Advertisement

ಗೂಡ್ಸ್‌ ವಾಹನಗಳೊಂದಿಗೆ ಮೆರವಣಿಗೆ

01:03 PM Apr 08, 2017 | Team Udayavani |

ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ 3 ಚಕ್ರ ಮತ್ತು 4 ಚಕ್ರ ಗೂಡ್ಸ್‌ ವಾಹನಗಳ ಚಾಲಕರು ಮತ್ತು ಮಾಲೀಕರು ಶುಕ್ರವಾರ ವಾಹನಗಳೊಂದಿಗೆ ಮೆರವಣಿಗೆ ನಡೆಸಿದರು. ಹೊಸ ಬಸ್‌ ನಿಲ್ದಾಣದಿಂದ ಮೆರವಣಿಗೆ ನಡೆಸಿದ ಮಾಲೀಕರು, ಚಾಲಕರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗೆ ತೆರಳಿ, ಮನವಿ ಸಲ್ಲಿಸಿದರು.

Advertisement

3 ಮತ್ತು 4 ಚಕ್ರ ಗೂಡ್ಸ್‌ ವಾಹನದಿಂದ ಸಿಗುವ ವರಮಾನ ಅತಿ ಕಡಿಮೆಯಾಗಿದೆ. ಬಂದಂತಹ ಆದಾಯದಲ್ಲಿ ವಾಹನದ ಕಂತು, ವಾಹನ ರಿಪೇರಿಗೆ ಸಾಕಾಗುವುದಿಲ್ಲ. ದುಡಿಮೆ ಕಡಿಮೆಯಾಗಿ ಪ್ರತಿನಿತ್ಯ ಜೀವನ ನಡೆಸುವುದು ಕಷ್ಟಕರವಾಗಿದೆ. ಇದೀಗ ಸರ್ಕಾರ ಕೆಲ ಶುಲ್ಕ ಹೆಚ್ಚಳ ಮಾಡಿ, ನಮ್ಮನ್ನು ದಿವಾಳಿ ಮಾಡಲು ಮುಂದಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಸರ್ಕಾರ ನಮ್ಮ ವಾಹನಗಳ ಮೇಲಿನ ರಸ್ತೆ ಶುಲ್ಕ ರದ್ದು ಪಡಿಸಬೇಕು, ಸಾಲಮನ್ನಾಕ್ಕೆ ಕ್ರಮ ವಹಿಸಬೇಕು. ವಿಮಾ ಕಂತು ಏಕಾಏಕಿ ಶೇ.50ರಷ್ಟು ಏರಿಕೆ ಮಾಡಿದ್ದು, ಇದನ್ನು ಹಿಂದಿನ ದರಕ್ಕೆ ಇಳಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಮಗೆ ಸಾಲ ಕೊಡಿಸಲು ಕ್ರಮ ವಹಿಸಬೇಕು.

ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳು ಧನ ಸಹಾಯ ಮಾಡಬೇಕು. ಪೊಲೀಸ್‌ರ ಕಿರುಕುಳದಿಂದ ಮುಕ್ತಿ ಕೊಡಿಸಬೇಕು ಎಂದು ಅವರು ಆಗ್ರಹಿಸಿದರು. ಸಂಘದ ಅಧ್ಯಕ್ಷ ಪಳನಿಸ್ವಾಮಿ, ಜಗದೀಶ್‌, ಹಾಲೇಶ್‌, ಮೆಹಬೂಬ್‌ ಸಾಬ್‌, ಹನುಮಂತಪ್ಪ, ರಘು ಮತ್ತಿತರರು ಮೆರವಣಿಗೆ ನೇತೃತ್ವ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next