Advertisement

ಇಂಟೆಲ್ ಸಹ ಸಂಸ್ಥಾಪಕ ಗಾರ್ಡನ್ ಮೂರ್ ನಿಧನ

07:36 PM Mar 25, 2023 | Team Udayavani |

ಸ್ಯಾನ್‌ಫ್ರಾನ್ಸಿಸ್ಕೋ: ಆಧುನಿಕ ಕಂಪ್ಯೂಟಿಂಗ್ ಸಾಧನಗಳ ಅಭಿವೃದ್ಧಿಯ ಹಿಂದಿನ ಪ್ರೇರಕ ಶಕ್ತಿಯಾಗಿದ್ದ ಇಂಟೆಲ್‌ನ ಸಹ ಸಂಸ್ಥಾಪಕ ಗಾರ್ಡನ್ ಮೂರ್ (94) ನಿಧನರಾಗಿದ್ದಾರೆ.

Advertisement

ಮಾರ್ಚ್ 24 ರಂದು ವಯೋಸಹಜ ಸಮಸ್ಯೆಯಿಂದ ಹವಾಯಿಯಲ್ಲಿರುವ ಅವರ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ.

ಕಂಪ್ಯೂಟರ್‌ ವಿಜ್ಞಾನ ಜಗತ್ತಿನ ದಾರ್ಶನಿಕ, ಸೆಮಿಕಂಡಕ್ಟರ್‌ ಚಿಪ್‌ ಉದ್ಯಮ ಪ್ರವರ್ತಕರಾಗಿ ಆಧುನಿಕ ತಂತ್ರಜ್ಞಾನ ಕ್ಷೇತ್ರದ ಹಾದಿ ಸುಗಮಗೊಳಿಸಿದ್ದ ಹೆಗ್ಗಳಿಕೆ ಇವರದ್ದಾಗಿತ್ತು.

ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಇಂಟೆಲ್‌ ಕಂಪನಿಯನ್ನು ರಾಬರ್ಟ್‌ ನಾಯ್ಸ ಜತೆಗೂಡಿ 1968ರಲ್ಲಿ ಸ್ಥಾಪಿಸಿದ್ದರು. ಆ ಸಂದರ್ಭದಲ್ಲಿ ಅದರ ಹೆಸರು ಎನ್‌.ಎಂ.ಇಲೆಕ್ಟ್ರಾನಿಕ್ಸ್‌ ಎಂದು ಇತ್ತು.

ಮೂರ್ ಸಿಲಿಕಾನ್ ವ್ಯಾಲಿಯಲ್ಲಿ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಮೂರ್ ನಿಧನಕ್ಕೆ ಆಪಲ್ ಟಿಮ್ ಕುಕ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ನೆನೆದು ಟ್ವೀಟ್ ಮಾಡಿದ್ದಾರೆ.

Advertisement

ಮೂರ್ ಅವರನ್ನು ನೆನಪಿಸಿಕೊಳ್ಳುತ್ತಾ, ಟಿಮ್ ಕುಕ್ ಟ್ವೀಟ್ ಮಾಡಿದ್ದು, “ಗಾರ್ಡನ್ ಮೂರ್‌ನಲ್ಲಿ ಜಗತ್ತು ಒಬ್ಬ ದೈತ್ಯನನ್ನು ಕಳೆದುಕೊಂಡಿತು, ಅವರು ಸಿಲಿಕಾನ್ ವ್ಯಾಲಿಯ ಸ್ಥಾಪಕ ಪಿತಾಮಹರಲ್ಲಿ ಒಬ್ಬರು ಮತ್ತು ತಾಂತ್ರಿಕ ಕ್ರಾಂತಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿದ ನಿಜವಾದ ದಾರ್ಶನಿಕರಾಗಿದ್ದರು. ಅವರ ಮಾರ್ಗದರ್ಶನಕ್ಕೆ ನಾವೆಲ್ಲರೂ ಅವರಿಗೆ ಕೃತಜ್ಞತೆಯ ಋಣವನ್ನು ನೀಡಬೇಕಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ

Advertisement

Udayavani is now on Telegram. Click here to join our channel and stay updated with the latest news.

Next