Advertisement
ಕಸಬಾ ಮರಸು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕಲ್ಲೇಶ್ವರಸ್ವಾಮಿ, ಗಣಪತಿ, ಕಾಲಭೈರವೇಶ್ವರಸ್ವಾಮಿ ದೇವಸ್ಥಾನ, ದ್ವಾರಮಂಟಪ, ಗರುಡಕಂಬ ಪುನರ್ ಪ್ರತಿಷ್ಠಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿರುವುದನ್ನು ಮುಖ್ಯ ಮಂತ್ರಿಗಳಿಗೆ, ಮಲೆನಾಡು ವ್ಯಾಪ್ತಿಗೊಳಪಡುವ ಶಾಸಕರನ್ನೊಳಗೊಂಡಂತೆ ಮನವಿ ಮಾಡಿದಾಗ ೧೦೦ ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ ಮಲೆನಾಡು ಪ್ರದೇಶಕ್ಕೆ 100 ಕೋಟಿ ರೂ. ಖರ್ಚು ಮಾಡಲಾಗುವುದು. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
Related Articles
Advertisement
ಆಧಿ ಚುಂಚನಗಿರಿ ಹಾಸನ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಶ್ರಿ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ ಧರ್ಮ ಮತ್ತು ದೇಗುಲಗಳು ಮನುಷ್ಯತ್ವವನ್ನು ಸಾರುವ ಶ್ರದ್ಧಾ ಕೇಂದ್ರಗಳು. ಮನಸ್ಸನ್ನು ಶುದ್ಧ ಗೊಳಿಸಿ ಒಳ್ಳೆಯ ದಾರಿಯಲ್ಲಿ ನಡೆಯಲು ಧಾರ್ಮಿಕ ಕಾರ್ಯಗಳು ಪ್ರೇರಣೆಯಾಗಿವೆ. ಎಲ್ಲಾ ಧರ್ಮಗಳ ಜನರೂ ಪ್ರಾರ್ಥನೆ ನೆರವೇರಿಸುವುದು ಒಳಿತಿನ ಕಾರಣಕ್ಕೆ.
ತನ್ನನ್ನು ತಾನು ಅರಿತುಕೊಂಡು ಒಳ್ಳೆಯ ವಿಚಾರಗಳ ಹಾದಿಯಲ್ಲಿ ನಡೆಯುವುದೇ ಭಕ್ತಿ ಮಾರ್ಗ. ದೇವರು, ದೇಗುಲಗಳಿಂದ ಎಲ್ಲರೂ ಶಾಂತಿ, ಸಹಬಾಳ್ವೆ, ಪರಸ್ಪರ ಪ್ರೀತಿ ಕಲಿಯಬೇಕು ಮಾನವನ ದುರಾಶೆಯಿಂದ ಕಾಡನ್ನ ನಾಶ ಮಾಡಿರುವುದರಿಂದ ಮಲೆನಾಡು ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಿದ್ದು ಉಸ್ತುವಾರಿ ಮಂತ್ರಿಗಳು ಕ್ರಮ ತಗೆದುಕೊಳ್ಖಬೇಕು ಕಾರ್ಜುವಳ್ಳಿ ಹಿರೆ ಮಠದ ಸ್ವಾಮೀಜಿಗಳು ಹೇಳಿದಂತೆ ರೈತರಿಗೆ ಸರಿಯಾಗಿ ವಿದ್ಯುತ್ಚಕ್ತಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಅದರಂತೆ ಸ್ವಲ್ಪ ಮಟ್ಟಿಗಾದರೂ ಕ್ರಮ ಕೈಗೊಳ್ಳುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರು ನೆಮ್ಮದಿ ಕಂಡುಕೊಳ್ಳುವಂತಾಗಲಿ ಜನರು ಕೂಡ ದೇವರ ಮೇಲೆ ಭಕ್ತಿಯಿಂದ ಪೂಜೆ ಪುರಸ್ಕಾರ ಸಂಸ್ಕಾರದಿಂದ ಬದುಕು ಕಟ್ಟಿಕೊಂಡು ನೆಮ್ಮದಿ ಜೀವನದ ಕಡೆ ಸಾಗಬೇಕು ಎಂದರು.
ಸಮಾರಂಭದಲ್ಲಿ ಕುಣಿಗಲ್ ಯೋಗವನ ಬೆಟ್ಟ ಸಿದ್ದಲಿಂಗೇಶ್ವರ ಮಹಾಸ್ವಾಮಿ, ವಿಜಯಕುಮಾರಸ್ವಾಮಿಜಿ, ಬಸವಕುಮಾರಸ್ವಾಮಿ, ಶಂಭುನಾಥ ಮಹಾಸ್ವಾಮಿ, ಡಾ. ಶಿವಾನಂದಪುರಿ ಸ್ವಾಮೀಜಿಯವರು ಸಾನಿದ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ, ಜಿ. ಮರಿಸ್ವಾಮಿ, ಸಿದ್ದೇಶ್ ನಾಗೇಂದ್ರ, ಪುಷ್ಪ ಅಮರನಾಥ್, ಜಿ.ವಿ.ಟಿ. ಬಸವರಾಜ್, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು,, ತಹಸೀಲ್ದಾರ್ ಪೂರ್ಣಿಮ, ಎಂ. ರುದ್ರೇಶ್, ನಾರ್ವೆ ಸೋಮಶೇಖರ್,ಸಿಮೆಂಟ್ ಮಂಜುನಾಥ್, ಎಂ. ಪಿ. ಕುಮಾರ್, ಎಚ್. ಎನ್. ದೀಪಕ್, ಹುಲ್ಲಹಳ್ಳಿ ಸುರೇಶ್ ಕೆ. ಎಸ್. ಮಂಜೇಗೌಡ,ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವೇದಾ,ಉಪಾಧ್ಯಕ್ಷ ನಿಂಗರಾಜ್,ರಾಜಶೇಖರ್, ಭಾಗವಹಿಸಿದ್ದರು.
ಆಯೋಜಕರ ವಿರುದ್ಧ ಕಿಡಿಕಾರಿದ ಶಾಸಕ:
ಆಲೂರು : ತಾಲ್ಲೂಕಿನ ಮರಸು ಗ್ರಾಮದಲ್ಲಿ ಇಂದು ನಡೆದ ಕಲ್ಲೇಶ್ವರಸ್ವಾಮಿ ಹಾಗೂ ಗರುಡ ಗಂಬ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಆಯೋಜಕರು ರಾಜ್ಯ ಕಾಂಗ್ರೆಸ್ ಮಹಿಳಾ ಮೋರ್ಚಾ ಅಧ್ಯಕ್ಷ ಪುಷ್ಪ ಅಮರನಾಥ್ ಮಾತನಾಡುವಂತೆ ಸೂಚಿಸಿದರು ಅದರಂತೆ ಪುಷ್ಪ ಅಮರನಾಥ್ ಮಾತನಾಡಲೂ ಆರಂಭಸಿದಾಗ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಸಭೆಯಲ್ಲಿ ಎದ್ದು ನಿಂತು ಇದು ಸರ್ಕಾರಿ ಕಾರ್ಯಕ್ರಮ ಎಲ್ಲರಿಗೂ ಮಾತನಾಡಲು ಅವಕಾಶ ಕೋಡಬಾರದು ವೇದಿಕೆಯಲ್ಲಿ ಸ್ವಾಮೀಜಿಯವರಿಗೆ ನೀಡಬೇಕು ಎಂದು ಒತ್ತಾಯಿಸಿದರು ಅದಕ್ಕೆ ಕಾರ್ಯಕ್ರಮ ಆಯೋಜಕರು ವೇದಿಕೆಯಲ್ಲಿ ಕೇವಲ ಒಬ್ಬರೇ ಮಹಿಳೆ ಇರುವುದರಿಂದ ಅವರಿಗೆ ಅವಕಾಶ ನೀಡಲಾಗಿದೆ ಅವರಿಗೆ ಅವಕಾಶ ನೀಡದಿದ್ದರೆ ಮಹಿಳೆಯರಲ್ಲಿ ಬೇರೆ ಅರ್ಥ ಹೋಗುತ್ತೆ ಅದ್ದರಿಂದ ಅವರಿಗೆ ಮಾತನಾಡಲು ಅವಕಾಶ ನೀಡಲಾಗಿದೆ ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರಿಗೆ ತಿಳಿ ಹೇಳಿದರು ಅವರು ಪುಷ್ಪ ಅಮರನಾಥ್ ಅವರಿಗೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದರು ತಕ್ಷಣ ವೇದಿಕೆ ಮುಂಬಾಗದಲ್ಲಿದ್ದ ಭಕ್ತರೊಬ್ಬರು ಎದ್ದು ನಿಂತು ನೀವು ಕಾರ್ಯಕ್ರಮದ ಶಿಷ್ಟಾಚಾರ ಬಗ್ಗೆ ದೊಡ್ಡದಾಗಿ ಮಾತನಾಡುತ್ತೀರಿ ನಿಮ್ಮ ಕಾರ್ಯಕ್ರಮ ಮಾಡುವ ರೀತಿ ನಾವೇನು ನೋಡಿಲ್ವೇ ಗುದ್ದಲಿ ಪೂಜೆ ಮಾಡುವ ಕಾರ್ಯಕ್ರಮದಲ್ಲಿ ಜನಪ್ರತಿಗಳಲ್ಲದವರೂ ಹಾರೇ ಹಿಡಿದು ನಿಂತಿರುತ್ತಾರೇ ಮಾಡದ್ ಅನಾಚಾರ ಮನೆ ಮುಂದೆ ಬೃಂದಾವನ ಎಂದಾಗಾಯ್ತು ನಿಮ್ಮ ಕಥೆ ಎಂದು ಏರು ದ್ವನಿಯಲ್ಲಿ ರೇಗಿದರು ನಂತರ ಶಾಸಕ ಕುಮಾರಸ್ವಾಮಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತೆಪ್ಪಗಾದರು ನಂತರ ಪುಷ್ಪ ಅಮರನಾಥ್ ಭಾಷಣ ಆರಂಭಿಸಿ ಒಬ್ಬ ಮಹಿಳೆ ಎರಡು ನಿಮಿಷ ಮಾತನಾಡಿದರೇ ಶಾಸಕರು ಏನು ಗಂಟು ಕಳೆದುಕೊಳ್ಳುತ್ತಾರೆ ಇದು ಒಳ್ಳೆಯ ಸಂಸ್ಕೃತಿ ಅಲ್ಲ ಎಂದರಲ್ಲದೇ ಇದು ದಾರ್ಮಿಕ ಕಾರ್ಯಕ್ರಮ ಇಲ್ಲಿ ಮಾತನಾಡುವುದಿಲ್ಲ ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತೇನೆ ಎಂದರು.
ಪತ್ರಿಕೆಯೊಂದಿಗೆ ಮಾತನಾಡಿದ ಪುಷ್ಪ ಅಮರನಾಥ್ ನಾವು ವೇದಿಕೆ ಹಂಚಿಕೊಂಡಿದ್ದು ಶಾಸಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ ಶಾಸಕರು ಈ ಕಾರ್ಯಕ್ರಮದಲ್ಲಿ ಉದಾರತೆ ತೋರಬೇಕಿತ್ತು ಇವರು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೇ ಇವರಿಗೇಕೆ ಭಯ ಮೂರು ಬಾರಿಯಿಂದಲೂ ಕ್ಷೇತ್ರದ ಜನರಿಗೆ ಮೂಗಿಗೆ ತುಪ್ಪ ಸವರಿಕೊಂಡು ಬಂದಿದ್ದಾರೆ ಮುಂದಿನ ದಿನಗಳಲ್ಲಿ ಇವರು ಏನು ಮಾಡಿದ್ದಾರೆ ಎನ್ನುವುದನ್ನು ಜನರ ಮುಂದಿಡುತ್ತೇನೆ ಎಂದರು.