ರೈಲುಗಳ ಸಂಚಾರ ಪೂರ್ವ ನಿಗದಿಯಂತೆ ಈ ತಿಂಗಳ 10ರಿಂದ ಪುನಾರಂಭವಾಗುವುದು ಅನುಮಾನ.
Advertisement
ಕಳೆದ ಆಗಸ್ಟ್ ಮೊದಲ ಹಾಗೂ ಎರಡನೇ ವಾರದಲ್ಲಿ ಸುರಿದ ಮಹಾಮಳೆಯಿಂದ ಪಶ್ಚಿಮಘಟ್ಟದ ಬೆಟ್ಟ, ಗುಡ್ಡ, ಮಳೆಕಾಡು,ಕಂದಕಗಳ ನಡುವೆ ಹಾದು ಹೋಗಿರುವ ಸಕಲೇಶಪುರ- ಸುಬ್ರಹ್ಮಣ್ಯ ನಡುವಿನ ರೈಲು ಹಳಿಗಳ ಮೇಲೆ ಬೆಟ್ಟಗಳು ಕುಸಿದು ಬಿದ್ದಿದ್ದವು.
ಸದ್ಯ ರೈಲ್ವೆ ಹಳಿ ಮೇಲೆ ಬಿದ್ದ ಮಣ್ಣು,ಬಂಡೆಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದ್ದು, ರೈಲ್ವೆ ಹಳಿಗಳನ್ನು ಕೂಡ ದುರಸ್ತಿ
ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮಂಗಳವಾರದಿಂದ ಗೂಡ್ಸ್ ರೈಲುಗಳಿಗೆ ಸಂಚರಿಸಲು ಅವಕಾಶ ನೀಡಲಾಗಿದೆ.
Related Articles
ರೈಲು ಸಂಚರಿಸಬಹುದೆಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಇದೀಗ ರೈಲು ಓಡಿಸುವ ಬಗ್ಗೆ ಉನ್ನತ ಅಧಿಕಾರಿಗಳಿಂದ ಯಾವುದೇ ಪ್ರಕಟಣೆ ಬಂದಿಲ್ಲವೆಂದು ಸಕಲೇಶಪುರ ರೈಲು ನಿಲ್ದಾಣದ ಅಧಿಕಾರಿಗಳು ಹೇಳಿದ್ದು ಇದರಿಂದಾಗಿ ಪೂರ್ವ ನಿಗದಿಯಂತೆ ರೈಲು ಸಂಚಾರ ಪುನಾರಂಭವಾಗುವುದು ಅನುಮಾನವಾಗಿದೆ.
Advertisement