ಹಕ್ಕಿಗೊಂದು “ಗೂಡು’ ಇರುವಂತೆ ಮನುಷ್ಯನಿಗೂತನ್ನದೇ ಆದ “ಗೂಡು’ (ಮನೆ) ಇರಬೇಕೆಂಬಕನಸಿರುತ್ತದೆ. ಆದರೆ ಜನ ಸಾಮಾನ್ಯರು ಇಂದಿನಕಾಲಮಾನದಲ್ಲಿ ತಮ್ಮದೇ ಆದ “ಗೂಡು’ಕಟ್ಟಲು ಎಷ್ಟೆಲ್ಲಪರದಾಟ ಪಡುತ್ತಾರೆ ಅನ್ನೋದನ್ನ ಇಲ್ಲೊಂದು ಚಿತ್ರತಂಡತೆರೆ ಮೇಲೆ ಹೇಳು ಹೊರಟಿದೆ.
ಅಂದ ಹಾಗೆ, ಮನೆಕಟ್ಟುವಪರದಾಟ ಅದರ ಸುತ್ತ ನಡೆಯುವ ಭಾವನಾತ್ಮಕ ಸನ್ನಿವೇಶಗಳ ಸುತ್ತ ನಡೆಯುವ ಈ ಚಿತ್ರಕ್ಕೆ “ಗೂಡು’ಎಂದೇ ಹೆಸರಿಡಲಾಗಿದೆ.
ಕೆಲ ವರ್ಷಗಳ ಹಿಂದೆ “ತರಂಗ’ವಾರಪತ್ರಿಕೆಯಲ್ಲಿ ಪ್ರಕಟವಾದ ಟಿ. ಎಸ್ ನಾಗರಾಜ್‌ಅವರ “ಸಾವಿನ ನಂತರ’ಕಥೆಯನ್ನು ಆಧಾರಿಸಿ ಈ ಚಿತ್ರತಯಾರಾಗುತ್ತಿದ್ದು, ಒಂದಷ್ಟು ಬದಲಾವಣೆಗಳೊಂದಿಗೆಇಂದಿನಕಾಲಘಟಕ್ಕೆ ಒಪ್ಪುವಂತೆ ಚಿತ್ರವನ್ನು ತೆರೆಮೇಲೆತರಲಾಗುತ್ತಿದೆ ಎನ್ನುವುದು ಚಿತ್ರತಂಡದ ಮಾತು.
ಇದನ್ನೂ ಓದಿ:ರ್‍ಯಾಂಬೊ ಗೆಲುವಿಗೆ ಕಾರಣಕರ್ತರ ಸ್ಮರಿಸಿದ ಶರಣ್
ಇತ್ತೀಚೆಗೆ “ಗೂಡು’ ಚಿತ್ರದ ಫಸ್ಟ್‌ಲುಕ್ ಮತ್ತು ಟೈಟಲ್‌ಬಿಡುಗಡೆ ಮಾಡಿರುವ ಚಿತ್ರತಂಡ, ಇದೇ ತಿಂಗಳುಚಿತ್ರೀಕರಣಕ್ಕೆ ಹೊರಡುವ ಯೋಚನೆಯಲ್ಲಿದೆ. ಹಿರಿಯನಿರ್ದೇಶಕ ಬಿ. ರಾಮಮೂರ್ತಿ, ಟಿ.ಎಸ್ ಮಂಜುನಾಥ್,ಶ್ರೀನಿವಾಸ್ ಗುರ್ಜಾಲ್, ರೋಹಿಣಿ, ಶಿಲ್ಪಾ, ಅಭಿ ಜೋಶಿ ಮೊದಲಾದವರು “ಗೂಡು’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಥೆ ಅಭಿನಯಿಸುತ್ತಿದ್ದಾರೆ. ನಾಗನಾಥ್ ಮಾದವರಾವ್ ಜೋಶಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಗೂಡು’ಚಿತ್ರಕ್ಕೆ “ನೋಬಲ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಟಿ. ಎಸ್‌ಮಂಜುನಾಥ್ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.