ನಾನು ಮನೆಯಲ್ಲಿಲ್ಲ ಅಂತ ಹೇಳಿದ ಅಪ್ಪ. ಆದರೆ, ಮಗು ಇದನ್ನೇ ಯಾರಿಗೆ ಹೇಳಬಾರದೋ ಅವರಿಗೇ ಹೇಳಿತು. ಅಪ್ಪ ಸಿಕ್ಕಿ ಬಿದ್ದ. ಅಂದರೆ, ಮಕ್ಕಳು ತಮ್ಮ ಮುಗ್ಧತೆಯಿಂದ ನಿಜವನ್ನಷ್ಟೇ ಹೇಳಬಲ್ಲರು.
Advertisement
2. ಕಟ್ಟಿದ ಮನೆಯನ್ನು, ಕಟ್ಟಿಕೊಂಡ ಹೆಂಡತಿಯನ್ನು ದೂರಬೇಡತಮಗೆ ಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಂಡು ಕಟ್ಟಿಕೊಂಡ ಮೇಲೆ ಮನೆಯನ್ನು, ತನ್ನ ಮನಕ್ಕೆ ತಾಳೆಯಾದ ಮದುವೆಯಾದ ಹೆಂಡತಿಯನ್ನೂ ಸಮರ್ಥಿಸಿಕೊಳ್ಳಬೇಕು; ಯಾರೋ ಏನೋ ಅಂದರು ಎಂದು ದೂರುವುದಾಗಲಿ, ತೊರೆಯುವುದಾಗಲಿ ಸಲ್ಲದು.
ನೋಡಲು ಮುದ್ದಾಗಿದೆ ಎಂದು ನಾಯಿಯನ್ನು ಕೊಂಡುತಂದು, ಅದರ ಕೈನಲ್ಲಿ ಕಚ್ಚಿಸಿಕೊಂಡು ನರಳಬಾರದು. ದೊಡ್ಡ ಸಾಲ ತೀರಿಸಲು, ಮತ್ತೆ ಸಣ್ಣ ಸಾಲ ಮಾಡಬಾರದು. ಮರ ಹತ್ತುವಾಗ ಉದಾಸೀನದಿಂದ ಕೈ ಬಿಡಬಾರದು. ಇಂತಹ ನಿತ್ಯದ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. 4. ಎದುರಿಗೆ ನಿಂದಿಸು, ಮರೆಯಾದ ಮೇಲೆ ಹೊಗಳು
ಯಾರನ್ನಾದರೂ ಹೊಗಳಬೇಕಾದರೆ, ಅವರ ಎದುರಿಗೆ ಹೊಗಳಬಾರದು; ಆದರೆ ನಿಂದಿಸಬೇಕಾದರೆ ಎದುರಿಗೆ ನಿಂದಿಸಬೇಕು. ನಿಂದನೆಯಿಂದ ತಿಳಿದುಕೊಳ್ಳುವುದು ಸಾಧ್ಯ. ಆದರೆ ನಿಂದೆ ದುರುದ್ದೇಶದಿಂದ ಕೂಡಿರಬಾರದು. ಹೀಗೆಯೇ ಹೊಗಳಿಕೆ, ಲಾಭದ ಆಸೆಯಿಂದ ಕೂಡಿರಬಾರದು. ಇಂದಿನ ಲೋಕದಲ್ಲಿ ಮುಂದೆ ಹೊಗಳಿ ಹಿಂದೆ ಆಡಿಕೊಳ್ಳುವವರೇ ಹೆಚ್ಚು!