Advertisement
ಕುಂದಾಪುರ: ಕನ್ನಡ ಸಾರಸ್ವತ ಲೋಕದಲ್ಲಿ “ನವ್ಯ ಸಾಹಿತ್ಯದ ಹರಿಕಾರ’ ಎಂದೇ ಹೆಸರಾದವರು ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರು.
ಸಲ್ಲಿಸುವ ಜತೆಗೆ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡರು. 1964ರಲ್ಲಿ ಸಾಗರದ ಲಾಲ್ ಬಹಾದ್ದೂರ್ ಕಾಲೇಜು, ಉಡುಪಿಯ ಪಿಪಿಸಿ ಕಾಲೇಜಿನ ಪ್ರಾಂಶುಪಾಲರಾಗಿ
ಸೇವೆ ಸಲ್ಲಿಸಿದ್ದರು. 1971ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ಬೆಂಗಳೂರಿನಿಂದ ಸ್ಪರ್ಧಿ ಸಿದ್ದರು.
Related Articles
ಕನ್ನಡ ಕಾವ್ಯ ಕ್ಷೇತ್ರದಲ್ಲಿ ನವ್ಯ ಎಂಬ ಹೊಸ ಸಂಪ್ರದಾಯ ಬೆಳೆಸಿದವರು ಅಡಿಗರು. ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಿಗೆ ಹೊಸ ರೂಪು ಕೊಟ್ಟವರು. ಹೊಸ ಸಂವೇದನೆ ಮತ್ತು ಹೊಸ ಅಭಿವ್ಯಕ್ತಿಯನ್ನು ಪ್ರತಿಪಾದಿಸಿದ್ದ ಅಡಿಗರು ಹೊಸ ತಲೆಮಾರಿನವರ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದರು. “ಸಾಕ್ಷಿ’ ಎಂಬ ಪತ್ರಿಕೆಯನ್ನು ಮುನ್ನಡೆಸಿದ್ದರು, ಸ್ವಾತಂತ್ರÂ ಹೋರಾಟಗಾರ, ಕವಿ, ಪ್ರಾಧ್ಯಾಪಕ, ಸಾಹಿತ್ಯ ಸಂಘಟಕ, ಹೋರಾಟಗಾರ, ರಾಜಕಾರಣಿ -ಹೀಗೆ ಬಹುಮುಖೀಯಾಗಿ ಗುರುತಿಸಿಕೊಂಡಿದ್ದರು.
Advertisement
1974ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪ್ರಶಸ್ತಿಗೆ ಆಗ್ರಹಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ದಿಸೆ ತೋರಿದ ಅಡಿಗರಿಗೆ ಸರಕಾರದಿಂದ ಸಿಗಬೇಕಾಗಿದ್ದ ಗೌರವ ಸಿಕ್ಕಿಲ್ಲ ಎನ್ನುವ ಕೊರಗಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ಯೊಂದನ್ನು ಸ್ಥಾಪಿಸ ಬೇಕು ಎಂಬ ಆಗ್ರಹವಿದೆ. 2018ರಲ್ಲಿ ಅವರ ಜನ್ಮ ಶತಮಾನೋತ್ಸವವನ್ನು ಕೂಡ ಕಸಾಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಚರಿಸಲು ಮುಂದಾಗದಿರುವುದು ದುರಂತ. ಹುಟ್ಟೂರಿನಲ್ಲಿ ಸ್ಮಾರಕವಿಲ್ಲ
ಇವರ ಹೆಸರಲ್ಲಿ ಹುಟ್ಟೂರು ಮೊಗೇರಿ ಯಲ್ಲಿಯೇ ಸ್ಮಾರಕ ನಿರ್ಮಿಸಬೇಕು ಎನ್ನುವ ಬೇಡಿಕೆ ಇದೆ. ಅದಕ್ಕಾಗಿ ಕೆರ್ಗಾಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಗ ಗುರುತಿಸಿದ್ದು, ಶಾಸಕರ ನೇತೃತ್ವದಲ್ಲಿ ಥೀಂ ಪಾರ್ಕ್‌ಗೆ ಪ್ರಯತ್ನಗಳು ನಡೆಯುತ್ತಿವೆೆ. ಕೆರ್ಗಾಲಿನಲ್ಲಿ ಅವರ ಸ್ಮಾರಕ ವಾಚ ನಾಲಯವಿದೆ. ಬೆಂಗಳೂರಿನ ಕರೀಸಂದ್ರದಲ್ಲಿ ಅಡಿಗರ ಹೆಸರಲ್ಲಿ ಕಿರು ಉದ್ಯಾನವನವಿದೆ. ಸಾಹಿತ್ಯ ಸಾಧನೆ
1946ರಲ್ಲಿ ಪ್ರಕಟಗೊಂಡ “ಭಾವತರಂಗ’ ಅವರ ಮೊದಲ ಕವನ ಸಂಕಲನ. ಭೂಮಿಗೀತ, ವರ್ಧಮಾನ, ಕಟ್ಟುವೆವು ನಾವು, ನಡೆದು ಬಂದ ದಾರಿ, ಚೆಂಡೆಮದ್ದಳೆ ಸೇರಿದಂತೆ 11 ಕವನ ಸಂಕಲನಗಳು, ಆಕಾಶದೀಪ, ಅನಾಥೆ ಎಂಬ ಕಾದಂಬರಿಗಳು, ಮಣ್ಣಿನ ವಾಸನೆ, ವಿಚಾರ ಪಥ, ಕನ್ನಡದ ಅಭಿಮಾನದಂತಹ ಅನೇಕ ವೈಚಾರಿಕ ಲೇಖನಗಳು ಅವರ ಸಾಹಿತ್ಯ ಕೃಷಿಯ ಫಲ.
ಸಾಹಿತ್ಯ ಸೇವೆಗಾಗಿ ಅಡಿಗರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕೇರಳದ ಪ್ರತಿಷ್ಠಿತ ಕುಮಾರ್ ಸಮ್ಮಾನ್, ಮಧ್ಯಪ್ರದೇಶ ಸರಕಾರದ ಕಬೀರ್ ಸಮ್ಮಾನ್ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.