Advertisement

ಚನ್ನಮ್ಮ ವೃತ್ತದಲ್ಲಿ ಗೂಡ್ಸ್ ಟೆಂಪೋ ಬ್ರೆಕ್ ಫೇಲ್: ಸರಣಿ ಅಪಘಾತ

12:19 PM May 26, 2022 | Team Udayavani |

ಬೆಳಗಾವಿ: ನಗರದ ಚನ್ನಮ್ಮ ವೃತ್ತದಲ್ಲಿ ಗುರುವಾರ ಬೆಳಗ್ಗೆ ಗೂಡ್ಸ್ ವಾಹನ ಬ್ರೇಕ್ ಫೇಲ್ ಆಗಿ ಬಸ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Advertisement

ಡಾ. ಅಂಬೇಡ್ಕರ್ ಉದ್ಯಾನವನ ಕಡೆಯಿಂದ ಬರುತ್ತಿದ್ದ ಟೆಂಪೋ ಬ್ರೇಕ್ ಫೇಲ್ ಆಗಿದೆ. ಚಾಲಕನ ನಿಯಂತ್ರಣಕ್ಕೆ ಬಾರದ ವಾಹನ ನೇರವಾಗಿ ಗಣೇಶ ಮಂದಿರ ಕಡೆಯಿಂದ ಬಸ್ ಕೋರ್ಟ್ ರಸ್ತೆ ಕಡೆಗೆ ಹೊರಟಿದ್ದ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬಸ್ ಸಣ್ಣ ಪ್ರಮಾಣದಲ್ಲಿ ಜಖಂಗೊಂಡಿದೆ. ಮತ್ತೊಂದು ವಾಹನಕ್ಕೆ ಢಿಕ್ಕಿಯಾಗಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಇದನ್ನೂ ಓದಿ: ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸಿಲಿಂಡರ್ ಸ್ಫೋಟ: ಯುವಕ ಸಾವು

ಅಂಬೇಡ್ಕರ್ ಉದ್ಯಾನವನದಿಂದ ಚನ್ನಮ್ಮ ಸರ್ಕಲ್ ಕಡೆಗೆ ಬರುವಾಗ ತುಸು ಇಳಿಜಾರು ಇದ್ದು, ಗೂಡ್ಸ್ ಟೆಂಪೋ ಜೋರಾಗಿ ಬರುತ್ತ ಬ್ರೇಕ್ ಫೇಲ್ ಆಗಿದೆ.‌ ಇತ್ತ ಕಡೆಯಿಂದ ಸಿಗ್ನಲ್ ಬಿಟ್ಟಾಗ ಬಸ್ ಬಂದಾಗ ಢಿಕ್ಕಿ ಹೊಡೆದಿದೆ. ಒಂದು ವೇಳೆ ಬಸ್ ಬರದಿದ್ದರೆ ನೇರವಾಗಿ ಗೂಡ್ಸ್ ವಾಹನ ಚನ್ನಮ್ಮ ಪ್ರತಿಮೆಗೆ ಟೆಂಪೋ ಢಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಸರಣಿ ಅಪಘಾತದಿಂದ ಕೆಲಕಾಲ ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next