Advertisement
ಸ್ಮಾರ್ಟ್‌ಸಿಟಿಯು ತನ್ನ ನಾಗರಿಕರಿಗೆ ಅಗತ್ಯಮೂಲಸೌಕರ್ಯ, ಉತ್ತಮ ಗುಣಮಟ್ಟದಜೀವನ, ಸ್ವತ್ಛ ಸುಸ್ಥಿರ ಪರಿಸರ, ತಂತ್ರಜ್ಞಾನಬಳಸಿಕೊಂಡು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ನುರಿತ ತಜ್ಞರೊಂದಿಗೆ ಸಮಾಲೋಚನೆ ನಡೆಸಲು ಹಾಗೂ ಬಡವರಿಗೆಉತ್ತಮ ಆರೋಗ್ಯ ಒದಗಿಸುವ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಪ್ರಾರಂಭಿಸಿದ 28 ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಬಡವರು ಸೇರಿದಂತೆ ಬಹುತೇಕ ರೋಗಿಗಳಿಗೆ ಅನುಕೂಲವಾಗಿದೆ.
Related Articles
Advertisement
ವರ್ಚುವಲ್ ಕ್ಲಿನಿಕ್ ಕಾರ್ಯವೈಖರಿ ಹೇಗೆ?:
ನಗರದ ಸದಾಶಿವ ನಗರದಲ್ಲಿನ ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್‌ನಲ್ಲಿ 10 ಮಂದಿ ನುರಿತ ತಜ್ಞರು ಕಾರ್ಯನಿರ್ವಹಿಸುತ್ತಾರೆ. ನಗರದ 28 ಪ್ರದೇಶಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಥಾಪಿಸಿದ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ಗಳಲ್ಲಿ ವಿವಿಧ ತಂತ್ರಜ್ಞಾನದ ಉಪಕರಣಗಳನ್ನು ಹೊಂದಿವೆ. ಅಲ್ಲಿನ ಸುತ್ತಮುತ್ತಲಿನ ರೋಗಿಗಳು ಕ್ಲಿನಿಕ್‌ಗೆ ಭೇಟಿ ನೀಡಿದರೆ, ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್‌ನಿಂದಲೇ ತಜ್ಞರು ಆನ್‌ಲೈನ್ ವೀಡಿಯೋ ಕಾಲ್ ಮೂಲಕ ಪರೀಕ್ಷಿಸಿ, ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುತ್ತಾರೆ. ಇದರಿಂದಾಗಿ ದೂರದ ಆಸ್ಪತ್ರೆಗಳಿಗೆ ತೆರಳುವ ಸಮಸ್ಯೆ ತಪ್ಪುತ್ತದೆ. ಹಾಗೆಯೇ, ಹೃದಯ, ಕಣ್ಣು ಪರೀಕ್ಷೆ, ಇಸಿಜಿ, ಎಕ್ಸ್-ರೇ ಸೇರಿದಂತೆ ಎಲ್ಲಾ ಅಂಗಾಂಗ ಪರೀಕ್ಷೆಗಳನ್ನು ಡಿಜಿಟಲ್ ಮೂಲಕ ಸಮಸ್ಯೆಗಳನ್ನು ಪತ್ತೆಹಚ್ಚುವಂತಹ ಅತ್ಯಾಧುನಿಕ ಉಪಕರಣಗಳನ್ನು ಕಾಣಬಹುದಾಗಿದೆ.
ಕ್ಲಿನಿಕ್‌ನಲ್ಲಿ ಸಿಗುವ ಸೇವೆ:
20 ವಿಶೇಷ ವೈದ್ಯರ ಕ್ಯಾಬಿನ್
ಮಾನಿಟರ್‌ಗಳ ಮೂಲಕ ವಿಡಿಯೋ ಸಮಾಲೋಚನಾ ಸೌಲಭ್ಯ
ವೈದ್ಯರ ಪರದೆಗೆ ವೈದ್ಯಕೀಯ ಸಾಧನಗಳ ನೇರ ಸ್ಟ್ರೀಮಿಂಗ್
ಆನ್‌ಲೈನ್ ಸಮಾಲೋಚನೆ, ತಪಾಸಣೆ ಮತ್ತು ಚಿಕಿತ್ಸೆ
ಡಿಜಿಟಲ್ ಪ್ರಿಸ್ಕ್ರಿಪ್ಷನ್ ಪ್ಯಾಡ್
ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸದ್ಯ 10 ಜನ ವೈದ್ಯ ತಜ್ಞರು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವೈದ್ಯರನ್ನು ನೇಮಿಸಲಾಗುತ್ತದೆ. ಅಲ್ಲದೆ, ಸ್ಮಾರ್ಟ್ ಸಿಟಿ ಯೋಜನೆಯಡಿ ಹೆಚ್ಚಿನ ಅನುದಾನದೊರೆತಲ್ಲಿ ನಗರದ ಇನ್ನಿತರೆ ಪ್ರದೇಶಗಳಲ್ಲಿ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್ ಪ್ರಾರಂಭಿಸಲಾಗುತ್ತದೆ. – ಡಾ. ಕೆ.ವಿ. ತ್ರಿಲೋಕ್‌ಚಂದ್ರ, ವಿಶೇಷ ಆಯುಕ್ತರು(ಆರೋಗ್ಯ), ಬಿಬಿಎಂಪಿ
ತುಂಬಾ ಕೂದಲು ಉದುರುವ ಸಮಸ್ಯೆಯಿಂದ ಸುಮಾರು 3 ತಿಂಗಳುಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೆ. ಹಣ ಖರ್ಚಾಗುತ್ತಿತೇ¤ ಹೊರತು, ಕೂದಲು ಸಮಸ್ಯೆ ಕಡಿಮೆಯಾಗಲಿಲ್ಲ. ನಂತರ ಸುಬೇರ್‌ಪಾಳ್ಯದಲ್ಲಿನ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ನಲ್ಲಿ ಚಿಕಿತ್ಸೆ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಆನ್‌ಲೈನ್ ಮೂಲಕ ಸಮಾಲೋಚನೆ ನಡೆಸಿ ಶಾಂಪೂ, ಮೆಡಿಸಿನ್ ನೀಡಿದರು. ಈಗ ಕೂದಲು ಉದುರುವುದು ಕಡಿಮೆಯಾಗಿದೆ. ಬೆಳವಣಿಗೆಯೂ ಉತ್ತಮವಾಗಿದೆ. – ಎಂ.ಕೆ.ಮನು, ಪೀಣ್ಯ ನಿವಾಸಿ
ಚರ್ಮರೋಗದ ಅಲರ್ಜಿಯಿಂದಾಗಿ ಅಡುಗೆ ಮಾಡುವಾಗ ಯಾವುದೇ ಬಿಸಿ ವಸ್ತುಗಳನ್ನು ಮುಟ್ಟಲುಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಅನೇಕ ವೈದ್ಯರ ಬಳಿ ಚಿಕಿತ್ಸೆ ಪಡೆದರೂ, ಪ್ರಯೋಜನವಾಗಿಲ್ಲ. ತದನಂತರ ಅಜಾದ್ ನಗರದಲ್ಲಿನ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ನಲ್ಲಿ ಸುಮಾರು ವಾರದಿಂದ ಚರ್ಮರೋಗ ತಜ್ಞರ ಬಳಿ ಚಿಕಿತ್ಸೆ ಪಡೆಯುತ್ತಿದ್ದೇನೆ.ಈ ಕ್ಲಿನಿಕ್‌ನಲ್ಲಿ ವೈದ್ಯರು ಸ್ನೇಹಮಯವಾಗಿದ್ದು, ಆನ್‌ಲೈನ್ ಮೂಲಕ ಕಾಯಿಲೆಗೆಕಾರಣವೇನು? ಯಾವುದರಿಂದ ಅಲರ್ಜಿ ಆಗುತ್ತದೆ ಎಂದು ತುಂಬಾ ಚೆನ್ನಾಗಿ ಮನವರಿಕೆಮಾಡಿಸುತ್ತಾರೆ. ಅವರು ನೀಡಿದ ಔಷಧಗಳಿಂದಾಗಿ ಈಗಾಗಲೇ ಸುಮಾರು ಶೇ.80ರಷ್ಟು ಅಲರ್ಜಿ ಕಡಿಮೆಯಾಗಿದೆ. ಈ ಕ್ಲಿನಿಕ್‌ಗಳು ಬಡಜನರು ಸೇರಿದಂತೆ ಎಲ್ಲರಿಗೂ ಉತ್ತಮವಾಗಿವೆ. – ಪಿ.ಎನ್. ನಿವೇದಿತಾ, ಶ್ರೀನಗರ ನಿವಾಸಿ
– ಭಾರತಿ ಸಜ್ಜನ್