Advertisement

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

04:51 PM Mar 28, 2024 | Team Udayavani |

ತಮಿಳುನಾಡು: ಇತ್ತೀಚಿನ ದಿನಗಳಲ್ಲಿ ರಾಜಕೀಯಕ್ಕೆ ಸೇರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ, ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹೆಚ್ಚಿನ ಜನರು ಮುಂದೆ ಬರುತ್ತಿದ್ದಾರೆ, ಅದೂ ಅಲ್ಲದೆ ಜನ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ ಜೊತೆಗೆ ತಮ್ಮ ಊರಿಗೆ ಏನಾದರು ಮಾಡಬೇಕು ಊರನ್ನು ಅಭಿವೃದ್ಧಿ ಮಾಡಬೇಕು ಎಂಬುದು ಹೆಚ್ಚಿನವರ ಮಹದಾಸೆ ಆದರೆ ಇಲ್ಲೊಬ್ಬರು ಕಳೆದ ಮೂರೂ ದಶಕಗಳಿಂದ ಸುಮಾರು 238 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ ಮತ್ತೆ ಛಲ ಬಿಡದೆ ಈ ಬಾರಿ ಮತ್ತೆ ಚುನಾವಣಾ ಅಖಾಡಕ್ಕೆ ಸಜ್ಜಾಗಿದ್ದಾರೆ.

Advertisement

ಬನ್ನಿ ಹಾಗಾದರೆ ಯಾರು ಆ ವ್ಯಕ್ತಿ ಏನು ಅವರ ಸಾಧನೆ ಚುನಾವಣೆಯಲ್ಲಿ ನಿರಂತರ ಸೋತರೂ ಮತ್ತೆ ಮತ್ತೆ ಸ್ಪರ್ಧಿಸಲು ಎಂದು ಕಾರಣ ಎಂಬುದನ್ನು ತಿಳಿಯೋಣ.

ಆ ವ್ಯಕ್ತಿಯ ಹೆಸರು ಕೆ. ಪದ್ಮರಾಜನ್, ತಮಿಳುನಾಡಿನ ಮೆಟ್ಟೂರು ಮೂಲದ ನಿವಾಸಿ. ಊರಿನಲ್ಲಿ ಪಂಚರ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ ಪದ್ಮರಾಜನ್ ಅವರಿಗೆ ಈಗ 65 ವರ್ಷ ವಯಸ್ಸು.. ಸುಮಾರು ಮೂರೂ ದಶಕಗಳಿಂದ ಅಂದರೆ 1988ರಿಂದಲೇ ಇವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಆದರೆ ದುರದೃಷ್ಟವಶಾತ್ ಇದುವರೆಗೆ ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ.

‘ಯುದ್ಧಕ್ಕೆ ಹೋಗುವುದು ಎಂದರೆ ಯಾವಾಗಲೂ ಗೆಲ್ಲುವುದು ಎಂದಲ್ಲ, ಆದರೆ ಯುದ್ಧಭೂಮಿಯಲ್ಲಿ ನಿಮ್ಮ ಅಸ್ತಿತ್ವವನ್ನು ತಿಳಿಸುವುದು ಮುಖ್ಯವಾಗಿರುತ್ತೆ ಎಂದು ಪದ್ಮರಾಜನ್ ಮನಃಪೂರ್ವಕವಾಗಿ ಹೇಳುತ್ತಾರೆ.

ಮೊಟ್ಟಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದಾಗ ಆ ಪ್ರದೇಶದ ಜನರು ಮಾತ್ರವಲ್ಲ, ಅವರ ಆಪ್ತರು ಕೂಡ ಅವರನ್ನು ಗೇಲಿಮಾಡುತ್ತಿದ್ದರಂತೆ ಆದರೆ ಇದು ಯಾವುದಕ್ಕೂ ಅವರು ಅಂಜಲಿಲ್ಲವಂತೆ ಅಲ್ಲದೆ ಅವರ ಉದ್ದೇಶ ಚುನಾವಣೆ ಎಂಬುದು ಕೇವಲ ದುಡ್ಡಿದ್ದವರಿಗೆ ಮಾತ್ರವಲ್ಲ, ಸಾಮಾನ್ಯ ದುಡಿಯುವ ಜನರೂ ರಾಜಕೀಯದ ಭಾಗವಾಗಬಲ್ಲರು ಎಂಬುದನ್ನು ತೋರಿಸಿಕೊಡಬೇಕು ಎಂಬುದು ಅವರ ನಿಲುವು. ಅಷ್ಟು ಮಾತ್ರವಲ್ಲದೆ ಪ್ರತಿಯೊಬ್ಬ ಚುನಾವಣಾ ಸ್ಪರ್ಧಿಯು ಚುನಾವಣಾ ಅಖಾಡಕ್ಕೆ ಇಳಿದ ಬಳಿಕ ತಾನು ಗೆಲ್ಲಬೇಕು ಎಂದು ಬಯಸುತ್ತಾರೆ ಆದರೆ ಅದು ನನ್ನ ಗುರಿಯಲ್ಲ.” ಪದ್ಮರಾಜನ್ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗಿರುವುದು ನನಗೆ ಸಂದ ಜಯವಾಗಿದೆ ಎಂದು ಹೇಳುತ್ತಾರೆ. ಸೋಲುವುದು ಅನಿವಾರ್ಯ. ಆದರೆ, 238 ಬಾರಿ ಸೋತರೂ ಪಶ್ಚಾತ್ತಾಪ ಪಡುತ್ತಿಲ್ಲ, ಸೋತರೂ ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ.

Advertisement

ಚುನಾವಣಾ ರಾಜ:
ಲೋಕಸಭೆ ಚುನಾವಣೆಗೆ ಏಪ್ರಿಲ್ 19 ರಿಂದ ಮತದಾನ ಆರಂಭವಾಗಲಿದೆ. 65 ವರ್ಷದ ಪದ್ಮರಾಜನ್ ಈಗ ತಮಿಳುನಾಡಿನ ಧರ್ಮಪುರಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸ್ಥಳೀಯ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೆ ಪದ್ಮರಾಜನ್ ಇಲ್ಲಿಯವರೆಗೂ ಯಾವುದೇ ಚುನಾವಣೆಯನ್ನು ಬಿಟ್ಟುಕೊಟ್ಟಿಲ್ಲ. ಅಷ್ಟು ಮಾತ್ರವಲ್ಲದೆ ನರೇಂದ್ರ ಮೋದಿಯಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿಯವರ ವಿರುದ್ಧ ಸ್ಪರ್ಧೆಗಿಳಿದು ಸೋತಿದ್ದಾರೆ. ಇಷ್ಟಾದರೂ ಚುನಾವಣೆಗೆ ಸ್ಪರ್ಧಿಸುವ ಅಸೆ ಮಾತ್ರ ಕಡಿಮೆಯಾಗಿಲ್ಲ, ಆ ಕಾರಣಕ್ಕೆ ಕೆಲವರು ಅವರನ್ನು ‘ಚುನಾವಣಾ ರಾಜ’ ಎಂದು ಕರೆಯುತ್ತಿದ್ದರು. ಅಲ್ಲದೆ ದೇಶದಲ್ಲಿ ಅತಿ ಹೆಚ್ಚು ಬರು ಚುನಾವಣೆಯಲ್ಲಿ ಸೋತಿರುವ ಪದ್ಮರಾಜನ್ ಅವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕಾಣಿಸಿಕೊಂಡಿದೆ.

ಯಾರೇ ಅಭ್ಯರ್ಥಿಯಾದರೂ ತಲೆಕೆಡಿಸಿಕೊಳ್ಳಲ್ಲ:
ಪದ್ಮರಾಜನ್ ಹೇಳುವುದು ಒಂದೇ ನನಗೆ ಗೆಲುವು ಮುಖ್ಯವಲ್ಲ ಚುನಾವಣೆಯಲ್ಲಿ ಭಾಗವಹಿಸುವುದು ಮುಖ್ಯ, ನನ್ನ ಎದುರು ಯಾರೇ ಅಭ್ಯರ್ಥಿಯಾದರೂ ನಾನು ತಲೆಕೆಡಿಸಿಕೊಳ್ಳಲ್ಲ ಯಾಕೆಂದರೆ ನನಗೆ ಗೆಲುವು ಮುಖ್ಯವಲ್ಲ ಹಾಗಾಗಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸರಿ ನಾನು ಅವರ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಾರೆ.

ಆರ್ಥಿಕ ನಷ್ಟ :
ಕಳೆದ ಸುಮಾರು ಮೂರೂ ದಶಕಗಳಿಂದ ಕೇವಲ ಚುನಾವಣೆಗೆ ಸ್ಪರ್ಧಿಸಿ ಸೋತಿರುವ ಪದ್ಮರಾಜನ್ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಪ್ರಚಾರ ಮತ್ತು ಅವರ ಖರ್ಚುವೆಚ್ಚಗಳಿಗೆ ಅವರ ಕೈಯಿಂದಲೇ ಹಣ ಖರ್ಚು ಮಾಡುತ್ತಿದ್ದರಿಂದ ಆರ್ಥಿಕ ನಷ್ಟವನ್ನೂ ಎದುರಿಸಿದ್ದರು. ಚುನಾವಣೆಯಲ್ಲಿ ಶೇಕಡಾ 16ರಷ್ಟಾದರೂ ಮತ ಪಡೆಯಬೇಕು ಇಲ್ಲವಾದರೆ ಠೇವಣಿ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಗೊತ್ತಿದ್ದರೂ ಸ್ಪರ್ಧೆ ಮಾಡುವ ಉತ್ಸಾಹ ಕಡಿಮೆಯಾಗಿಲ್ಲ, ಇದರ ಫಲವಾಗಿ ಕಳೆದ ಬಾರಿ ಪದ್ಮರಾಜನ್ 25 ಸಾವಿರ ರೂ. ಕಳೆದುಕೊಂಡಿದ್ದರಂತೆ.

Advertisement

Udayavani is now on Telegram. Click here to join our channel and stay updated with the latest news.

Next