Advertisement
ಗೂಗಲ್ ಮುಖಪುಟಕ್ಕೆ ಡೂಡಲ್ ಎಂದು ಕರೆಯಲಾಗುತ್ತದೆ. ಗೂಗಲ್‌ನ ಡೂಡಲ್‌ಗಳು ಪ್ರಪಂಚದ ಸಮಸ್ಯೆಗಳು, ಐತಿಹಾಸಿಕ ಘಟನೆಗಳು ಮತ್ತು ಪ್ರಪಂಚದಾದ್ಯಂತದ ಆಚರಣೆಗಳನ್ನು ಹೈಲೈಟ್ ಮಾಡಲು ಬಳಸುವ ಸಾಧನವಾಗಿದ್ದು, ಇವು ತಾತ್ಕಾಲಿಕ ಬದಲಾವಣೆಯಾಗುವ ಗೂಗಲ್ ಮುಖಪುಟಗಳಲ್ಲಿನ ಲೋಗೋವಾಗಿದೆ. ರಜಾದಿನಗಳು, ವಿಶೇಷ ಘಟನೆಗಳು, ಸಾಧನೆಗಳು ಮತ್ತು ಗಮನಾರ್ಹ ಐತಿಹಾಸಿಕ ವ್ಯಕ್ತಿಗಳನ್ನು ಸ್ಮರಿಸುವ ಉದ್ದೇಶದಿಂದ ಗೂಗಲ್‌ನ ಡೂಡಲ್ ಅನ್ನು ಮಾಡಲಾಗಿದೆ.
Related Articles
Advertisement
ಆರಂಭದಲ್ಲಿ, ಡೂಡಲ್‌ಗಳು ಅನಿಮೇಟೆಡ್ ಅಥವಾ ಹೈಪರ್‌ಲಿಂಕ್ ಆಗಿರಲಿಲ್ಲ. ಅವು ವಿಷಯವನ್ನು ವಿವರಿಸುವ ಅಥವಾ ರಜಾದಿನದ ಶುಭಾಶಯವನ್ನು ವ್ಯಕ್ತಪಡಿಸುವ ಟೂಲ್‌ಟಿಪ್ಸ್ ಗಳೊಂದಿಗೆ ಸರಳ ಚಿತ್ರಗಳಾಗಿದ್ದವು. 2010ರ ದಶಕದಲ್ಲಿ ಡೂಡಲ್‌ಗಳ ಆವರ್ತನ ಮತ್ತು ಸಂಕೀರ್ಣತೆ ಎರಡರಲ್ಲೂ ಹೆಚ್ಚಾಯಿತು. ಆರಂಭಿಕ ದಿನಗಳಲ್ಲಿ, ಗೂಗಲ್ ತನ್ನ ಮುಖಪುಟದಲ್ಲಿ ಡೂಡಲ್ ಅನ್ನು ವಿರಳವಾಗಿ ಬದಲಾಯಿಸುತ್ತಿತ್ತು. ಆದರೆ ಈಗ ಡೂಡಲ್ ಪ್ರತಿದಿನವೂ ಬದಲಾಗುವುದನ್ನು ಕಾಣಬಹುದು.
ಜನವರಿ 2010ರಲ್ಲಿ ಮೊದಲ ಅನಿಮೇಟೆಡ್ ಡೂಡಲ್ ಸರ್ ಐಸಾಕ್ ನ್ಯೂಟನ್ ಅವರನ್ನು ಗೌರವಿಸಿತು. ಮೊದಲ ಸಂವಾದಾತ್ಮಕ ಡೂಡಲ್ ಸ್ವಲ್ಪ ಸಮಯದ ಅನಂತರ ಪ್ಯಾಕ್-ಮ್ಯಾನ್ ಅನ್ನು ಬಳಸಿತು ಮತ್ತು ಡೂಡಲ್‌ಗಳಿಗೆ ಹೈಪರ್‌ಲಿಂಕ್‌ಗಳನ್ನು ಸೇರಿಸಲು ಪ್ರಾರಂಭಿಸಿತು. ಡೂಡಲ್‌ನ ಮಾಹಿತಿಯನ್ನು ತನ್ನ ಮುಖಪುಟಕ್ಕೆ ಲಿಂಕ್ ಮಾಡಿತು.
2014ರ ಹೊತ್ತಿಗೆ, ಗೂಗಲ್ ತನ್ನ ಮುಖಪುಟಗಳಲ್ಲಿ 2,000 ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಡೂಡಲ್‌ಗಳನ್ನು ಪ್ರಕಟಿಸಿತು. ಆಗಾಗ್ಗೆ ಅತಿಥಿ ಕಲಾವಿದರು, ಸಂಗೀತಗಾರರು ಮತ್ತು ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ ಡೂಡ್ಲರ್‌ಗಳ ತಂಡವು ಪ್ರಪಂಚದಾದ್ಯಂತ ಗೂಗಲ್‌ನ ಮುಖಪುಟಗಳಿಗಾಗಿ 5,000 ಹೆಚ್ಚು ಡೂಡಲ್‌ಗಳನ್ನು ರಚಿಸಿದೆ. ಅನೇಕ ಪ್ರಸಿದ್ಧ ಘಟನೆಗಳು ಮತ್ತು ರಜಾದಿನಗಳನ್ನು ಆಚರಿಸುವುದರ ಜತೆಗೆ, ಕಲಾವಿದರು ಮತ್ತು ವಿಜ್ಞಾನಿಗಳ ಜನ್ಮದಿನದಂದೂ ಗೂಗಲ್ ಡೂಡಲ್ ಕಾಣಸಿಗುತ್ತದೆ.
ಕೆಲವು ಗೂಗಲ್ ಡೂಡಲ್‌ಗಳು ಗೂಗಲ್‌ನ ದೇಶ-ನಿರ್ದಿಷ್ಟ ಮುಖಪುಟಗಳಿಗೆ ಸೀಮಿತವಾಗಿದ್ದರೆ ಇತರ ಡೂಡಲ್‌ಗಳು ಜಾಗತಿಕವಾಗಿ ಗೋಚರಿಸುತ್ತವೆ. ಕೇವಲ ಡೂಡಲ್‌ಗಳು ಮಾತ್ರವಲ್ಲದೆ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.
ಡೂಡಲ್‌ಗಳ ಕಲ್ಪನೆಗಳು ಡೂಡ್ಲರ್ ಮತ್ತು ಗೂಗಲ್ ಬಳಕೆದಾರರನ್ನು ಒಳಗೊಂಡಂತೆ ಹಲವಾರು ಮೂಲಗಳಿಂದ ಬರುತ್ತವೆ. ಬಳಕೆದಾರರು ಮುಂದಿನ ಗೂಗಲ್ ಡೂಡಲ್‌ಗಾಗಿ ಆಲೋಚನೆಗಳೊಂದಿಗೆ doodleproposals@google.comಗೆ ಇ-ಮೇಲ್ ಮಾಡಬಹುದು. ತಂಡವು ಪ್ರತಿದಿನ ನೂರಾರು ವಿನಂತಿಗಳನ್ನು ಸ್ವೀಕರಿಸುತ್ತದೆ. ಇಲ್ಲಿವರೆಗಿನ ಎಲ್ಲ ಗೂಗಲ್ ಡೂಡಲ್ ನೋಡಬೇಕಾದರೆ ಅಧಿಕೃತ ಡೂಡಲ್ ಆರ್ಕೈವ್‌ನಲ್ಲಿ ಲಭ್ಯವಿವೆ.
-ಸಿಂಧು ಕೆ.ಟಿ.ಕುವೆಂಪು ವಿಶ್ವವಿದ್ಯಾಲಯ