Advertisement

ಗಾದೆ ಪುರಾಣ

09:27 AM May 10, 2019 | Hari Prasad |

1. ಲೋಕ ನೋಡಬೇಕು, ಲೆಕ್ಕ ಕಲಿಯಬೇಕು
ನೋಡಲು ಮುದ್ದಾಗಿದೆ ಎಂದು ನಾಯಿಯನ್ನು ಕೊಂಡುತಂದು, ಅದರ ಕೈನಲ್ಲಿ ಕಚ್ಚಿಸಿಕೊಂಡು ನರಳಬಾರದು. ಇಷ್ಟವೆಂದು ಕಷ್ಟ ತಂದುಕೊಳ್ಳಬಾರದು. ದೊಡ್ಡ ಸಾಲ ತೀರಿಸಲು ಸಣ್ಣ ಸಾಲ ಮಾಡಬಾರದು. ಮರ ಹತ್ತುವಾಗ ಉದಾಸೀನದಿಂದ ಕೈ ಬಿಡಬಾರದು. ಇಂಥ ದಿನನಿತ್ಯದ ವ್ಯವಹಾರಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು.

Advertisement

2. ಶ್ರದ್ಧೆಯ ಕೆಲಸ ತರುವುದು ಹರುಷ
ಜೀವನೋಪಾಯಕ್ಕಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಕೆಲಸವನ್ನು ಮಾಡಬೇಕು. ಯಾವ ಕೆಲಸವೂ ಸಣ್ಣದಲ್ಲ, ಯಾವುದೂ ದೊಡ್ಡದಲ್ಲ. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಮಹತ್ವ ಇರುತ್ತದೆ. ನಾವು ಮಾಡುವ ಕೆಲಸವನ್ನು ಸೇವಾದೃಷ್ಟಿ ಯಿಂದ ಮಾಡುವುದೇ ಸರಿಯಾದ ಮನೋಭಾವ.

3. ಕೈಗೆ ಎಟುಕದ ದ್ರಾಕ್ಷಿ ಹುಳಿ
ನೆಮ್ಮದಿಯ ಜೀವನವನ್ನು ನಡೆಸಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಇದಕ್ಕಾಗಿ ಶ್ರೀಸಾಮಾನ್ಯರು ಮಾಡುವ ಪ್ರಯತ್ನಗಳು ಅನೇಕ. ತಮ್ಮ ಪ್ರಯತ್ನ ನಿಶ್ಚಿತ ಫ‌ಲವನ್ನು ಕೊಡದಿದ್ದಾಗ, ನಿರಾಸೆ, ಜಿಗುಪ್ಸೆ ಆಗುವುದು ಸಹಜ. ತಾನು ಆಸೆಪಟ್ಟ ದ್ರಾಕ್ಷಿ ಸಿಗದಿದ್ದಾಗ, ದ್ರಾಕ್ಷಿ ಹುಳಿ ಎಂದು ಮುಂದೆ ನಡೆದ ನರಿಯ ಕಥೆ ಇದಕ್ಕೆ ಒಳ್ಳೆಯ ಉದಾಹರಣೆ.

4. ಹಾವಿನಿಂದ ಕಡಿಸಿಕೊಂಡವನು ಹಗ್ಗಕ್ಕೆ ಹೆದರುತ್ತಾನೆ
ಹೆದರಿಕೆ ಹುಟ್ಟಿನಿಂದಲೇ ಬರುತ್ತದೆ. ಕಾಣದ್ದಕ್ಕೆ, ಮುಂದೆ ಆಗುವುದಕ್ಕೆ ಹೆದರುವುದು ಒಂದು ರೀತಿ. ಹೇಳಿದಂತೆ ಕೇಳಲಿ ಎಂದು ದೊಡ್ಡವರು ಹೆದರಿಕೆ ಹುಟ್ಟಿಸುವುದು ಇನ್ನೊಂದು ರೀತಿ.ಅಜ್ಞಾನದಿಂದ ಅಥವಾ ತಪ್ಪು ತಿಳಿವಳಿಕೆಯಿಂದ ಹುಟ್ಟುವ ಹೆದರಿಕೆ ಮೂರನೆಯ ರೀತಿಯದು. ಅದಕ್ಕೆ ಸರಿಯಾದ ಕಾರಣ ಏನೆಂದು ತಿಳಿದುಕೊಂಡಾಗಲಷ್ಟೇ ತೊಂದರೆ ನಿವಾರಣೆಯಾಗುತ್ತದೆ.

ಸಂಗ್ರಹ- ವಿವರಣೆ: ಸಂಪಟೂರು ವಿಶ್ವನಾಥ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next