ನವದೆಹಲಿ:ಪ್ರತಿವರ್ಷ ದೇಶದಲ್ಲಿ ನವೆಂಬರ್ 5ನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಮಾಜಿ ರಾಷ್ಟ್ರಪತಿ, ಶಿಕ್ಷಕ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂಟರ್ನೆಟ್ ದಿಗ್ಗಜ ಗೂಗಲ್ ಶನಿವಾರ (ಸೆಪ್ಟೆಂಬರ್ 5,2020) ವಿಶೇಷ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ.
ಶಾಲಾ ದಿನಗಳನ್ನು ನೆನಪಿಸುವ ಕಲಿಕೆಯ ಬಣ್ಣ, ಬಣ್ಣದ ವಸ್ತುಗಳ ವಿಶೇಷ ಡೂಡಲ್ ಅನ್ನು ಗೂಗಲ್ ಪ್ರಕಟಿಸುವ ಮೂಲಕ ಶಿಕ್ಷಕರ ದಿನಾಚರಣೆಗೆ ವಿಶೇಷ ಗೌರವ ನೀಡಿರುವುದು ವಿಶಿಷ್ಟವಾಗಿದೆ.
ವಿವಿಧ ವಿಷಯಗಳನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವ ಮೂಲಕ ಹೇಗೆ ಮಕ್ಕಳ ಜ್ಞಾನ ಭಂಡಾರವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ಅಂಶವನ್ನು ಗೂಗಲ್ ಡೂಡಲ್ ಹೈಲೈಟ್ ಮಾಡಿದೆ.
ಅನುಪಮವಾದ ಜ್ಞಾನವನ್ನು ಧಾರೆ ಎರೆಯುವ ಶಿಕ್ಷಕರ ಸೇವೆಯನ್ನು ಗೂಗಲ್ ಅಭಿನಂದಿಸಿದೆ. ಶಿಕ್ಷಕರನ್ನು ಅಭಿನಂದಿಸುವ ಅವಕಾಶ ದೊರಕಿದ್ದು ನಮಗೆ ಸಿಕ್ಕ ಉತ್ತಮ ಅವಕಾಶವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದೆ.