ನವದೆಹಲಿ: ವಿಶ್ವದ ಜನಪ್ರಿಯ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಗ್ರಾಹಕರಿಗೆ ನೀಡಿದ್ದ ‘ಗೂಗಲ್ ಪೋಟೋಸ್’ ನಲ್ಲಿ ಉಚಿತವಾಗಿ ಪೋಟೋ ಅಪ್ಲೋಡ್ ಮಾಡುವ ಸೌಲಭ್ಯವನ್ನು ಅಂತ್ಯಗೊಳಿಸಲಿದೆ.
ಸರಿಸುಮಾರು 4 ಟ್ರಿಲಿಯನ್ ನಷ್ಟು ಪೋಟೋ ಹಾಗೂ ವಿಡಿಯೋ ಒಳಗೊಂಡಿರುವ ಗೂಗಲ್ ಪೋಟೋಸ್ ತನ್ನ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದು, ಮುಂಬರುವ 2021 ರ ಜೂನ್ 1ರಿಂದ ಉಚಿತ ಪೋಟೋ ಅಪ್ಲೋಡ್ ಸೌಲಭ್ಯಕ್ಕೆ ಬ್ರೇಕ್ ಹಾಕಲಿದೆ.
ಈಗಿನ ನೀತಿಯ ಪ್ರಕಾರ ಅಧಿಕ ಗುಣಮಟ್ಟದ, 16 ಎಂಪಿ ಗೆ ಕಂಪ್ರೆಸ್ ಮಾಡಲಾಗಿರುವ ಫೋಟೋ ಹಾಗೂ ವಿಡಿಯೋಗಳನ್ನು ಅನಿಯಮಿತವಾಗಿ ಬ್ಯಾಕ್ ಅಪ್ ಮಾಡಬಹುದಾಗಿದೆ. ಮೂಲ ಫೋಟೋಗಳನ್ನು ಬ್ಯಾಕ್ ಅಪ್ ಗೆ ಈಗಾಗಲೇ ನೀವು ಆಯ್ಕೆ ಮಾಡಿದಲ್ಲಿ ಗೂಗಲ್ ಸ್ಟೋರೇಜ್ ಮಿತಿಯಲ್ಲೇ ಅದನ್ನು ಪರಿಗಣಿಸಲಾಗುತ್ತದೆ.
ಇದರ ಜೊತೆಗೆ ಎರಡು ವರ್ಷಗಳಿಂದ ನಿಷ್ಕ್ರೀಯಗೊಂಡಿರುವ ಖಾತೆಗಳನ್ನು ಡಿಲಿಟ್ ಮಾಡುವ ಆಲೋಚನೆಯನ್ನೂ ಗೂಗಲ್ ಮಾಡುತ್ತಿದೆ ಎಂದು ವರದಿಯಾಗಿದೆ.
Related Articles
ಇದನ್ನೂ ಓದಿ:ಕೇಂದ್ರದಿಂದ ಎಪಿಎಂಸಿ ಕಾಯ್ದೆ ದುರ್ಬಲಗೊಳಿಸುವ ಹುನ್ನಾರ
ಹೊಸ ನಿಯಮವೇನು?
ಹೊಸ ನಿಯಮದ ಅನ್ವಯ ಪ್ರತಿ ಗ್ರಾಹಕರಿಗೆ 15 ಜಿ.ಬಿ ಮಿತಿಯ ವ್ಯಾಪ್ತಿಯನ್ನು ಗೂಗಲ್ ನೀಡಲಿದ್ದು, ಹೆಚ್ಚು ಸ್ಟೋರೇಜ್ ಮಿತಿ ಅಗತ್ಯವಿರುವವರು ಗೂಗಲ್ ಒನ್ ನ ಚಂದಾದಾರರಾಗಬೇಕಾಗುತ್ತದೆ. ಜೂ.2021 ರವರೆಗೆ ಈಗಿನ ಗ್ರಾಹಕರಿಗೆ ಹೊಸ ನಿಯಮಗಳಿಂದ ವಿನಾಯಿತಿ ಸಿಗಲಿದೆ ಎಂದು ಗೂಗಲ್ ತಿಳಿಸಿದೆ.