ಕ್ಯಾನ್ ಬೆರ್ರಾ: ಸರ್ಚ್ ಎಂಜಿನ್ ದೈತ್ಯ ಗೂಗಲ್ ಪತ್ರಿಕೋ ದ್ಯಮದಲ್ಲಿ ತನ್ನ ಬಾಹುಗಳನ್ನು ವಿಸ್ತರಿಸಲು ಮುಂದಾಗಿದ್ದು, ಈ ಭಾಗವಾಗಿ ಆಸೀಸ್‌ನ ದೊಡ್ಡ ಸುದ್ದಿ ಸಂಸ್ಥೆ ಸೆವೆನ್ ವೆಸ್ಟ್ ಮೀಡಿ ಯಾದೊಂದಿಗೆ ಬಹು ಲಕ್ಷ ಕೋಟಿ ಡಾಲರ್ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಸುದ್ದಿಗೆ ಪಾವತಿ ಮಾಡಲೇಬೇಕು ಎಂಬ ಆಸಿಸ್ ಸರ್ಕಾರದ ಕಟು ನಿಲುವಿಗೆ ಗೂಗಲ್ ಶರಣಾಗಿದೆ.
ಇದನ್ನೂ ಓದಿ:ಟೂಲ್‌ಕಿಟ್ ರಚಿಸಿದ್ದೇ ದಿಶಾ, ನಿಕಿತಾ, ಶಂತನು! ಟೆಲಿಗ್ರಾಂ ಮೂಲಕ ಥನ್‌ಬರ್ಗ್‌ಗೆ ರವಾನೆ
ಇದರ ಅನ್ವಯ, ಗೂಗ ಲ್‌ನ “ನ್ಯೂಸ್ ಶೋಕೇಸ್’ ಆ್ಯಪ್‌ನಲ್ಲಿ ಇನ್ನು ಮುಂದೆ ಸೆವೆನ್ ವೆಸ್ಟ್ ಮೀಡಿಯಾದ ಟಿವಿ, ಪತ್ರಿಕೆಗಳ ಸುದ್ದಿ – ಲೇಖನಗಳು ಪ್ರಕಟಗೊಳ್ಳಲಿವೆ. ಗೂಗಲ್, ಫೇಸ್ ಬುಕ್‌ನಂಥ ಡಿಜಿಟಲ್ ದೈತ್ಯರು ಸುದ್ದಿಗಳಿಗೆ ಹಣ ಪಾವತಿಸ ಬೇಕು ಎಂಬ ವಿಚಾರವಾಗಿ ಆಸ್ಟ್ರೇಲಿಯಾ ಸಂಸತ್‌ನಲ್ಲಿ ಮಸೂದೆ ಮಂಡನೆಯಾಗಿದೆ. ಇದರ ಜಾರಿಗೂ ಮುನ್ನವೇ ಗೂಗಲ್ ಈ ಕ್ರಮಕ್ಕೆ ಮುಂದಾಗಿದೆ.
ಏನಿದು ಆಸೀಸ್ ಕಾನೂನು?:ಈ ಉದ್ದೇಶಿತ ಕಾಯ್ದೆ, ಡಿಜಿ ಟಲ್ ಮಾಧ್ಯಮಗಳ ಮುಂದೆ ಕುಸಿಯುತ್ತಿರುವ ಮುದ್ರಣ ಮಾಧ್ಯಮಕ್ಕೆ ಬಲ ತುಂಬಲಿದೆ. ಪತ್ರಿಕೆಗಳ ಸುದ್ದಿಕೊಂಡಿಗ ಳನ್ನು, ಬರಹಗಳನ್ನು ಗೂಗಲ್, ಫೇಸ್‌ಬು ಕ್ ಬಳಸಿಕೊಳ್ಳು ತ್ತಿದ್ದು, ಇದರಿಂದ ಮುದ್ರಣ ಮಾಧ್ಯಮಗಳ ಆರ್ಥಿಕ ನಷ್ಟಕ್ಕೆ ಇಳಿದಿವೆ. ಇದನ್ನು ಸರಿದೂಗಿಸುವ ಸಲುವಾಗಿ “ಆಸ್ಟ್ರೇ ಲಿಯಾ ನ್ಯೂಸ್ ಮೀಡಿಯಾ ಬಾರ್ಗೇನಿಂಗ್ ಕೋಡ್’ ಜಾರಿಗೊಳಿಸಿದೆ. ಈ ಪ್ರಕಾ ರ, “ಮುದ್ರಣ ಮಾಧ್ಯಮಗಳ
ಸುದ್ದಿ, ಲಿಂಕ್ ಗಳನ್ನು ಗೂಗಲ್, ಫೇಸ್ ಬುಕ್ ನಂಥ ಡಿಜಿ ಟಲ್ ದೈತ್ಯರು ಬಳಸಿಕೊಂಡಿದ್ದೇ ಆದಲ್ಲಿ ಅದಕ್ಕೆ ತಕ್ಕ ಹಣ ಪಾವತಿಸುವುದು ಕಡ್ಡಾಯ’ ಎನ್ನುತ್ತೆ ಕಾನೂನು.
ಮೊದಲ ಹೆಜ್ಜೆ: ಇದರ ಭಾಗವಾಗಿಯೇ ಈಗ ಕಾಯ್ದೆ ಜಾರಿಗೂ ಮುನ್ನ ಗೂಗಲ್, ಸೆವೆನ್ ವೆಸ್ಟ್ ಮೀಡಿಯಾ ಒಟ್ಟು 21 ಪಬ್ಲಿ ಕೇಷನ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇವುಗಳ ಸುದ್ದಿಗಳು ಇನ್ನು ಗೂಗಲ್ ನ್ಯೂಸ್ ಶೋಕೇಸ್ ಆ್ಯಪ್‌ನಲ್ಲಿ ಪ್ರಕಟಗೊಳ್ಳಲಿವೆ.
ಈಗಾಗಲೇ ಜಗತ್ತಿನ 450 ಪಬ್ಲಿಕೇಷನ್ ಗಳ ಬರಹಗಳನ್ನು ಗೂಗಲ್ ತನ್ನ ನ್ಯೂಸ್ ಆ್ಯಪ್ ನಲ್ಲಿ ಪ್ರಕಟಿಸುತ್ತಿದ್ದು, ಅದಕ್ಕೆ ಸೂಕ್ತ ಸಂಭಾವನೆಯನ್ನೂ ನೀಡುತ್ತಿ ದೆ. ಗೂಗಲ್ ಈ ಆ್ಯಪ್ ಅನ್ನು ನವೆಂಬರ್ ನಲ್ಲಿ ಬಿಡುಗಡೆಗೊಳಿಸಿದೆ.