Advertisement

ಗೋರಖ್ಪುರ : 48 ಗಂಟೆಗಳಲ್ಲಿ ಮತ್ತೆ 42 ಮಕ್ಕಳ ಸಾವು 

09:24 AM Aug 30, 2017 | Team Udayavani |

ಗೋರಖ್ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ಸ್ವಕ್ಷೇತ್ರ ಗೋರಖ್ಪುರದಲ್ಲಿರುವ  ರಾಜ್ಯ ಸರ್ಕಾರಿ ಸ್ವಾಮ್ಯದ ಬಾಬಾ ರಾಘವ್‌ ದಾಸ್‌ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ಮರಣ ಮೃದಂಗ ಮುಂದುವರಿದಿದ್ದು ಕಳೆದ 48 ಗಂಟೆಗಳ ಒಳಗೆ 42 ಮಕ್ಕಳು ಸಾವನ್ನಪ್ಪಿದ್ದಾರೆ.

Advertisement

42 ಮಕ್ಕಳ ಪೈಕಿ 7 ಮಂದಿ ಮಕ್ಕಳು ಮೆದುಳಿನ ಉರಿಯೂತದಿಂದ ಸಾವನ್ನಪ್ಪಿದ್ದು , ಉಳಿದ ಮಕ್ಕಳು ಬೇರೆ ಕಾರಣದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. 

ಅಗಸ್ಟ್‌ 1 ರಿಂದ ಇಲ್ಲಿಯವರೆಗೆ ಆತಂಕಕಾರಿ ಎಂಬಂತೆ 290 ಮಕ್ಕಳು ಸಾವನ್ನಪ್ಪಿದ್ದಾರೆ. ಆ ಪೈಕಿ 77 ಮಕ್ಕಳು ಮೆದುಳಿನ ಉರಿಯೂತಕ್ಕೆ ಕಾರಣವಾಗುವ  ಎನ್‌ಸೆಫ‌ಲಿಟೀಸ್‌ ಎನ್ನುವ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದಾರೆ ಎನ್ನಲಾಗಿದೆ.  

ಆಸ್ಪತ್ರೆಗಳ ಅಂಕಿ ಅಂಶಗಳ ಪ್ರಕಾರ 2017 ರ ಜನವರಿಯಿಂದ ಇಲ್ಲಿಯವರೆಗೆ 1,250 ಮಕ್ಕಳು ಮೃತಪಟ್ಟಿವೆ. 

Advertisement

Udayavani is now on Telegram. Click here to join our channel and stay updated with the latest news.

Next