Advertisement

ಗೊರವನಹಳ್ಳಿ ಮಹಾಲಕ್ಷ್ಮೀ ದರ್ಶನಕ್ಕೆ ಮಳೆ ಅಡಚಣೆ; ಭಕ್ತರ ಸಂಖ್ಯೆ ಇಳಿಮುಖ

06:09 PM Aug 05, 2022 | Team Udayavani |

ಕೊರಟಗೆರೆ: ಕರುನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಿಯ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗೆ ಮಳೆರಾಯನ ಅಡ್ಡಿಯಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಬೇಕಿದ್ದ ಭಕ್ತರಿಗೆ ದಿನಪೂರ್ತಿ ಮಳೆರಾಯನ ಆಗಮನವಾಗಿ ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯು ಗಣನೀಯವಾಗಿ ಇಳಿಮುಖವಾಗಿದೆ.

Advertisement

ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಪುಣ್ಯಕ್ಷೇತ್ರವಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮೀ ಟ್ರಸ್ಟ್ನಿಂದ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿತ್ತು. ಮಹಾಲಕ್ಷ್ಮೀ ದೇವಾಲಯ ನಾಲ್ಕು ದಿಕ್ಕಿನಲ್ಲಿಯು ಭಕ್ತರಿಗೆ ಅನುಕೂಲ ಆಗುವಂತೆ ಪಾರ್ಕಿಂಗ್ ವ್ಯವಸ್ಥೆಯ ಜೊತೆಯಲ್ಲಿ ಪೊಲೀಸ್ ಇಲಾಖೆಯಿಂದ ಭದ್ರತೆಯನ್ನು ಕಲ್ಪಿಸಲಾಗಿತ್ತು.

ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿಯ ಸಿರಿದೇವಿಯ ಸನ್ನಿಧಾನದಲ್ಲಿ ಶುಕ್ರವಾರ ಮುಂಜಾನೆಯಿಂದ ಸಂಜೆಯವರೇಗೆ ದೇವಿಗೆ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಮಹಾಲಕ್ಷ್ಮೀ ದೇವಾಲಯ ಮತ್ತು ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರದ ವ್ಯವಸ್ಥೆ ಮಾಡಲಾಗಿತ್ತು. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆಯನ್ನು ಟ್ರಸ್ಟ್ನಿಂದ ನೀಡಿದರು.

ಮಹಾಲಕ್ಷ್ಮೀ ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯಶರ್ಮ ಮಾತನಾಡಿ ವರ ಮಹಾಲಕ್ಷ್ಮೀ ಹಬ್ಬದಂದು ಗೊರವನಹಳ್ಳಿ ಮಹಾಲಕ್ಷ್ಮೀ ದರ್ಶನ ಪಡೆದರೇ ಶುಭ ಆಗಲಿದೆ. ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದೇವಿಗೆ ವಿಶೇಷ ಪೂಜಾಕಾರ್ಯ ನಡೆಯಿತು. ದೇವಿಯ ಬಾಗಿಲಿಗೆ ಭಕ್ತರು ಬೆಳ್ಳಿಯ ಕವಚವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿದರು.

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ವಾಸುದೇವ್ ಮಾತನಾಡಿ ಮಹಾಲಕ್ಷ್ಮೀ ಕೃಪೆಯಿಂದ ರೈತರ ಜೀವನಾಡಿ ತೀತಾ ಜಲಾಶಯ ತುಂಬಿದೆ. ಮಳೆರಾಯನ ಆರ್ಭಟದಿಂದ ಭಕ್ತರ ಸಂಖ್ಯೆ ಇಳಿಮುಖ ಆಗಿದೆ. ಮಹಾಲಕ್ಷ್ಮೀ ಟ್ರಸ್ಟ್ನಿಂದ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಮತ್ತು ವಿಶೇಷ ದರ್ಶನದ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

Advertisement

ಮಹಾಲಕ್ಷ್ಮೀ ಟ್ರಸ್ಟ್ನ ಧರ್ಮದರ್ಶಿ ಶ್ರೀಪ್ರಸಾದ್ ಮಾತನಾಡಿ ಮಹಾಲಕ್ಷ್ಮೀ ಟ್ರಸ್ಟ್ ಮತ್ತು ಭಕ್ತರ ಸಹಕಾರದಿಂದ ಬೆಳ್ಳಿಯ ಬಾಗೀಲು ಹಾಕಲಾಗಿದೆ. ಬೆಳ್ಳಿಯ ಗರ್ಭಗುಡಿಯ ನಿರ್ಮಾಣದ ಅಧ್ಯಕ್ಷರ ಕನಸು ನನಸಾಗಲಿದೆ. ಕಮಲಮ್ಮ ಮತ್ತು ಮಹಾಲಕ್ಷ್ಮೀ ದೇವಿಯ ಆರ್ಶಿವಾದದಿಂದ ತೀತಾ ಜಲಾಶಯ ಭರ್ತಿಯಾಗಿ ರೈತರಿಗೆ ಸಾಕಷ್ಟು ಅನುಕೂಲ ಆಗಿದೆ ಎಂದು ಸಂತಷ ವ್ಯಕ್ತಪಡಿಸಿದರು.

ಮಹಾಲಕ್ಷ್ಮೀ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಟ್ರಸ್ಟ್ನ ಅಧ್ಯಕ್ಷ ವಾಸುದೇವ್, ಕಾರ್ಯದರ್ಶಿ ಚಿಕ್ಕನರಸಯ್ಯ, ಖಜಾಂಚಿ ಮಂಜುನಾಥ, ಧರ್ಮದರ್ಶಿ ಡಾ. ಲಕ್ಷ್ಮೀಕಾಂತ, ನಟರಾಜು, ಶ್ರೀಪ್ರಸಾದ್, ರವಿರಾಜ ಅರಸ್, ಮುರುಳಿಕೃಷ್ಣ, ಓಂಕಾರೇಶ್, ಜಗದೀಶ್, ರಾಮಲಿಂಗಯ್ಯ, ನರಸರಾಜು, ಲಕ್ಷ್ಮೀನರಸಯ್ಯ, ನಾಗರಾಜು, ಕಾರ್ಯ ನಿರ್ವಾಹಣಾ ಅಧಿಕಾರಿ ಕೇಶವಮೂರ್ತಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next