ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಎರಡು ದಿನಗಳ ಸಂಪೂರ್ಣ ಲಾಕ್ ಡೌನ್ ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜನರು ಮನೆಯಿಂದ ಹೊರ ಬರದೆ ಲಾಕ್ ಡೌನ್ ಗೆ ಬೆಂಬಲ ಸೂಚಿಸಿದ್ದು, ಅಗತ್ಯವಿರುವ ವಾಹನಗಳ ಸಂಚಾರ ಯಥಾವತ್ತಾಗಿ ನಡೆದಿದೆ.
ಡಿಸಿಪಿ ಕೆ.ರಾಮರಾಜನ್ ಅವರು ನಗರ ಪ್ರದಕ್ಷಿಣೆ ಹಾಕುತ್ತಿದ್ದು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದಾರೆ.
ಇದನ್ನೂ ಓದಿ:ಕೋವಿಡ್ ಕೇರ್ ಸೆಂಟರ್‌ನಿಂದ ಸೋಂಕಿತ ವ್ಯಕ್ತಿ ಪರಾರಿ: ಸ್ಥಳೀಯರಿಗೆ ಆತಂಕ
ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪೊಲೀಸ್ ತಪಾಸಣೆ ಬಿಗಿ ಗೊಳಿಸಲಾಗಿದ್ದು ಅನಗತ್ಯ ಹಾಗೂ ಸುಳ್ಳು ಹೇಳಿ ಸಂಚರಿಸುತ್ತಿರುವ ವಾಹನಗಳಿಗೆ ಪೊಲೀಸರು ದಂಡ ಹಾಕುವುದು ಹಾಗೂ ವಾಹನಗಳನ್ನು ಸೀಜ್ ಮಾಡುತ್ತಿರುವುದು ಕಂಡು ಬಂದಿತು. ಜನ ಸಂಚಾರವಿಲ್ಲದೇ ನಗರದ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ.
ನಗರದ ಗೋಕುಲ ರಸ್ತೆ ವಾಕರಸಾ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ 45 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಸಿಬ್ಬಂದಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ನಿಂತಿರುವುವುದು ಕಂಡು ಬಂದಿತು