ಕುಂದಾಪುರ : ಬೆಂಗಳೂರಿನಲ್ಲಿ ನಡೆದ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರು ನಡೆಸಿದ ರಾಜ್ಯ ಮಟ್ಟದ ಈಜುಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಗೋಪಾಲ ಖಾರ್ವಿ ಅವರು ರಾಷ್ಟ್ರ ಮಟ್ಟಕೆ ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಕುಂದಾಪುರದ ಗುಂಡ್ಮಿ ನಿವಾಸಿ ಗೋಪಾಲ್ ಖಾರ್ವಿ ಕೋಡಿ ಕನ್ಯಾಣ ಇವರು ರಾಜ್ಯ ಮಟ್ಟದ ಈಜುಸ್ಪರ್ಧೆಯಲ್ಲಿ 200 ಮೀ ಫ್ರೀ ಸ್ಟೈಲ್‌ನಲ್ಲಿ ಚಿನ್ನದ ಪದಕ, 100 ಮೀಟರ್ ಫ್ರೀ ಸ್ಟೈಲ್‌ನಲ್ಲಿ ಚಿನ್ನದ ಪದಕ, ಹಾಗೂ 50 ಮೀ ಬಟರ್ ಫ್ಲೈ ಯಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಇವರು ಉಡುಪಿಯ ಅಜ್ಜರಕಾಡು ಈಜುಕೊಳದ ತರಬೇತುದಾರರಾಗಿದ್ದಾರೆ.
2013ರಲ್ಲಿ ಕೈ ಕಾಲುಗಳಿಗೆ ಕೋಳದಿಂದ ಬಂಧಿಸಿಕೊಂಡು ಅರಬ್ಬಿ ಸಮುದ್ರದಲ್ಲಿ 3.71 ಕಿ.ಮೀ ಈಜಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ಸಂದೇಶ ಪ್ರಶಸ್ತಿ ಇನ್ನಿತರ ಹಲವಾರು ಪ್ರಶಸ್ತಿ ಪಡೆದಿದ್ದಾರೆ.
ಅಲ್ಲದೆ ಇವರ ಜೀವನ ಚರಿತ್ರೆಯ ಕುರಿತಾಗಿ ಕರ್ಣಾಟಕ ರಾಜ್ಯದ ಒಂಬತ್ತನೆಯ ತರಗತಿಯ ಕೊಂಕಣಿ ಪಠ್ಯಪುಸ್ತಕದಲ್ಲಿ ಪಠ್ಯವು ಮುದ್ರಣಗೊಂಡಿದೆ.
ಇದನ್ನೂ ಓದಿ :ಸದನದಲ್ಲಿ ಸಿ.ಡಿ. ಪ್ರಕರಣ ಪ್ರಸ್ತಾಪಿಸಲು ಅವಕಾಶ ಕೋರಿದ ಕಾಂಗ್ರೆಸ್