Advertisement

ಉತ್ತಮ ಕಥೆಗಾರರೆ ಗೇಮ್‌ ಡಿಸೈನರ್‌

07:32 AM Feb 13, 2019 | |

ಕ್ರೀಡೆ, ಮನೋರಂಜನೆಗೆಂದೇ ಸೀಮಿತವಾಗಿರುವ ಸಾಕಷ್ಟು ಕಂಪ್ಯೂಟರ್‌ ಸಿಸ್ಟಮ್‌ಗಳು ಇಂದು ಮಾರುಕಟ್ಟೆಯಲ್ಲಿವೆ. ಜತೆಗೆ ಟೆಂಪಲ್‌ ರನ್‌, ಕ್ಯಾಂಡಿ ಕ್ರಶ್‌, ಆ್ಯಂಗ್ರಿ ಬಡ್ಸ್‌ರ್ನಂಥ ಮೊಬೈಲ್‌ ಗೇಮ್ಸ್‌ಗಳು ಸಾಕಷ್ಟು ಜನರನ್ನು ಆಕರ್ಷಿಸಿವೆ. ಹೀಗಾಗಿ ಕಂಪ್ಯೂಟರ್‌ ಗೇಮ್ಸ್‌, ಆ್ಯಂಡ್ರಾಯ್ಡ ಗೇಮ್ಸ್‌ಗಳು ಇಂದು ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಗಿಟ್ಟಿಸಿಕೊಂಡಿವೆೆ. ಆದರೆ ಇದರ ಹಿಂದಿನ ಸೂತ್ರದಾರ ಗೇಮ್‌ ಡಿಸೈನರ್ಸ್‌.

Advertisement

ಗೇಮ್‌ ಡಿಸೈನರ್ಸ್‌ ಆಗಬೇಕಾದರೆ ಪುಟಗಟ್ಟಲೆ ಪ್ರೋಗ್ರಾಮ್‌ ಕೋಡ್‌ ಬರೆಯಬೇಕಿಲ್ಲ, ಆರ್ಟ್‌ವರ್ಕ್‌ ಕೂಡ ಮಾಡಬೇಕಿಲ್ಲ. ಗೇಮ್ಸ್‌ನ ಪೂರ್ತಿ ರೂಪುರೇಷೆ ಯಾವ ರೀತಿ ಇರಬೇಕು ಎಂಬುದನ್ನು ಅಧ್ಯಯನ ನಡೆಸಿ, ಅದನ್ನು ಸಿದ್ಧಪಡಿಸಬೇಕು. ಅದಕ್ಕಾಗಿ ಕಥೆ, ಪಾತ್ರಗಳು, ಅಂತ್ಯ, ಸಂಗೀತ, ಗೇಮ್‌ ನೀಡುವ ಅನುಭವದ ಕುರಿತು ವರ್ಕೌಟ್ ಮಾಡಬೇಕಾಗುತ್ತದೆ. ಗೇಮ್‌ ಡಿಸೈನರ್‌ಗೆ ಇರಬೇಕಾದ ಬಹುಮುಖ್ಯ ಗುಣವೆಂದರೆ ಆತ ಕತೆಗಾರನಾಗಿರಬೇಕು. ಎಷ್ಟೇ ಒಳ್ಳೆಯ ಗ್ರಾಫಿಕ್ಸ್ ಇರಬಹುದು, ರೋಚಕತೆ ತುಂಬಿರಬಹುದು, ವೇಗ ಹೆಚ್ಚಿದ್ದಿರಬಹುದು ಆದರೆ ಅವೆಲ್ಲ ಒಂದೊಳ್ಳೆ ಕಥೆಯನ್ನು ಹೇಳಲು ಇರುವ ಮಾಧ್ಯಮ.

ಗೇಮ್‌ ಡಿಸೈನರ್ಸ್‌ ಆಗಬೇಕಿದ್ದರೆ ವಿವಿಧ ಹಂತಗಳಲ್ಲಿ ಬಳಸುವ ಸಾಫ್ಟ್ವೇರ್‌, ಹಾರ್ಡ್‌ವೇರ್‌ ತಂತ್ರಜ್ಞಾನ ಅರಿವು ಬೇಕಾಗುತ್ತದೆ. ಜತೆಗೆ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು, ಲೇಟೆÓr್ ತಂತ್ರಜ್ಞಾನಗಳ ಕುರಿತು ತಿಳಿದುಕೊಂಡಿರಬೇಕಾಗುತ್ತದೆ.

ಸಿನೆಮಾ ನಿರ್ದೇಶಕನಂತೆ ಗೇಮ್‌ ಡಿಸೈನರ್‌ ಕೆಲಸ ಮಾಡಬೇಕಾಗುತ್ತದೆ. ಅದರ ಸೋಲು ಗೆಲುವಿಗೆ ಆತನೇ ಸಂಪೂರ್ಣ ಬದ್ಧನಾಗಿರುತ್ತಾನೆ. ಗೇಮ್‌ ಡಿಸೈನಿಂಗ್‌ ಕೇವಲ ಕಂಪ್ಯೂಟರ್‌, ಮೊಬೈಲ್‌, ಗೇಮಿಂಗ್‌ ಕನ್ಸೋಲ್‌ಗ‌ಳಿಗಾಗಿ ಮಾತ್ರವಲ್ಲ, ಅದರ ಕ್ಷೇತ್ರ ವ್ಯಾಪ್ತಿ ಇನ್ನೂ ವಿಸ್ತಾರವಾದದ್ದು. ಹಾವು- ಏಣಿ, ಲೂಡೋ ಥರದ ಬೋರ್ಡ್‌ ಗೇಮ್‌ಗಳು, ಕಾರ್ಡ್‌ ಗೇಮ್‌ಗಳು ಅಥವಾ ಲೈವ್‌ ಆ್ಯಕ್ಷನ್‌ ಗೇಮ್‌ಗಳಿಗೂ ಡಿಸೈನರ್‌ಗಳ ಆವಶ್ಯಕತೆಯಿದೆ.

ಕಲಿಕೆಗೆ ಇದೆ ಅವಕಾಶ
ಗೇಮಿಂಗ್‌ ಕ್ಷೇತ್ರಕ್ಕೆ ಕಾಲಿಡಲು ಇಂಥದ್ದೇ ಪದವಿಯನ್ನು ಹೊಂದಿರಬೇಕೆಂಬ ನಿಯಮಾವಳಿಗಳಿಲ್ಲ. ಗೇಮಿಂಗ್‌ ಬಗ್ಗೆ ಒಲವಿದ್ದರೆ ಕಂಪ್ಯೂಟರ್‌ ಸೈನ್ಸ್‌, ಫೈನ್‌ ಆರ್ಟ್ಸ್ ಇನ್‌ ಡಿಸೈನ್‌ ಆ್ಯಂಡ್‌ ಟೆಕ್ನಾಲಜಿ, ಬಿ.ಎಸ್‌. ಇನ್‌ ಗೇಮ್‌ ಡಿಸೈನ್‌ ಆ್ಯಂಡ್‌ ಡೆವಲೆಪ್‌ಮೆಂಟ್ಪದವಿ ಪಡೆಯಬಹುದು. ಜತೆಗೆ ಜಾವಾ ಪ್ರೋಗ್ರಾಮಿಂಗ್‌, ಡಾಟಾ ಸ್ಟ್ರಕ್ಚರ್‌, ಡಿಸೈನ್‌ ಹಿಸ್ಟರಿ, ಪ್ರೋಗ್ರಾಮಿಂಗ್‌ ಫಾರ್‌ ಇಂಟರಾಕ್ಟಿವ್‌ ಆ್ಯಂಡ್‌ ಡಿಜಿಟಲ್‌ ಮೀಡಿಯಾ, ಹ್ಯೂಮನ್‌ ಕಂಪ್ಯೂಟರ್‌ ಇಂಟರಾಕÏನ್‌ ಮುಂತಾದ ವಿಷಯಗಳ ಬಗ್ಗೆ ಕಲಿಯಬಹುದು. ಈ ಕ್ಷೇತ್ರದಲ್ಲಿ ಪಾರ್ಟ್‌ ಟೈಮ್‌, ಫ‌ುಲ್‌ ಟೈಮ್‌ ಆಗಿ ದುಡಿಯಲು ಸಾಕಷ್ಟು ಅವಕಾಶಗಳೂ ಇವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next