Advertisement
ರಾಜ್ಯ ಸರಕಾರದ ಅನುದಾನದಡಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಪ್ರಯತ್ನದ ಫಲವಾಗಿ ಕಾಂಕ್ರೀಟೀಕರಣ ರಸ್ತೆಗೆ ಟೆಂಡರ್ ಕರೆಯಲಾಗಿದ್ದು ಟೆಂಡರ್ ವಹಿಸಿಕೊಂಡಿರುವ ಗುತ್ತಿಗೆದಾರರು ಕಾಮಗಾರಿಯ ಆರಂಭದ ಹಂತದ ಕೆಲಸ ಕಾರ್ಯಕ್ಕೆ ಅಣಿಯಾಗದಿರುವುದು ವಯೋವೃದ್ಧರಿಂದ ಮೊದಲ್ಗೊಂಡು ಪಾದಚಾರಿಗಳ ವರೆಗೆ ಕಷ್ಟಪಟ್ಟು ಈ ಮಾರ್ಗವಾಗಿ ಸಾಗಬೇಕಾದ ಸಂದಿಗ್ಧ ಪರಿಸ್ಥಿತಿಗೆ ಕೊನೆ ಕಾಣದಿರುವುದರಿಂದ ಇಲ್ಲಿನ ನಿವಾಸಿಗಳು ಗುತ್ತಿಗೆದಾರರಿಗೆ ಶಾಪ ಹಾಕುತ್ತಿದ್ದಾರೆ. ಮಳೆಗಾಲದ ಈ ಸಂದರ್ಭದಲ್ಲಿ ಕಾಮಗಾರಿ ಆರಂಭಿಸುವುದು ಸೂಕ್ತವಲ್ಲವಾಗಿದ್ದರೂ ಮುಂದಿನ ತಿಂಗಳಾದರೂ ಮಳೆ ಕಡಿಮೆಯಾದ ಸಂದರ್ಭದಲ್ಲಿ ಕಾಮಗಾರಿಗೆ ಚಾಲನೆ ನೀಡಬಹುದು ಎಂಬ ನಿರೀಕ್ಷೆಯಲ್ಲಿರುವ ಗೋಪಾಡಿ ಹಾಗೂ ವಕ್ವಾಡಿ ನಿವಾಸಿಗಳ ನಿರೀಕ್ಷೆ ಹುಸಿಯಾಗದಿರಲಿ ಎಂದು ಸಾರ್ವಜನಿಕರು ಅಳಲನ್ನು ತೋಡಿಕೊಂಡಿದ್ದಾರೆ.
ಭಾರೀ ಹೊಂಡಗಳಿಂದ ಕೂಡಿರುವ ಈ ಮಾರ್ಗದ ದುಃಸ್ಥಿತಿಯ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ 3 ಬಾರಿ ಚಿತ್ರ ಸಮೇತ ವರದಿ ಪ್ರಕಟವಾಗಿದ್ದರೂ ಕೇವಲ ಭರವಸೆಯ ಮಾತುಗಳು ಜನಪ್ರತಿನಿಧಿಗಳಿಂದ ಕೇಳಿ ಬರುತ್ತಿವೆಯೇ ಹೊರತು ಕಾಮಗಾರಿ ಆರಂಭಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಶೆ„ಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಕೈಗಾರಿಕಾ ಉದ್ಯಮಗಳನ್ನು ಹೊಂದಿರುವ ಈ ಭಾಗವು ಸಾವಿರಾರು ನಿತ್ಯ ಪ್ರಯಾಣಿಕರು ಸಾಗುವ ಮುಖ್ಯ ಮಾರ್ಗವಾಗಿದೆ.