Advertisement

Good Friday: ದ.ಕ., ಉಡುಪಿ ಜಿಲ್ಲೆಯಲ್ಲಿ ಶುಭ ಶುಕ್ರವಾರ ಆಚರಣೆ

10:42 AM Mar 30, 2024 | Team Udayavani |

ಮಂಗಳೂರು/ಉಡುಪಿ: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಪ್ರಯುಕ್ತ ಮಾ. 29ರಂದು ಶುಭ ಶುಕ್ರವಾರ (ಗುಡ್‌ ಫ್ರೈಡೇ ವನ್ನು ಉಭ ಯ ಜಿಲ್ಲೆಗಳಲ್ಲಿ ಆಚರಿಸಲಾಯಿತು. ದ.ಕ. ಜಿಲ್ಲೆಯ ಕ್ರೆçಸ್ತರು ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಯೊಂದಿಗೆ ಆಚರಿಸಿದರು. ವಿವಿಧ ಚರ್ಚ್‌ಗ ಳಲ್ಲಿ ಬೆಳಗ್ಗೆ ಯಿಂದಲೇ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ, ಆರಾ ಧನೆ ಮತ್ತಿತರ ಕಾರ್ಯಕ್ರಮಗಳು ನಡೆದವು.

Advertisement

ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪು ವವರೆಗಿನ ಘಟನೆ ಗಳನ್ನು ಪ್ರಸ್ತುತ ಪಡಿಸಲಾಯಿತು. ಭಕ್ತರು ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ನೆನಪಿಸಿ, ಧ್ಯಾನಿಸಿ ಪ್ರಾರ್ಥಿಸಿದರು. ಸಂಜೆ ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನೆಯ ವಿಧಿಗಳಲ್ಲಿ ಬೈಬಲ್‌ ವಾಚನದ ವೇಳೆ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತರ ಕೊನೆಯ ಘಳಿಗೆಗಳ ಕಥನವನ್ನು ಓದಿದರು. ಬಳಿಕ ಪ್ರವಚನ ನೀಡಿದರು.

ಮಂಗಳೂರು ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಬಿಷಪ್ಸ್‌ ಹೌಸ್‌ನ ಚಾಪೆಲ್‌ನಲ್ಲಿ ಪ್ರಾರ್ಥನೆ ಮತ್ತು ಪ್ರವಚನ ನೀಡಿ, ಶುಭ ಶುಕ್ರವಾರದ ಚರಿತ್ರೆಯು ಕ್ರಿಸ್ತನ ಮರಣ ಹಾಗೂ ಮನುಜಕುಲದ ಸಂರಕ್ಷಣೆಯ ಬಗ್ಗೆ ವಿವರಿಸುತ್ತದೆ. ಕ್ರಿಸ್ತರು ಶಿಲುಬೆಯ ಮರಣದಲ್ಲೂ ಕ್ಷಮಾಪಣೆಯನ್ನು ಸಾರಿದರು. ಅವರ ಅನುಯಾಯಿಗಳು ಪರಸ್ಪರ ರನ್ನು ಕ್ಷಮಿಸಿ ಪ್ರೀತಿಯಿಂದ ಬಾಳ ಬೇಕಿದೆ ಎಂದರು. ಜಾಗತಿಕ ಶಾಂತಿಗಾಗಿ, ದೇಶದ ಪ್ರಗತಿಗಾಗಿ ಪ್ರಾರ್ಥಿಸಲಾಯಿತು.

ಮಾ. 30ರಂದು ಯೇಸುವಿನ ಪುನರುತ್ಥಾನದ ಜಾಗರಣೆ ಹಾಗೂ ಮಾ. 31ರಂದು ಈಸ್ಟರ್‌ ಹಬ್ಬದ ಆಚರಣೆಗಳು ನಡೆಯಲಿವೆ. ಮಂಗಳೂರು ಬಿಷಪ್‌ ಅವರು ಈಸ್ಟರ್‌ ಜಾಗರಣೆಯ ಬಲಿಪೂಜೆಯನ್ನು ರೊಸಾರಿಯೋ ಕೆಥೆಡ್ರಲ್‌ನಲ್ಲಿ ನಡೆಸಿಕೊಡುವರು.

Advertisement

ಕ್ರೈಸ್ತರಿಂದ ಉಪವಾಸ, ಪ್ರಾರ್ಥನೆ, ಧ್ಯಾನ

ಉಡುಪಿ: ಕ್ರೈಸ್ತ ಬಾಂಧವರ ಪವಿತ್ರ ದಿನ ಗುಡ್‌ ಫ್ರೈಡೇಯನ್ನು ಉಡುಪಿ ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು. ಎಲ್ಲ ಚರ್ಚ್‌ಗಳಲ್ಲಿ ಬೆಳಗ್ಗೆಯಿಂದಲೇ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು.

ಉಡುಪಿ ಧರ್ಮಪ್ರಾಂತದ ಪ್ರಧಾನ ದೇವಾಲಯ ಮಿಲಾಗ್ರಿಸ್‌ ಕ್ಯಾಥೆಡ್ರಲ್‌ನಲ್ಲಿ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೊ ಅವರು ಶುಭ ಶುಕ್ರವಾರದ ಪ್ರಾರ್ಥನಾ ವಿಧಿ ನೆರವೇರಿಸಿದರು. ಶ್ರೇಷ್ಠ ಗುರು ಮೊನ್ಸಿಂಜೊnರ್‌ ಫ‌ರ್ಡಿನಂಡ್‌ ಗೊನ್ಸಾಲ್ವಿಸ್‌, ಚಚ್‌ ìನ ಪ್ರಧಾನ ಧರ್ಮಗುರು ರೆ| ವಲೇರಿಯನ್‌ ಮೆಂಡೊನ್ಸಾ, ಸಹಾಯಕ ಧರ್ಮಗುರು ರೆ| ಜೋಯ್‌ ಅಂದ್ರಾದೆ, ಪಿಲಾರ್‌ ಸಭೆಯ ರೆ| ನಿತೇಶ್‌ ಡಿ’ಸೋಜಾ, ನಿವೃತ್ತ ಧರ್ಮಗುರು ರೆ| ಲೊರೇನ್ಸ್‌ ರೊಡ್ರಿಗಸ್‌, ರೆ| ಲೊರೇನ್ಸ್‌ ಮಾರ್ಟಿಸ್‌ ಉಪಸ್ಥಿತರಿದ್ದರು.

ಜಿಲ್ಲೆಯ ಕೆಲವು ಚಚ್‌ ಗಳಲ್ಲಿ ಯೇಸುಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧರ್ಮ ಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತರ ಕೊನೆಯ ಘಳಿಗೆಗಳ ವೃತ್ತಾಂತ ವಾಚಿಸಿದರು. ಬಳಿಕ ಮುಚ್ಚಲ್ಪಟ್ಟ ಶಿಲುಬೆಯನ್ನು ಮೆರವಣಿಗೆಯಲ್ಲಿ ತಂದು ಅನಾವರಣಗೊಳಿಸಲಾಯಿತು.

ಯೇಸುವಿನ ಔದಾರ್ಯ ಔಷಧವಾಗಲಿ

ಬಿಷಪ್‌ ಜೆರಾಲ್ಡ್ ಐಸಾಕ್‌ ಲೋಬೊ ಅವರು ಗುಡ್‌ ಫ್ರೈಡೇ ಸಂದೇಶ ನೀಡಿ, ಪವಿತ್ರ ಶುಕ್ರವಾರದಂದು ಯೇಸುಸ್ವಾಮಿ ಲೋಕದ ಪಾಪದ ಪರಿಹಾರಕ್ಕಾಗಿ ಶಿಲುಬೆಯ ಮೇಲೆ ಪ್ರಾಣಾರ್ಪಣೆ ಮಾಡಿದರು. ಸತ್ಯ ಸ್ವರೂಪಿಯಾದ ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡರು. ಜಗತ್ತಿನಾದ್ಯಂತ ಇರುವ ಕೆಟ್ಟತನಕ್ಕೆ ಯೇಸುವಿನ ಪ್ರೀತಿ, ಕರುಣೆ, ಕ್ಷಮೆ, ಔದಾರ್ಯಗಳು ಔಷಧವಾಗಬೇಕು. ಯೇಸು ಕ್ರಿಸ್ತರು ಶಿಲುಬೆ ಹೊತ್ತು ನಡೆದಂತೆ ಜೀವನದಲ್ಲಿ ಎದುರಾಗುವ ಕಷ್ಟ, ನೋವು ಸಂಕಟಗಳನ್ನು ಎದುರಿಸಿ ಮುನ್ನಡೆಯಬೇಕಿದೆ. ಸ್ವಾರ್ಥ ತ್ಯಜಿಸಿ ಪರರ ಪ್ರೀತಿಯಲ್ಲಿ ಬದುಕಲು ದೇವರು ತೋರಿರುವ ದಾರಿಯೇ ಶಿಲುಬೆಯ ಹಾದಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next