ಕೋಟ: ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ಆಡಳಿತ ವ್ಯವಸ್ಥೆ ಒಳ್ಳೆದಿರುತ್ತದೆ. ಕೆಟ್ಟವರನ್ನು ಆಯ್ಕೆ ಮಾಡಿದರೆ ಆಡಳಿತ ಕೆಟ್ಟದಾಗುತ್ತದೆ. ಆದ್ದರಿಂದ ಆಡಳಿತ ವ್ಯವಸ್ಥೆಯನ್ನು ದೂರುವುದಕ್ಕಿಂತ ಆಯ್ಕೆ ಮಾಡುವ ನಾವೇ ಬದಲಾಗಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಅವರು ಜ. 1ರಂದು ಕೋಟ ಕಾರಂತ ಕಲಾಭವನಕ್ಕೆ ಭೇಟಿ ನೀಡಿದ ಸಂದರ್ಭ ಕೋಟತಟ್ಟು ಗ್ರಾ.ಪಂ. ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದರು. ಕಾರಂತ ಕಲಾಭವನದ ಪ್ರತಿಯೊಂದು ವಿಶೇಷತೆಗಳನ್ನು ವೀಕ್ಷಣೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕೂರ್ಮಾ ರಾವ್, ಕುಂದಾಪುರ ಎ.ಸಿ. ರಾಜು, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್‌ಮೂರ್ತಿ, ಕೋಟತಟ್ಟು ಗ್ರಾ. ಪಂ. ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ವಾಸು ಪೂಜಾರಿ, ಸಾಲಿಗ್ರಾಮ ಪ.ಪಂ. ಉಪಾಧ್ಯಕ್ಷೆ ಅನುಸೂಯಾ, ಕೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್, ಕಲಾಭವನದ ಟ್ರಸ್ಟಿ ಆನಂದ ಸಿ.ಕುಂದರ್, ಸುಬ್ರಾಯ ಆಚಾರ್ಯ, ಸುಶೀಲಾ ಸೋಮಶೇಖರ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಕೋವಿಡ್ ಹಿನ್ನೆಲೆ : ಸಾಮೂಹಿಕ ಕೇಶ ಮುಂಡನೆ ಮಾಡಿ ಹರಕೆ ತೀರಿಸಿದ ಗ್ರಾಮಸ್ಥರು
ಕಲಾಭವನದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.