ಸಂಘದಲ್ಲಿ ಕೋಶಾಧಿಕಾರಿಯಾಗಿ, ಉಪಾಧ್ಯಕ್ಷನಾಗಿ ನನ್ನಿಂದಾಗುವ ಸೇವೆ ಸಲ್ಲಿಸಿದ್ದು ಇದೀಗ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಎಲ್ಲರೂ ನಿಸ್ವಾರ್ಥ ಸೇವೆಯಿಂದ ಸಂಘದ ಅಭಿವೃದ್ದಿಗಾಗಿ ದುಡಿಯೋಣ ಎಂದರು.
ನೂತನ ಉಪಾಧ್ಯಕ್ಷರಾಗಿ ಪದ್ಮಜಾ ಮಣ್ಣೂರು ಆಯ್ಕೆಯಾಗಿದ್ದು, ಟ್ರಷ್ಟಿಗಳಾಗಿ ರಮೇಶ ಶೆಟ್ಟಿ ಪಯ್ನಾರ್, ಜಿ. ಟಿ. ಆಚಾರ್ಯ ಮತ್ತು ಸುರೇಂದ್ರ ಸಾಲ್ಯಾನ್ ಮುಂಡ್ಕೂರು ಪುನರಾಯ್ಕೆಯಾಗಿ¨ªಾರೆ. ಕಾರ್ಯಕಾರಿ ಸಮಿತಿಗೆ ಹತ್ತು ಮಂದಿ ನೂತನ ಸದಸ್ಯರನ್ನು ಆಯ್ಕೆಮಾಡಲಾಯಿತು.
ವಸಂತಿ ಕೋಟೆಕಾರ್ ಮತ್ತು ವೇದಾ ಎಂ. ಸುವರ್ಣ ಪ್ರಾರ್ಥನೆಗೈದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ದೇವಪ್ಪ ಪೂಜಾರಿ ಗತ ಮಹಾಸಭೆಯ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ವಿಶಾಲಾಕ್ಷೀ ಉಳುವಾರ ಲೆಕ್ಕಪತ್ರವನ್ನು ಮಂಡಿಸಿದರು. ಸಭಿಕರ ಪರವಾಗಿ ಸಚ್ಚೀಂದ್ರ ಕೋಟ್ಯಾನ್, ನಿತ್ಯಾನಂದ ಡಿ. ಕೋಟ್ಯಾನ್, ಡಿ. ವಿ. ಡಂಬಲ್, ಗಣೇಶ್ ಕುಮಾರ್, ಪದ್ಮಜಾ ಮಣ್ಣೂರು ಅವರು ಮಾತನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ದೇವಪ್ಪ ಪೂಜಾರಿ ವಂದಿಸಿದರು. ಸಭೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಈಶ್ವರ ಎಂ. ಐ.ಲ್.