Advertisement

ಲಿಥಿಯಂ ಐಯಾನ್ ಬ್ಯಾಟರಿಯ ಸೃಷ್ಟಿಕರ್ತ, ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಬಿ ಗುಡೆನಫ್ ನಿಧನ

01:51 PM Jun 27, 2023 | Team Udayavani |

ಅಮೇರಿಕ: ಲಿಥಿಯಂ – ಐಯಾನ್ ಬ್ಯಾಟರಿಯ ಪ್ರವರ್ತಕ ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಬಿ ಗುಡೆನಫ್ ನಿಧನರಾಗಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು.

Advertisement

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ ಎಂದು ಟೆಕ್ಸಾಸ್ ವಿಶ್ವವಿದ್ಯಾಲಯ ಘೋಷಣೆ ಮಾಡಿದೆ.

ವಿದೇಶಿ ಮಾಧ್ಯಮಗಳ ಪ್ರಕಾರ, ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಸೃಷ್ಟಿಸಿದ್ದಕ್ಕಾಗಿ ಅವರಿಗೆ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಈ ಬ್ಯಾಟರಿಗಳನ್ನು ಆಧುನಿಕ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ವಿದ್ಯುತ್ ಮತ್ತು ಹೈಬ್ರಿಡ್ ಕಾರುಗಳಲ್ಲಿ ಬಳಸಲಾಗುತ್ತದೆ.

ಮಾಹಿತಿಯ ಪ್ರಕಾರ, ಜಾನ್ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸುಮಾರು 40 ವರ್ಷಗಳ ಕಾಲ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದರು.

ಮೊದಲು, ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಲಿಥಿಯಂ ಬ್ಯಾಟರಿಗಳ ಸಂಶೋಧನೆ ಮಾಡಲಾಯಿತು ಇದನ್ನು 1980 ರಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್‌ಗಳ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟಿತು. ಮುಂದೆ ಇದು ವಾಹನಗಳಲ್ಲೂ ಅಳವಡಿಸುವಲ್ಲಿ ಯಶಸ್ವಿಯಾದವು. ಇದರ ಜೊತೆಗೆ, ಲಿಥಿಯಂ ಬ್ಯಾಟರಿಗಳನ್ನು ಟೆಸ್ಲಾ ಸೇರಿದಂತೆ ಪ್ಲಗ್-ಇನ್ ವಾಹನಗಳಲ್ಲಿ ಬಳಸಲಾಗುತ್ತದೆ.
ದೀರ್ಘ ಪ್ರಯಾಣಕ್ಕೆ ಲಿಥಿಯಂ ಬ್ಯಾಟರಿಗಳು ಉತ್ತಮ ಆಯ್ಕೆಯಾಗಿದೆ. ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡಲು ಬ್ಯಾಟರಿ ಸಹಕಾರಿಯಾಗಿದೆ. ಲಿಥಿಯಂ ಬ್ಯಾಟರಿಗಳನ್ನು ಕಾರ್ಡಿಯಾಕ್ ಡಿಫಿಬ್ರಿಲೇಟರ್‌ಗಳಂತಹ ವೈದ್ಯಕೀಯ ಸಾಧನಗಳಲ್ಲಿಯೂ ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಇವರ ಈ ಸಾಧನೆಗೆ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Advertisement

ವಿಶೇಷವೆಂದರೆ ಜಾನ್ ಬಿ ಗುಡೆನಫ್ ಶತಾಯುಷಿ ಆಗಿದ್ದರು. ಇದೇ ಬರುವ ಜುಲೈನಲ್ಲಿ 101 ನೇ ಜನ್ಮದಿನಾಚರಣೆ ಸಂಭ್ರಮವನ್ನು ಎದುರು ನೋಡುತ್ತಿದ್ದರು.

ಜಾನ್ ಬಿ ಗುಡೆನಫ್ ನಿಧನಕ್ಕೆ ವಿಜ್ಞಾನಿಗಳು, ಅನೇಕ ಸಂಶೋಧಕರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಪಿಕಪ್ ವಾಹನ ಪಲ್ಟಿ

Advertisement

Udayavani is now on Telegram. Click here to join our channel and stay updated with the latest news.

Next