ಮಂಗಳೂರು: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಗೋ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಸರಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ ಎಂದು ಶಾಸಕ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಬಿಜೆಪಿ ಸರಕಾರ ತನ್ನ ವೈಫಲ್ಯವನ್ನು ಮರೆಮಾಚಲು ಪೊಲೀಸರ ಮೇಲೆ ಗೂಬೆ ಕೂರಿಸುತ್ತಿದೆ. ರಾಜ್ಯ ದಲ್ಲಿ 14 ಗೋಮಾಂಸ ರಫ್ತು ಘಟಕಗಳಿದ್ದು, ಅದನ್ನು ಯಾಕೆ ಮುಚ್ಚಿಸಿಲ್ಲ. ಗೋ ಕಳ್ಳತನ ಪ್ರಕರಣಗಳನ್ನು ನಿಲ್ಲಿಸಲು ಆಗದಿದ್ದಾಗ ಗೋಹತ್ಯೆ ನಿಷೇಧ ಕಾಯ್ದೆ ಸರಕಾರದ ಕೇವಲ ನಾಟಕವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಂಚಾಯತ್‌ರಾಜ್ ವ್ಯವಸ್ಥೆಗೆ ಶಕ್ತಿ ತುಂಬುವ ಕಾರ್ಯವನ್ನು ಮಾಡಿ ಅಧಿಕಾರ ವಿಕೇಂದ್ರೀಕರಣದ ಮೂಲಕ ತಳ ಮಟ್ಟದಲ್ಲಿ ಜನರಿಗೆ ಅಧಿಕಾರ ನೀಡಿತ್ತು. ಬಿಜೆಪಿ ಸರಕಾರ ಅದನ್ನು ಕಿತ್ತು ಕೊಳ್ಳುವ ಕಾರ್ಯ ಮಾಡುತ್ತಿದೆ ಎಂದರು.
ಇದನ್ನೂ ಓದಿ:ಗುತ್ತಿಗೆಯಲ್ಲಿ ಅಕ್ರಮ : ನ್ಯಾಯಾಂಗ ತನಿಖೆ ಕೋರಿ ಎಎಪಿಯಿಂದ ರಾಜ್ಯಪಾಲರ ಭೇಟಿ
ನಳಿನ್ ಕಾಂಗ್ರೆಸ್‌ಗೆ ಸೇರಲಿ
ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಬರಲಿ ಎನ್ನುವ ಸಂಸದ ನಳಿನ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಳಿನ್ ಕಾಂಗ್ರೆಸ್ ಸೇರುವುದು ಒಳಿತು ಎಂದರು.