Advertisement

70ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಗೂಗಲ್ ವಿಶೇಷ ಡೂಡಲ್

03:15 AM Jan 26, 2019 | Team Udayavani |

ನವದೆಹಲಿ: ವಿಶೇಷ ಸಂದರ್ಭಗಳಲ್ಲಿ ಮತ್ತು ಮಹಾನ್ ವ್ಯಕ್ತಿಗಳ ಸಾಧನೆಯ ನೆನಪಿಗೆ ಸ್ಪೆಷಲ್ ಡೂಡಲ್ ಮೂಲಕ ಗೌರವ ಅರ್ಪಿಸುವ ಪರಿಪಾಠವನ್ನು ಇರಿಸಿಕೊಂಡಿರುವ ಸರ್ಚ್ ಇಂಜಿನ್ ಗೂಗಲ್ 70ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸ್ಪೆಷಲ್ ಡೂಡಲ್ ಒಂದನ್ನು ರಚಿಸಿದೆ.

Advertisement

ಅತ್ಯಾಕರ್ಷಕ ಬಣ್ಣಗಳಿಂದ ಕೂಡಿರುವ ಈ ಡೂಡಲ್, ಭಾರತದ ವೈವಿಧ್ಯಮಯ ಸಂಸ್ಕೃತಿಯ ಪ್ರತೀಕವೆಂಬಂತೆ ಹಲವು ಬಣ್ಣಗಳನ್ನು ಬಳಸಿಕೊಂಡು ಡೂಡಲ್ ರಚಿಸಿದೆ. ಇದು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಇನ್ನು GOOGLE ಅಕ್ಷರಗಳನ್ನು ಗಣರಾಜ್ಯೋತ್ಸವ ಸಂಭ್ರಮದ ವಿಶೇಷ ಆಕರ್ಷಣೆಯಾಗಿರುವ ವಿವಿಧ ರಾಜ್ಯಗಳ ಸಂಸ್ಕೃತಿ, ಜನಜೀವನವನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳ ಮಾದರಿಯಲ್ಲಿ ಬರೆಯಲಾಗಿದೆ ಐತಿಹಾಸಿಕ ಕುತುಬ್ ಮಿನಾರ್ ‘L’ ಅಕ್ಷರವನ್ನು ಪ್ರತಿನಿಧಿಸುತ್ತಿದೆ. ಹಿನ್ನಲೆಯಲ್ಲಿ ರಾಷ್ಟ್ರಪತಿ ಭವನದ ಚಿತ್ರಣವನ್ನು ನೀಡಲಾಗಿದೆ.


ಒಟ್ಟಿನಲ್ಲಿ ಭಿನ್ನ ಸಂಸ್ಕೃತಿ, ಆಚಾರ ವಿಚಾರ, ಜನಜೀವನಗಳನ್ನು ಒಳಗೊಂಡಿರುವ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿರುವ ಭವ್ಯ ಭಾರತವು ಗಣರಾಜ್ಯವಾಗಿ ಹೊರಹೊಮ್ಮಿದ 70ನೇ ವರ್ಷದ ಸಂಭ್ರಮಕ್ಕೆ ನಂಬರ್ 1 ಸರ್ಚ್ ಇಂಜಿನ್ ಗೂಗಲ್ ಅರ್ಥಪೂರ್ಣ ಡೂಡಲ್ ಮೂಲಕ ಗೌರವ ಸಲ್ಲಿಸಿರುವುದು ಭಾರತೀಯರಿಗೆಲ್ಲ ಹೆಮ್ಮೆಯ ವಿಷಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next