ಬೇಲೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಸೋಮವಾರ ನಡೆಸಿದ ಕರ್ನಾಟಕ ಬಂದ್ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಬಂದ್ ಹಿನ್ನೆಲೆಯಲ್ಲಿ ರೈತ, ಕರವೇ, ವಿವಿಧ ಸಂಘಟನೆಗಳು ನಡೆಸಿದ ಪ್ರತಿಭಟನೆ ಯಲ್ಲಿ ಶಾಸಕ ಕೆ.ಎಸ್.ಲಿಂಗೇಶ್ ಭಾಗವಹಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಬಹುರಾಷ್ಟ್ರೀಯ ಕಂಪನಿ ಗಳಿಗೆ ರೈತರನ್ನು ಬಲಿ ನೀಡುವ ಭೂ ಸುಧಾ ರಣೆ ಮತ್ತು ಎಪಿಎಂಸಿ ತಿದ್ದಪಡಿ ಕಾಯ್ದೆ ಜಾರಿಗೆ ತಂದಿದೆ. ಇದರ ವಿರುದ್ಧ ಜೆಡಿಎಸ್ ಅವಿರತವಾಗಿಹೋರಾಟ ನಡೆಸಲು ಸಜ್ಜು ಗೊಂಡಿದೆ. ರೈತ ವಿರೋಧಿ ನೀತಿಗೆ ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕಪಾಠಕಲಿಸುತ್ತಾರೆ ಎಂದು ಹೇಳಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ರಾಜ್ಯದಲ್ಲಿ ಮೊದಲೇ ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ವೇಳೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತಾಪಿ ವರ್ಗಕ್ಕೆ ಮರಣ ಶಾಸನ ಬರೆಯುವ ಮುಂದಾಗಿದೆ ಎಂದು ದೂರಿದರು.
ಕರ್ನಾಟಕ ಭೂ-ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಬಹುರಾಷ್ಟ್ರೀಯ ಕಂಪನಿ ಪರವಾಗಿದ್ದು,ಇದ್ದರಿಂದ ರೈತರು, ಉದ್ಯಮಿ ಗಳ ಗುಲಾಮರಾಗಿ ಕೆಲಸ ಮಾಡುವ ಹೀನ ಸ್ಥಿತಿ ಬರುತ್ತದೆ. ಪ್ರಗತಿ ಪರ ಸಂಘಟನೆಗಳು ಒಟ್ಟಾಗಿ ಸೇರಿ ವಿರೋಧಿಸುತ್ತಿವೆಂದರು. ಸಹಕಾರ ನೀಡಲು ಮನವಿ: ತಾಲೂಕು ವರ್ತಕರಸಂಘದ ಅಧ್ಯಕ್ಷ ಗಿರಿಯಪ್ಪಶೆಟ್ಟಿ ಮಾತನಾಡಿ, ರೈತರಿಗೆ ಅನ್ಯಾಯವಾದ ಸಂದರ್ಭದಲ್ಲಿ ವರ್ತಕರ ಸಂಘಬಂದ್ ಬೆಂಬಲಿಸಿ ಸಹಕಾರ ನೀಡುತ್ತದೆ, ಮುಖ್ಯರಸ್ತೆ ಅಗಲೀಕರಣದಿಂದ ತಮಗೆ ಸಿಗಬೇಕಾದ ಪರಿಹಾರ ಕೊಡಿಸಲು ಎಲ್ಲಾ ಪ್ರಗತಿ ಪರ ಸಂಘಟನೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪ್ರಧಾನಕಾರ್ಯದರ್ಶಿ ಬಳ್ಳೂರು ಸ್ವಾಮೀಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಜೆ.ನಿಶಾಂತ್, ದಸಂಸ ಬಿ.ಎಲ್.ಲಕ್ಷ್ಮಣ್, ರೈತ ಸಂಘದ ಪ್ರ. ಕಾರ್ಯದರ್ಶಿಬಸವ ರಾಜು, ಕರವೇ ತಾ. ಅಧ್ಯಕ್ಷ ಚಂದ್ರಶೇಖರ್, ಕರವೇ (ಪ್ರವೀಣ್‌ಶೆಟ್ಟಿ ಬಣ) ತಾ. ಅಧ್ಯಕ್ಷ ಎಸ್. ಭೋಜೇಗೌಡ, ಡಿಎಸ್‌ಎಸ್ ಮುಖಂಡ ಅಬ್ದುಲ್ ಸಮದ್, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಜಾಕೀರ್‌ಪಾಷ, ಜಯ ಕರ್ನಾಟಕ ಅಧ್ಯಕ್ಷ ಎಂ.ಕೆ.ಆರ್. ಸೋಮೇಶ್, ಡಾ. ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ತೀರ್ಥಂಕರ್, ಟ್ಯಾಕ್ಸಿ ಮಾಲಿಕರ ಸಂಘದ ಅಧ್ಯಕ್ಷ ಮಹೇಶ್ ಇತರರು ಇದ್ದರು.