Advertisement

ಸಾಲದ ವಿಷ ವರ್ತುಲದಲ್ಲಿ ಅನ್ನದಾತರು

05:35 PM Mar 09, 2020 | Naveen |

ಗೊರೇಬಾಳ: ರೈತನ ಕೃಷಿ ವೆಚ್ಚಕ್ಕಿಂತಲೂ ಆದಾಯ ಕಡಿಮೆಯಿದೆ. ಹೀಗಾಗಿ ಪ್ರತಿ ವರ್ಷವೂ ಹಾನಿಗೊಳಗಾಗಿ ಸಾಲದ ವಿಷ ವರ್ತುಲದಲ್ಲಿ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾನೆ ಎಂದು ಧಾರವಾಡದ ವಾಲ್ಮಿ  ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಅಭಿಪ್ರಾಯಪಟ್ಟರು.

Advertisement

ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದ ವಿರಕ್ತಮಠದ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಶಿವಯೋಗಿಗಳ 73ನೇ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಆಧುನಿಕ ಕೃಷಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತಾದ ಬೃಹತ್‌ ರೈತ ಹಿತಚಿಂತನಾ ಗೋಷ್ಠಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಭಾರತ ಆಹಾರದಲ್ಲಿ ಸ್ವಾವಲಂಬನೆ ಪಡೆದಿದ್ದರೂ ಶೇ.20ರಷ್ಟು ಜನರಿಗೆ ಆಹಾರದ ಕೊರತೆಯಿದೆ. ಜಾಗತಿಕ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಸಕಾಲದಲ್ಲಿ ಮಳೆಯಾಗುತ್ತಿಲ್ಲ. ಹೀಗಾಗಿ ನೀರಿನ ಕೊರತೆ ಎದುರಿಸುವಂತಾಗಿದೆ ಎಂದರು.

ರೈತರು ಅಗತ್ಯಕ್ಕಿಂತಲೂ ಅಧಿಕ ನೀರು ಬಳಸುತ್ತಿದ್ದಾರೆ. ಮಳೆ ಅಭಾವ ಹೆಚ್ಚಿದ್ದು ಅಂತರ್ಜಲ ಕುಸಿಯುತ್ತಿದೆ. ಇರುವ ನದಿ ಹಳ್ಳಕೊಳ್ಳಗಳು ಕಲುಷಿತಗೊಳ್ಳುತ್ತಿದೆ. ನೀರು ಸೃಷ್ಟಿಸಲು ಯಾವ ವಿಜ್ಞಾನಿಯಿಂದಲೂ ಸಾಧ್ಯವಾಗಿಲ್ಲ. 2030ರ ವೇಳೆಗೆ ಕುಡಿಯುವ ನೀರಿಗೂ ತತ್ವಾರ ಉಂಟಾದರೂ ಅಚ್ಚರಿಯಿಲ್ಲ. ಇನ್ನಾದರೂ ಪ್ರತಿಯೊಬ್ಬರು ಎಚ್ಚೆತ್ತುಕೊಂಡು ನೀರಿನ ಮಿತವ್ಯಯಕ್ಕೆ ಮುಂದಾಗಬೇಕಾಗಿದೆ. ವಿಶೇಷವಾಗಿ ಕಡಿಮೆ ನೀರು ಬಳಕೆಯಾಗುವ ಆಧುನಿಕ ಕೃಷಿಗೆ ರೈತರು ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.

ರಾಜ್ಯ ಕೃಷಿ ಬೆಲೆ ಆಯೋಗ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿ, ಭಾರತದ ಕೃಷಿ ವ್ಯವಸ್ಥೆ ಅತ್ಯಂತ ಬಿಕ್ಕಟ್ಟಿನಲ್ಲಿದೆ. ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದಿದ್ದರೆ ರೈತನಿಗೆ ಉಳಿಗಾಲವಿಲ್ಲ. ಮಾರುಕಟ್ಟೆ ಕುಸಿತದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲು ಸರ್ಕಾರ ಬಜೆಟ್‌ನಲ್ಲಿ 2 ಸಾವಿರ ಕೋಟಿ ರೂ. ಆವರ್ತ ನಿಧಿ  ತೆಗೆದಿರಿಸಿದೆ. ರೈತರು ಸುಸ್ಥಿರ ಕೃಷಿ ವ್ಯವಸ್ಥೆ ಕಡೆ ಸಾಗಬೇಕು ಎಂದರು.

Advertisement

ನಾಡೋಜ ಪ್ರಶಸ್ತಿ ಪುರಸ್ಕೃತ ಮುಂಡರಗಿ ಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗುರು ಡಾ| ಅನ್ನದಾನೇಶ್ವರ ಮಹಾಸ್ವಾಮಿಗಳು ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ರೈತ ಹಿತಚಿಂತನ ಗೋಷ್ಠಿ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ. ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿದು ತಿನ್ನಬೇಕು. ಅಂದಾಗ ಮಾತ್ರ ಮಾನವನಾಗಿ ಹುಟ್ಟಿದ್ದು ಸಾರ್ಥಕವಾಗುತ್ತದೆ. ಶ್ರೀಮಠವು ಅನೇಕ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗಕ್ಕೆ ಬೆಳಕಾಗಿದೆ ಎಂದು ಬಣ್ಣಿಸಿದರು.

ಕನಕಗಿರಿಯ ಡಾ| ಚನ್ನಮಲ್ಲ ಸ್ವಾಮೀಜಿ, ಶಹಪುರದ ರà ಗುರುಪಾದ ಸ್ವಾಮೀಜಿ, ಚಿತ್ತಾಪುರದ ಶ್ರೀ ಸೋಮನಾಥ ಶಿವಾಚಾರ್ಯರು, ಕಲ್ಲೂರಿನ ಶ್ರೀ ಶಂಭುಲಿಂಗ ಸ್ವಾಮೀಜಿ, ಬಳಗಾನೂರಿನ ಶ್ರೀ ಸಿದ್ದಬಸವ ಸ್ವಾಮೀಜಿ, ಸಿರಗುಪ್ಪಾದ ಶ್ರೀ ಬಸವಭೂಷಣ ಸ್ವಾಮೀಜಿ, ಸಂತೆಕಲ್ಲೂರಿನ ಶ್ರೀ ಮಹಾಂತ ದೇವರು, ಚೀಕಲಪರ್ವಿಯ ಶ್ರೀ ಅನ್ನದಾನ ದೇವರು, ಅಡವಿ ಅಮರೇಶ್ವರದ ಶ್ರೀ ನಾಗಭೂಷಣ ದೇವರು ಸಾನಿಧ್ಯ ವಹಿಸಿದ್ದರು.

ಶ್ರೀಮಠದ ಶ್ರೀ ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಾನ್ವಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಶೇಷಗಿರಿರಾವ್‌ ಕೊಲ್ಲಾ, ಜಿಪಂ ಸದಸ್ಯರಾದ ಎನ್‌.ಶಿವನಗೌಡ ಗೊರೇಬಾಳ, ಬಸವರಾಜ ಹಿರೇಗೌಡರ, ತಾಪಂ ಮಾಜಿ ಸದಸ್ಯ ಚಂದ್ರಭೂಪಾಲ ನಾಡಗೌಡ, ಹಿರಿಯ ಪತ್ರಕರ್ತ ಅಮರೇಗೌಡ ಗೋನವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next