Advertisement

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

12:42 AM Apr 24, 2024 | Team Udayavani |

ಮಂಗಳೂರು: ಈ ಬಾರಿ ಚುನಾವಣೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಪರಿಹರಿಸಲು ಎ. 25ರಂದು ಬೆಂಗಳೂರಿನಿಂದ ಹಾಗೂ ಮತ ಚಲಾಯಿಸಿ ಮರಳಲು ಎ. 26ರಂದು ವಿಶೇಷ ರೈಲು ಸಂಚರಿಸಲಿದೆ.

Advertisement

ನಂ. 06553 ಸರ್‌ ಎಂವಿಶ್ವೇಶ್ವರಯ್ಯ (ಎಸ್‌ಎಂವಿಬಿ) ಬೆಂಗಳೂರು-ಮಂಗಳೂರು ಸೆಂಟ್ರಲ್‌ ವಿಶೇಷ ರೈಲು ಬೆಂಗಳೂರಿನಿಂದ ಎ. 25ರ ಸಂಜೆ 6 ಗಂಟೆಗೆ ಹೊರಡಲಿದ್ದು ಮರುದಿನ ಬೆಳಗ್ಗೆ 10ಕ್ಕೆ ಮಂಗಳೂರು ಸೆಂಟ್ರಲ್‌ ತಲಪುವುದು. ಮರುಪ್ರಯಾಣದಲ್ಲಿ ನಂ. 06554 ಮಂಗಳೂರು ಸೆಂಟ್ರಲ್‌ನಿಂದ 26ರ ಮಧ್ಯಾಹ್ನ 12ಕ್ಕೆ ಹೊರಟು ಮರುದಿನ ಮುಂಜಾನೆ 3ಕ್ಕೆ ಬೆಂಗಳೂರು ತಲಪುವುದು.

ಆದರೆ ಈ ರೈಲುಗಳು ಸೇಲಂ, ಈರೋಡ್‌, ಕೊಯಂಬತ್ತೂರು, ಶೋರ್ನೂರು ಜಂಕ್ಷನ್‌ ಮೂಲಕವಾಗಿ ಸಂಚರಿಸಲಿದ್ದು ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸಲು ಹೆಚ್ಚು ಅವಧಿ ತೆಗೆದುಕೊಳ್ಳುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next